* ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಮಾಡಿದ ಪೊಲೀಸರು* ನಿರ್ಮಾಪಕ ಸೇರಿ ಇನ್ನಿಬ್ಬರ ಬಂಧಣ* ಚಲನಚಿತ್ರದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ವಂಚನೆ

ಮುಂಬೈ ( ಜು. 20) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ಮಾರುಕಟ್ಟೆ ಆರೋಪದ ಮೇಲೆ ಬಂಧಿಸಿದ್ದು ಒಂದು ಕಡೆಯಾಗಿದ್ದರೆ ಇನ್ನೊಂದು ಕಡೆ ಮುಂಬೈ ಪೊಲೀಸರು ವೇಶ್ಯಾವಾಟಿಕೆ ಜಾಲವೊಂದನ್ನು ಪತ್ತೆ ಮಾಡಿದ್ದಾರೆ.

ವೇಶ್ಯಾವಾಟಿಕೆ ದಂಧೆ ನಡೆಸಿದ ಆರೋಪದ ನಿರ್ಮಾಪಕ ಸೇರಿ ಇನ್ನಿಬ್ಬರನ್ನು ಬಂಧಿಸಲಾಗಿದೆ. ತನ್ನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಮಹಿಳೆಯರನ್ನು ದಂಧೆಗೆ ದೂಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಡಾ.ಮಹೇಶ್ ಪಾಟೀಲ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೇಶ್ಯಾವಾಟಿಕೆ ಕಿಂಗ್ ಪಿನ್ ತೃತೀಯ ಲಿಂಗಿ

ಹಲವಾರು ವರ್ಷಗಳಿಂದ ಮೀರಾ ರಸ್ತೆಯ ವಸತಿ ಸಮುಚ್ಚಯದಿಂದ ಈ ದಂಧೆ ನಡೆಯುತ್ತಿದೆ ಎಂಬ ಮಾಹಿತಿಗಳು ಇದ್ದವು. ಮುಖ್ಯ ಆರೋಪಿ ಖಾನಯಲಾಲ್ ಬಾಲ್ಚಂದಾನಿಗೆ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದ ವನಿತಾ ಇಂಗಲ್ ಕೆಲಸ ಮಾಡುತ್ತಿದ್ದಳು.

ಗ್ರಾಹಕರ ಸೋಗಿನಲ್ಲಿ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಬಂಧಿತ ಮೂವರ ವಿರುದ್ಧ ಮೀರಾ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.