ಚಿಕ್ಕಮಗಳೂರು(ಮೇ.27): ಮಗಳು ಸ್ನಾನ ಮಾಡುವಾಗ ತಂದೆಯೇ ಮೊಬೈಲ್‌ನಲ್ಲಿ ವಿಡಿಯೋ ಹಾಗೂ ಪೋಟೋ ತೆಗೆದು, ಲೈಂಗಿಕ ಕಿರುಕುಳ ನೀಡಿದ್ದರಿಂದ ಬೇಸತ್ತು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಹಲಸೂರಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ತಂದೆಯನ್ನು ಸೋಮವಾರ ಬಂಧಿಸಿದ್ದಾರೆ.

ಗ್ರಾಮದ 40 ವರ್ಷದ ವ್ಯಕ್ತಿಯೋರ್ವನ ಪತ್ನಿ 3 ತಿಂಗಳ ಹಿಂದೆ ಗಂಡನೊಂದಿಗೆ ಜಗಳವಾಗಿದ್ದರಿಂದ ಬೇರೆಡೆಗೆ ವಾಸವಾಗಿದ್ದರು. ವ್ಯಕ್ತಿಯ ಜತೆಗೆ 18 ವರ್ಷ ವಯಸ್ಸಿನ ಹಿರಿಯ ಮಗಳು ಹಾಗೂ ಇನ್ನೋರ್ವ ಬಾಲಕಿ ಮತ್ತು ಬಾಲಕ ವಾಸವಾಗಿದ್ದರು. ಹಿರಿಯ ಮಗಳು ಸ್ನಾನ ಮಾಡುವಾಗ ಮೊಬೈಲ್‌ನಲ್ಲಿ ವೀಡಿಯೋ ಮತ್ತು ಫೋಟೋ ತೆಗೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು: ಸಿ.ಟಿ.ರವಿ

ಇದರಿಂದ ಬೇಸರಗೊಂಡಿದ್ದ ಯುವತಿ ಮೇ 20ರಂದು ಈ ವಿಷಯವನ್ನು ತನ್ನ ಅತ್ತೆಗೆ ತಿಳಿಸಿದ್ದಳು. ಅಲ್ಲದೇ, ಅದೇ ದಿನ ವಿಷವನ್ನೂ ಸೇವಿಸಿದ್ದಳು. ಕೂಡಲೇ ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಹಿಳೆ ಮೃತಪಟ್ಟಿದ್ದಾಳೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.