ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕೇಸ್‌: ನಾಗ್ಪುರ್‌ನಲ್ಲಿ ಎಫ್‌ಐಆರ್‌ ದಾಖಲು

ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌, ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507ರಡಿ ಪ್ರಕರಣ ದಾಖಲು. 

FIR in Nagpur Police Station about Life Threatening Call to Nitin Gadkari Case grg

ಬೆಳಗಾವಿ(ಜ.15):  ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕೇಸ್‌ಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಗ್ಪುರ್‌ನ ಧನತೋಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಧನತೋಲಿ ಪೊಲೀಸ್ ಠಾಣೆಗೆ ನಿತಿನ್ ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಅವರು ದೂರು ನೀಡಿದ್ದಾರೆ. ನಿನ್ನೆ ಬೆಳಗ್ಗೆ 11.29ಕ್ಕೆ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ನಾನು ದಾವೂದ್ ಗ್ಯಾಂಗ್‌ನಿಂದ ಮಾತನಾಡುತ್ತಿದ್ದೇನೆ, ಗಡ್ಕರಿಜಿಗೆ ಹೇಳಿ 100 ಕೋಟಿ ರೂಪಾಯಿ ನಗದು ಕಳುಹಿಸಿ, ಇಲ್ಲವಾದ್ರೇ ಗಡ್ಕರಿ ಎಲ್ಲಿ ಸಿಗ್ತಾರೋ ಅಲ್ಲಿ ಬಾಂಬ್ ಸ್ಫೋಟಿಸಿ ಸಾಯಿಸುತ್ತೇವೆ. ನನಗೆ ಅವರ ಕಚೇರಿ ಗೊತ್ತು ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದ, ಹಣ ಎಲ್ಲಿಗೆ ಕಳುಹಿಸಬೇಕೆಂದು ವಿಚಾರಿಸಿದಾಗ ಕರ್ನಾಟಕದ ಬೆಂಗಳೂರಿಗೆ ಕಳುಹಿಸಿ ಎಂದು ಪೋನ್ ಕಟ್ ಮಾಡಿದ್ದನು. 

ಹೆಂಡ್ತಿಗೆ ಕರೆ ಮಾಡ್ತೀನಿ ಅಂತ ಮೊಬೈಲ್ ಪಡೆದು ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಹಾಕಿದ

ಈ ವಿಚಾರವನ್ನ ಸಚಿವ ಗಡ್ಕರಿ ಅವರ ಗನ್ ಮ್ಯಾನ್ ದೀಪಕ್‌ಗೆ ಮಾಹಿತಿನ್ನ ತಿಳಿಸಲಾಗಿತ್ತು. ಬಳಿಕ 11.37ಕ್ಕೆ ಮತ್ತೊಮ್ಮೆ ಕರೆ ಮಾಡಿ ಗಡ್ಕರಿಗೆ ನಾನು ಮೊಬೈಲ್ ನಂಬರ್ ಕೊಡ್ತೇನಿ ಅವರಿಗೆ ಕಾಂಟ್ಯಾಕ್ಟ್ ಮಾಡಲು ಹೇಳಿದ್ದನು. ಆರೋಪಿ ಈ 8139923258 ನಂಬರ್ ನೀಡಿದ್ದ ಕರೆ ಮಾಡಿದ್ದನು.  ಈ ವಿಚಾರ ಪೊಲೀಸರಿಗೆ ತಿಳಿಸಿದ್ರೇ ನಿಮ್ಮ ಕಚೇರಿ ಸ್ಫೋಟಿಸುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದ.  ಬಳಿಕ 12.29ಕ್ಕೆ ಮತ್ತೊಮ್ಮೆ ಕರೆ ಮಾಡಿದ್ದ ಆರೋಪಿ ನನ್ನ ಮೆಸೇಜ್ ನ್ನ ಗಡ್ಕರಿ ಅವರಿಗೆ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದ, ಆಗ ಉತ್ತರಿಸಿದ್ದ ಸಿಬ್ಬಂದಿ ಸಾಹೇಬರು ಬಿಜಿ ಇದ್ದಾರೆ ಅಂತ ಹೇಳಿದ್ದರು. 

ನಿನ್ನ ಹೆಸರು, ವಿಳಾಸ ತಿಳಿಸು ಎಂದು ಕೇಳಿದಾಗ ನೀವು ಕ್ಯಾಶ್ ಕರ್ನಾಟಕಕ್ಕೆ ಕಳುಹಿಸಿ ಅಲ್ಲಿಂದ ಹೇಳ್ತೆವಿ ಎಂದಿದ್ದ ಕೈದಿ, ಈ ಎಲ್ಲ ವಿವರ ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507ರಡಿ ಪ್ರಕರಣ ದಾಖಲಾಗಿದೆ. 

Latest Videos
Follow Us:
Download App:
  • android
  • ios