Chitradurga: ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ

ಒಂದು ಊರು ಅಂದ ಮೇಲೆ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಂತೆ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಈ ಒಂದು ಗ್ರಾಮದಲ್ಲಿ ಕೇವಲ ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಎರಡು ಸಮುದಾಯಗಳ‌ ನಡುವೆ ಘರ್ಷಣೆ ಆಗಿರೋ ಘಟನೆ ಬೆಳಕಿಗೆ ಬಂದಿದೆ. 

fights between two communities at chitradurga district gvd

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.04): ಒಂದು ಊರು ಅಂದ ಮೇಲೆ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಂತೆ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಈ ಒಂದು ಗ್ರಾಮದಲ್ಲಿ ಕೇವಲ ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಎರಡು ಸಮುದಾಯಗಳ‌ ನಡುವೆ ಘರ್ಷಣೆ ಆಗಿರೋ ಘಟನೆ ಬೆಳಕಿಗೆ ಬಂದಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಖಾಕಿ ಪಡೆ ಆಯಿತೋಳು ಗ್ರಾಮದಲ್ಲಿಯೇ ಬೀಡು ಬಿಟ್ಟಿದೆ. ಆ ಕುರಿತಾದ ವರದಿ ಇಲ್ಲಿದೆ.

ತಲೆಗೆ ಬ್ಯಾಂಡೇಜ್ ಹಾಕಿಸಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ. ಮತ್ತೊಂದೆಡೆ ಗ್ರಾಮದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಅಲರ್ಟ್ ಆಗಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ಆಯಿತೋಳು ಗ್ರಾಮದಲ್ಲಿ. ಕಳೆದ ಎರಡು ದಿನಗಳ ಹಿಂದಷ್ಟೇ ಆಯಿತೋಳು ಗ್ರಾಮದಲ್ಲಿ ದಲಿತ ಯುವಕ ರವಿ ಎಂಬ ಯುವಕ ರಸ್ತೆಯಲ್ಲಿ ನಿಂತಿದ್ದಾಗ ಅದೇ ಗ್ರಾಮದ ಗೊಲ್ಲ ಸಮುದಾಯದ ಯುವಕ ಹರೀಶ್‌ ಎಂಬುವವನಿಗೆ ಜಾತಿ ನಿಂದನೆ ಮಾಡಿದ್ದಾನೆ ಎಂದು ರವಿ ಆರೋಪಿಸಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವಾಗಿದೆ. 

ರಾಹುಲ್ ಆಗಮನದ ವೇಳೆ ತಾರತಮ್ಯ :ಕಾಂಗ್ರೆಸ್ ಕಚೇರಿಗೆ ಬೀಗ ಜಡಿದು ಕಾರ್ಯಕರ್ತರ ಪ್ರತಿಭಟನೆ

ಅದು ಮುಂದುವರೆದು ಇಡೀ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ರವಿ ಎಂಬಾತನಿಗೆ ಹರೀಶ್ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮ್ಮ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದ್ರೆ ಇತ್ತೀಚಿಗೆ ಸುಖಾ ಸುಮ್ಮನೆ ಜಗಳಗಳು ಆಗುತ್ತಿವೆ. ಈಗ ನಮ್ಮ ಸಮುದಾಯಕ್ಕೆ ಹಾಗೂ ನನಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಆಗ್ರಹಿಸಿದ್ದಾರೆ. ಇನ್ನೂ ಎರಡು ಸಮುದಾಯಗಳ ನಡುವಿನ ಈ ಘರ್ಷಣೆ ಕುರಿತು ಎಸ್ಪಿ ಅವರನ್ನೇ ವಿಚಾರಿಸಿದರೆ, ಈ ಘಟನೆಯು ಪರಿಶಿಷ್ಟ ಜಾತಿ ಹಾಗೂ ಗೊಲ್ಲ ಸಮುದಾಯದ ಎರಡು ಗುಂಪಿನ ಯುವಕರ ನಡುವೆ ಗಲಾಟೆ ಶುರುವಾಗಿದೆ. 

ದಲಿತ ಕೇರಿಯ ಮೂಲಕವೇ ಗೊಲ್ಲ ಸಮುದಾಯ ಜನರು ಓಡಾಡಬೇಕು. ಆದರೆ ಅಂದು ರವಿ ಎಂಬಾತ ರಸ್ತೆಯಲ್ಲಿ ಅಡ್ಡಲಾಗಿ ನಿಂತಾಗ, ಹರೀಶ್ ಎಂಬಾತ ಎತ್ತಿನ‌‌ ಗಾಡಿಯನ್ನು ಚಲಾಯಿಸಿಕೊಂಡು ಬರುವಾಗ ರಸ್ತೆ ಬಿಡುವಂತೆ ಹೇಳಿದ್ದಾನೆ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಘರ್ಷಣೆ ಶುರುವಾಗಿದೆ. ಹರೀಶನು ರವಿಗೆ ಬಾರುಕೋಲಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲಿಯೇ ಇದ್ದ ರವಿಯ ಸಂಬಂಧಿ ಮಹಿಳೆಯ ಪ್ರಶ್ನೆ ಮಾಡಿದ್ದಕ್ಕೆ ಆಕೆಯ‌ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವಿ ಹಾಗೂ ಕೆಲ ಯುವಕರು ಹರೀಶನ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. 

ಹೀಗೆ ಇಬ್ಬರು ಯುವಕರ ನಡುವೆ ಶುರುವಾದ ಗಲಾಟೆ ಎರಡು ಸಮುದಾಯದ ಘರ್ಷಣೆಗೆ ಕಾರಣವಾಗಿದೆ. ಸದ್ಯ ಈ ಘಟನೆಯಲ್ಲಿ ಕೇಸ್ ಅಂಡ್ ಕೌಂಟರ್ ಕೇಸ್ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಯುವಕನ ಅಟ್ರಾಸಿಟಿ ಕೇಸ್‌ನ ಆಧಾರದ ಮೇಲೆ 30ಕ್ಕೂ ಅಧಿಕ ಜನರನ್ನು ದಸ್ತಗಿರಿ ಮಾಡಲಾಗಿದೆ. ಮತ್ತೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಕಳಪೆ ಮೊಟ್ಟೆ, ಬಾಳೆಹಣ್ಣು ಕೊಟ್ಟರೆ ಶಿಸ್ತು ಕ್ರಮ: ಶಾಸಕ ತಿಪ್ಪಾರೆಡ್ಡಿ ಎಚ್ಚರಿಕೆ

ಆ ಗ್ರಾಮಕ್ಕೆ ತೆರಳಿ ಜಿಲ್ಲಾಡಳಿತದ ಜೊತೆ ಸೇರಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗ್ರಾಮದಲ್ಲಿ ಶಾಂತಿ ಕಾಪಡಲಾಗುವುದು ಎಂದು ತಿಳಿಸಿದರು. ಒಟ್ಟಾರೆಯಾಗಿ ತಂತ್ರಜ್ಞಾನ, ಶಿಕ್ಷಣ ಮುಂದುವರೆದಂತೆ ಜಾತೀಯತೆ ಹೋಗಲಾಡಿಸಬಹುದು ಎಂದು ತಿಳಿದವರು ಹೇಳುತ್ತಾರೆ. ಆದರೆ ಇಂತಹ ಕಾಲದಲ್ಲಿಯೂ ಜಾತಿ ಜಾತಿಗಳ ಹೆಸರಲ್ಲಿ ಜನರು ಕಿತ್ತಾಟ ನಡೆಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಆ ಗ್ರಾಮಕ್ಕೆ ಭೇಟಿ ಕೊಟ್ಟು ಆ ಜನರಿಗೆ ಸಾಮಾನತೆಯ ನೀತಿ ಪಾಠ ಬೋಧಿಸಬೇಕಿದೆ.

Latest Videos
Follow Us:
Download App:
  • android
  • ios