Asianet Suvarna News Asianet Suvarna News

ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ; ಸಿನಿಮಾ ಸ್ಟೈಲ್‌ನಲ್ಲಿ ಕಲ್ಲು ದೊಣ್ಣೆ ಹಿಡಿದು ಹೊಡೆದಾಡಿಕೊಂಡ ಗ್ರಾಮಸ್ಥರು!

ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಮಾರಾಮಾರಿ ನಡೆದು ಎರಡೂ ಕಡೆಯ ಸುಮಾರು ಏಳೆಂಟು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಇಂದ್ರಾನಗರ ಗ್ರಾಮದಲ್ಲಿ ನಡೆದಿದೆ. ಗಲಾಟೆ ಮಾರನೇ ದಿನ ಒಂದು ಗ್ರಾಮದ ಯುವಕರಿಂದ ಮತ್ತೊಂದು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ಹಲ್ಲೆ..

Fight between two villages over a trivial cause in ballari Many are injured rav
Author
First Published Dec 4, 2023, 11:15 AM IST

!ಬಳ್ಳಾರಿ (ಡಿ.4): ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಮಾರಾಮಾರಿ ನಡೆದು ಎರಡೂ ಕಡೆಯ ಸುಮಾರು ಏಳೆಂಟು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಇಂದ್ರಾನಗರ ಗ್ರಾಮದಲ್ಲಿ ನಡೆದಿದೆ. ಗಲಾಟೆ ಮಾರನೇ ದಿನ ಒಂದು ಗ್ರಾಮದ ಯುವಕರಿಂದ ಮತ್ತೊಂದು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ಹಲ್ಲೆ..

ಕಳೆದ ಶನಿವಾರ ಇಂದಿರಾ ನಗರದಲ್ಲಿ ಗೌರಮ್ಮನ‌ ಹಬ್ಬದ ನಿಮಿತ್ತ ನಾಟಕ, ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಕೋಳೂರು ಗ್ರಾಮದ ಯುವಕರು ಬಂದು ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಇಂದಿರಾನಗರ ಗ್ರಾಮದ ಯುವಕ ಕೋಳೂರು ಗ್ರಾಮದ ಒಬ್ಬ ಯುವಕನಿಗೆ ಕೆನ್ನೆಗೆ ಹೊಡೆದು ಕಳಿಸಿದ್ದ ಇಂದಿರಾನಗರದ ಜನರು. ಆದರೆ ಘಟನೆ ನಡೆದ ಮರುದಿನ ಕೋಳೂರು ಗ್ರಾಮದ ಯುವಕರು ಇಂದಿರಾನಗರಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕೋಳೂರು ಗ್ರಾಮದ ಸುಮಾರು 40ಕ್ಕೂ ಹೆಚ್ಚು ಯುವಕರು ಕಲ್ಲು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಯಾದಗಿರಿ: ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಸೀಟಿಗಾಗಿ ಮಾರಾಮಾರಿ; ಪ್ರಯಾಣಿಸುತ್ತಲೇ ಬಡಿದಾಡಿಕೊಂಡ ಯುವಕರು!

ಸದ್ಯ ಇಂದಿರಾನಗರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ವಿರುದ್ದ ಕುರುಗೋಡು ಠಾಣೆಯಲ್ಲಿ ಎಫ್ಐಆರ್ ದಾಖಲು. ಆರೋಪಿಗಳನ್ನ ಬಂದಿಸುವಂತೆ ಇಂದ್ರಾ ನಗರದ ಜನರ ಒತ್ತಾಯಿಸಿದ್ದಾರೆ.👇🏻

Follow Us:
Download App:
  • android
  • ios