ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಸ್ಯಾಂಡಲ್ ವುಡ್ ಸಿನಿಮಾ ನಟ ಪ್ರಥಮ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕಾರಣ ಇಲ್ಲಿದೆ..

ಬೆಂಗಳೂರು (ಆ.18): ಫೇಸ್‌ಬುಕ್‌ನಲ್ಲಿ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಮುಂದಿಟ್ಟು ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಬರಹ ಪೋಸ್ಟ್‌ ಮಾಡಿದ ಆರೋಪದ ಮೇರೆಗೆ ಬಿಗ್‌ ಬಾಸ್‌ ಖ್ಯಾತಿಯ ಪ್ರಥಮ್‌ ಮೇಲೆ ಹಲಸೂರು ಗೇಟ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಘನಾ ರಾಜ್ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಥಮ್, ಸಿದ್ದು ಸೊಸೆ

 ಗಲಭೆಯ ಆರೋಪಿಗಳ ಕುಟುಂಬದ ಸದಸ್ಯರು ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ ಪ್ರಥಮ್‌ ಪೋಸ್ಟ್‌ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯ ಉಮರ್‌ ಫಾರೂಕ್‌ ನೀಡಿದ ದೂರು ನೀಡಿದ್ದರು. 

ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

ಅದರನ್ವಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೇರಿದಂತೆ ಇನ್ನಿತರ ಪರಿಚ್ಛೇದಗಳಡಿ ಪ್ರಥಮ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಿಚಾರಣೆಗೆ ಬರುವಂತೆ ಆರೋಪಿಗೆ ಶೀಘ್ರವೇ ನೋಟಿಸ್‌ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.