Asianet Suvarna News Asianet Suvarna News

ಪುಟ್ಟ ಮಗಳನ್ನು ಹೆಗಲ ಮೇಲೆ ಕುಳ್ಳಿರಿಸಿ ನಡೆಯುತ್ತಿದ್ದ ಅಪ್ಪನ ಮೇಲೆ ಗುಂಡಿನ ದಾಳಿ, ಭೀಕರ ದೃಶ್ಯ ಸೆರೆ!

ತನ್ನ ಪುಟ್ಟ ಮಗಳನ್ನು ಹೆಗಲಮೇಲೆ ಕುಳ್ಳಿರಿಸಿ ದಾರಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಅಪ್ಪನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಗಳೊಂದಿಗೆ ಸ್ಥಳದಲ್ಲೇ ಅಪ್ಪ ಕುಸಿದು ಬಿದ್ದಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Father walking with daughter on his shoulder shot down in Uttar Pradesh ckm
Author
First Published Aug 15, 2023, 12:34 PM IST | Last Updated Aug 15, 2023, 12:34 PM IST

ಲಖನೌ(ಆ.15) ಪುಟ್ಟ ಮಗಳನ್ನು ಹೆಗಲ ಮೇಲೆ ಕುಳ್ಳಿರಿಸಿ ಅಜ್ಜಿ ಮನೆಗೆ ಹೊರಟ ಅಪ್ಪನ ಮೇಲೆ ದುಷ್ಕರ್ಮಿಗಳು ಭೀಕರ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ಶಹಜಹನಪುರದಲ್ಲಿ ನಡೆದಿದೆ. ಯಾವುದರ ಅರಿವಿಲ್ಲದೆ ಮಗಳ ಜೊತೆ ಮಾತನಾಡುತ್ತಾ ದಾರಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಅಪ್ಪನ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

30 ವರ್ಷದ ವ್ಯಾಪಾರಿ ಶೋಯಿಬ್ ತನ್ನ ಪುಟ್ಟ ಮಗಳನ್ನು ಹೆಗಲಮೇಲೆ ಕೂರಿಸಿಕೊಂಡು ಶಹಜಹನಪುರದಲ್ಲಿರುವ ಅಜ್ಜಿಯ ಮನೆಗೆ ತೆರಳುತ್ತಿದ್ದ. ದಾರಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಶೋಯಿಬ್ ತನ್ನ ಮಗಳ ಜೊತೆ ಕತೆಗಳನ್ನು ಹೇಳುತ್ತಾ ಸಾಗುತ್ತಿದ್ದ. ಈ ದಾರಿಯಲ್ಲಿ ಜನ ಸಂಚಾರವೂ ಇತ್ತು. ವಾಹನಗಳು ಓಡಾಡುತ್ತಿತ್ತು. ಶೋಯಿಬ್‌ನ್ನು ಕಳೆದ ಕೆಲ ದಿನಗಳಿಂದ ಗಮನಿಸುತ್ತಿದ್ದ ದುಷ್ಕರ್ಮಿಗಳು, ಮನೆಯಿಂದ ಹೊರಬೆನ್ನಲ್ಲೇ ಮಾಹಿತಿ ರವಾನೆಯಾಗಿದೆ. 

ಹೆಂಡ್ತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌: ಅಸೂಯೆಯಿಂದ ಮಕ್ಕಳ ಎದುರೇ ಪತ್ನಿ ಕೊಂದ ಉದ್ಯಮಿ

ಮಗಳ ಜೊತೆ ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೆಲ ದೂರದಲ್ಲಿ ಒಬ್ಬ ಬೈಕ್‌ನಿಂದ ಇಳಿದಿದ್ದಾನೆ. ಇತ್ತ ಬೈಕರ್ಸ್ ಇದೇ ಶೋಯಿಬ್ ವಿರುದ್ಧ ದಿಕ್ಕಿನಿಂದ ಬಂದು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾರೆ. ಬೈಕ್‌ನಿಂದ ಮೊದಲೇ ಇಳಿದಿದ್ದ ದುಷ್ಕರ್ಮಿ, ಶೋಯೆಬ್ ನಡೆದುಕೊಂಡು ಬರುತ್ತಿದ್ದ ವಿರುದ್ಧ ದಿಕ್ಕಿನಿಂದ ಬಂದಿದ್ದಾನೆ. ಸಮೀಪಕ್ಕೆ ಬರುತ್ತಿದ್ದಂತೆ ರಿವಾಲ್ವರ್ ತೆಗೆದು ಹತ್ತಿರದಿಂದ ಗುಂಡಿನ ದಾಳಿ ನಡೆಸಿದ್ದಾನೆ.

ಹೆಗಲ ಮೇಲಿದ್ದ ಮಗಳೊಂದಿಗೆ ಅಪ್ಪ ಒಂದೇ ಸಮನೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಇತ್ತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೆಗಲ ಮೇಲಿದ್ದ ಮಗಳಿಗೆ ಗುಂಡಿನ ಗಾಯವಾಗಿಲ್ಲ. ಆದರೆ ಬಿದ್ಧ ರಭಸಕ್ಕೆ ರಸ್ತೆಗೆ ತಲೆ ತಾಗಿ ಗಾಯಗಳಾಗಿದೆ. ಕೆಲ ಹೊತ್ತು ಶೋಯೆಬ್ ನೆರವಾಗಿ ಯಾರು ಬಂದಿಲ್ಲ. ಬಳಿಕ ಪೊಲೀಸರು ಆಗಮಿಸಿ ಶೋಯಿಬ್‌ನ ಹಾಗೂ ಮಗಳನ್ನು ಆಸ್ಪತ್ರೆ ದಾಖಲಿಸಿದ್ದಾರೆ.

ನಂಬೋದು ಯಾರನ್ನಾ? ವೈದ್ಯ, ಕಾಂಪೌಂಡರ್‌ಗಳಿಂದಲೇ ನರ್ಸ್‌ ಮೇಲೆ ಅತ್ಯಾಚಾರವೆಸಗಿ ಕೊಲೆ

ಶೋಯಿಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಶೋಯಿಬ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಇತ್ತ ಮಗಳು ಚೇತರಿಸಿಕೊಂಡಿದ್ದಾರೆ. ಆಧರೆ ಭೀಕರ ದಾಳಿಯಿಂದ ಮಗಳು ಭಯಭೀತಗೊಂಡಿದ್ದಾಳೆ. ಈ ಪ್ರಕರಣ ಸಂಬಂದ ಪೊಲೀಸರು ಇಬ್ಬರು ಆರೋಪಿಗಳಾದ ಗುಫ್ರಾನ್ ಹಾಗೂ ನದೀಮ್‌ನನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಶೋಯಿಬ್ ಸಂಬಂಧಿಯಾಗಿದ್ದಾನೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿ ತನಿಖೆಯಲ್ಲಿ ಬಹಿರಂಗವಾಗಿದೆ. 

 

 

ಈ ಪ್ರಕರಣದ ಮೂರನೇ ಆರೋಪ ತಾರೀಕ್ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಈ ಘಟನೆಯನ್ನು ಗಂಬೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೀಗ ಮೂರನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ತಕ್ಷಣವೇ ಶರಣಾಗುವಂತೆ ಪೊಲೀಸರು ಸೂಚಚನೆ ನೀಡಿದ್ದಾರೆ. ಇತ್ತ ಆರೋಪಿಗಳ ಕುಟುಂಬಸ್ಥರಿಗೆ ಎನ್‌ಕೌಂಟರ್ ಭಯ ಕಾಡುತ್ತಿದೆ. 

Latest Videos
Follow Us:
Download App:
  • android
  • ios