ನಗರದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶಿವಮೊಗ್ಗದ ಪ್ರಖ್ಯಾತ ಉದ್ಯಮಿ ಶರತ್ ಭೂಪಾಳಂ (45) ಸಾವನ್ನಪ್ಪಿದ್ದಾರೆ.

ಶಿವಮೊಗ್ಗ (ಜ.08): ನಗರದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶಿವಮೊಗ್ಗದ ಪ್ರಖ್ಯಾತ ಉದ್ಯಮಿ ಶರತ್ ಭೂಪಾಳಂ (45) ಸಾವನ್ನಪ್ಪಿದ್ದಾರೆ. ವಿದ್ಯುತ್ ಅವಘಡ ಸಂಭವಿಸಿದ ಹಿನ್ನೆಲೆ ಮನೆಯಲ್ಲಿ ಮಲಗಿದ್ದವರನ್ನು ಹೊರಗೆ ಕರೆತಂದು ಬಿಟ್ಟು ಪುನಃ ಮನೆ ಒಳಗೆ ಶರತ್ ಹೋಗಿದ್ದರು. ಈ ಸಂದರ್ಭದಲ್ಲಿ ಉಸಿರುಗಟ್ಟಿ ಸಾವನಪ್ಪಿರುವ ಸಾಧ್ಯತೆಯಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸದ್ಯ ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಟ್ಟು ಕರಕಲಾದ ಬಸ್‌; ಪ್ರಯಾಣಿಕರು ಪಾರು: ಸಾತಾರಾದಿಂದ ಬೆಳಗಾವಿಯತ್ತ ಹೊರಟ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನ ಎಂಜಿನ್‌ನಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದ ಬೆಂಕಿ ತಗುಲಿ ಇಡೀ ಬಸ್‌ ಸುಟ್ಟು ಕರಕಲಾದ ಘಟನೆ ಗುರುವಾರ ಸಮೀಪದ ಹಿಡಕಲ್‌ ಡ್ಯಾಂ ಕ್ರಾಸ್‌ ಬಳಿ ಇರುವ ಗುಲಾಬ್‌ ಶಾ ದರ್ಗಾ ಬಳಿ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ರೋಲ್ಡ್‌ಗೋಲ್ಡ್‌ ಎಂದು ಕಸದ ಗುಡ್ಡೆಗೆ ಅಸಲಿ ಚಿನ್ನ ಎಸೆದ ಕಳ್ಳ!

ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ 7 ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕರ ಮುಂಜಾಗ್ರತೆಯಿಂದ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಮಹಾರಾಷ್ಟ್ರದ ಸಾತಾರಾದಿಂದ ಹೊರಟ ಬಸ್ಸು ಬೆಳಗಾವಿಯತ್ತ ಸಾಗುತ್ತಿರುವಾಗ ಬಸ್ಸಿನ ಎಂಜಿನ್‌ ಹೆಚ್ಚು ಬಿಸಿ ಆಗುತ್ತಿತ್ತು. ಮೇಲಿಂದ ಮೇಲೆ ಚಾಲಕ ರೇಡಿಯೇಟರ್‌ಗೆ ನೀರು ಹಾಕುತ್ತ ಸಾಗುತ್ತಿದ್ದರು. ಗುಲಾಬ್‌ ಶಾ ದರ್ಗಾ ಬಳಿ ಬರುತ್ತಿದಂತೆ ಬಸ್‌ನ ಎಂಜಿನ್‌ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಆವರಿಸಿತು. ತಕ್ಷಣ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರಿಗೆಲ್ಲ ಕೆಳಗಿಳಿಯುವಂತೆ ಸೂಚಿಸಿದರು. ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ಕೆಳಗಿಳಿದು ಬಸ್‌ನಿಂದ ದೂರ ಓಡುತ್ತಿದ್ದಂತೆ ಇಡೀ ಬಸ್‌ಗೆ ಬೆಂಕಿ ತಗುಲಿತು ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.

ಬಸ್‌ ಸಂಕೇಶ್ವರ ಘಟಕಕ್ಕೆ ಸೇರಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಘಟಕದ ವ್ಯವಸ್ಥಾಪಕಿ ವೀಣಾ ಡಾಂಗೆ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಪೋಲಿಸರು ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಅವಘಡಕ್ಕೆ ಒಳಗಾದ ಬಸ್‌ ಚಾಲಕ ಗುರುಲಿಂಗಪ್ಪ ಹೂಗಾರ ಹಾಗೂ ನಿರ್ವಾಹಕ ಶ್ರೀಧರ ಪಾವಲೆ ಸ್ಥಳದಲ್ಲಿದ್ದರು.

ಎನ್‌ಪಿಎಸ್‌ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದು ವಿದ್ಯಾರ್ಥಿ: ತಮಾಷೆಗೆ ಇ-ಮೇಲ್‌ ಮಾಡಿದ ಅಪ್ರಾಪ್ತ

ಸದಾಶಿವಗಡ ಗುಡ್ಡದಲ್ಲಿ ಅಗ್ನಿ ಅವಘಡ: ಕಾರವಾರ ತಾಲೂಕಿನ ಸದಾಶಿವಗಡದ ಗುಡ್ಡದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಗುಡ್ಡದಲ್ಲಿನ ಗಿಡಗಳಿಗೆ ಬೆಂಕಿ ವ್ಯಾಪಿಸಿದೆ. ಗುಡ್ಡಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ವಾಹನ ಸವಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಗುಡ್ಡಕ್ಕೆ ಬೆಂಕಿ ತಗುಲಿತ್ತು.