* ಸಿನಿಮಾ ಚಿತ್ರೀಕರಣದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ವ್ಯಕ್ತಿ ಸಾವು* ಚಿತ್ರೀಕರಣ ವೇಳೆ ವಿದ್ಯುತ್ ಅವಘಡ ದಿಂದ ಸಾವು* ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ಘಟನೆ* ದುರಂತದ ಬಗ್ಗೆ ನಟ ಅಜಯ್ ರಾವ್ ಪ್ರತಿಕ್ರಿಯೆ
ರಾಮನಗರ(ಆ. 09) ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ.. ಎಚ್ಚರಿಕೆ ತೆಗೆದುಕೊಳ್ಳಲು ಮೊದಲೇ ಹೇಳಿದ್ದೆ ಎಂದು ನಟ ಅಜಯ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆ ನಡೆಯುವ ವೇಳೆ ನಾನು ಅಲ್ಲಿ ಇರಲಿಲ್ಲ..ಯಾವ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವುದು ಗೊತ್ತಿಲ್ಲ.. ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕೆಲವು ಪ್ಯಾಚ್ ವರ್ಕ್ ಶೂಟಿಂಗ್ ಕೆಲಸಗಳು ಬಾಕಿ ಇದ್ದವು. ನಾಲ್ಕು ದಿನದಿಂದ ಫೈಟ್ ಸಿಕ್ವೆನ್ಸ್ ನಡೆಯುತ್ತಿತ್ತು. ನಾನು ದೂರದಲ್ಲಿ ಕುಳಿತುಕೊಂಡಾಗ ಶಬ್ದ ಕೇಳಿದೆ. ನಾನು ಕೆಳಗೆ ಬಂದು ನೋಡಿದಾಗ ವಿವೇಕ್ ಎಂಬುವರನ್ನು ಕರೆದುಕೊಂಡು ಹೋದರು. ಆತನ ಬಾಯಿಂದ ರಕ್ತ ಸುರಿಯುತ್ತಿತ್ತು ಎಂದಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಘೋರ ದುರಂತ, ವಿದ್ಯುತ್ ಶಾಕ್ ಗೆ ಫೈಟರ್ ಬಲಿ
ಘಟನೆಯಲ್ಲಿ ವಿವೇಕ್ ಎಂಬುವರು ಮೃತಪಟ್ಟಿದ್ದರೆ.. ರಂಜಿತ್ ಎನ್ನುವರು ಗಂಭೀರ ಗಾಯಗೊಂಡಿದ್ದಾರೆ. ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ವೇಳೆ ಅವಘಡ ಸಂಭವಿಸಿದೆ ಎಂದಿದ್ದಾರೆ.
ಜೀವ ಕಳೆದುಕೊಂಡ ವ್ಯಕ್ತಿಗೆ ನ್ಯಾಯ ನೀಡಬೇಕಾಗಿದೆ. ಹೈ ಟೆನ್ಶನ್ ವೈರ್ ಹೋಗಿರುವ ಜಾಗದಲ್ಲಿ ಸೀನ್ ಹಾಕಿಕೊಂಡಿದ್ದು ಅವಘಡಕ್ಕೆ ಕಾರಣವಾಗಿದೆ ಎಂದಿದ್ದಾರೆ.
