ಬೇರೆ ರಾಜ್ಯದ ಮಹಿಳೆಯರ ರಕ್ಷಣೆ| ಧಾರವಾಡದ ಚೆನ್ನಬಸವೇಶ್ವರ ನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆ| ಸಿಸಿಬಿ ಪೊಲೀಸರ ಕಾರ್ಯಾಚರಣೆ| 

ಧಾರವಾಡ(ಮಾ.27): ನಗರದಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆಯನ್ನು ಬಯಲು ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರೇಟಿನ ಸಿಸಿಬಿ ತಂಡ ಯಶಸ್ವಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧಾರವಾಡದ ಮಗದುಮ್‌ ಕಲ್ಯಾಣ ಮಂಟಪದ ಹಿಂಭಾಗದ ಸಿಬಿ ನಗರವೆಂದು ಕರೆಯಲ್ಪಡುವ ಚೆನ್ನಬಸವೇಶ್ವರ ನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ನಾಲ್ಕು ಬೇರೆ ರಾಜ್ಯದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರು ಪುರುಷರು ಸೇರಿ ಐವರನ್ನು ಬಂಧಿಸಲಾಗಿದೆ.

ಕಾಮಾಠೀಪುರ : ವೇಶ್ಯೆಯರು ಹೊರಟಿದ್ದಾರೆ ಬಟ್ಟೆ, ತರಕಾರಿ, ಚಹಾ ಮಾರಾಟದತ್ತ!

ಶುಕ್ರವಾರ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸ್‌ ಇನ್ಸಪೆಕ್ಟರ್‌ ಭರತ ರೆಡ್ಡಿ, ಅಲ್ತಾಫ ಮುಲ್ಲಾ ತಂಡ ದಂಧೆಯನ್ನ ಬಯಲಿಗೇಳಿಯುವಲ್ಲಿ ಯಶಸ್ವಿಯಾಗಿದ್ದು, ರಕ್ಷಣೆ ಮಾಡಿದ ಯುವತಿಯರು ಹಾಗೂ ದಂಧೆಯಲ್ಲಿ ಭಾಗಿಯಾಗಿದ್ದ ಪಿಂಪ್‌ ಮತ್ತು ಪುರುಷರನ್ನು ಉಪನಗರ ಠಾಣೆಗೆ ಒಪ್ಪಿಸಲಾಗಿದೆ.