ಫಾದರ್ಸ್ ಡೇ ದಿನವೇ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ಅಪ್ಪ
ವಿಶ್ವ ಅಪ್ಪಂದಿರ ದಿನವೇ ಇಲ್ಲೊಬ್ಬ ಅಪ್ಪ ತಾನೇ ಜನ್ಮಕೊಟ್ಟ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ (ಜೂ.18): ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಎಲ್ಲ ಮಕ್ಕಳು ಕೂಡ ತನ್ನ ಅಪ್ಪನೇ ತನಗೆ ಹೀರೋ ಎಂದು ಸಂತಸ ಪಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅಪ್ಪ ತಾನೇ ಜನ್ಮಕೊಟ್ಟ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಹೌದು, ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದು ಕೂಡ ಫಾದರ್ ಡೆ ದಿನವೇ ಈ ದುರ್ಘಟನೆ ನಡೆದಿದ್ದು, ಇಡೀ ಮನುಕುಲದ ಮನ ಕಲುಕುವಂತಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಪೋಚಾವರಂನಲ್ಲಿ ಘಟನ ನಡೆದಿದೆ. ತಾನು ಜನ್ಮ ನೀಡಿ ಕಷ್ಟಪಟ್ಟು ದುಡಿದು ಸಾಕಿದ್ದ ಮಕ್ಕಳು ಇನ್ನೇನು ತಮ್ಮಕಾಲಮೇಲೆ ನಿಲ್ಲುತ್ತಾರೆ ಎನ್ನುವ ಮುಂಚೆಯೇ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ನೀರು ತುಂಬಿದ್ದ ಬಾವಿಗೆ ಹಾರಿದ್ದಾನೆ. ಇನ್ನು ಬಾವಿ ನೀರಿನಲ್ಲಿ ಮುಳುಗಿ ಮೂವರೂ ಸಾವನ್ನಪ್ಪಿದ್ದಾರೆ.
Bengaluru: ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕರು
ಹೈದ್ರಾಬಾದ್‌ನಿಂದ ಬಂದು ಆತ್ಮಹತ್ಯೆಗೆ ಶರಣಾದ: ಮೃತ ತಂದೆಯನ್ನು ಹಣಮಂತ (36) ಹಾಗೂ ಮಕ್ಕಳಾದ ಅಕ್ಷತಾ (6) ಮತ್ತು ಓಕಾಂ (9) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಪತ್ನಿ ಮಕ್ಕಳೊಂದಿಗೆ ಹೈದ್ರಾಬಾದನಲ್ಲಿ ವಾಸಿಸುತ್ತಿದ್ದ ಹಣಮಂತ ನಿನ್ನೆ ಮಕ್ಕಳೊಂದಿಗೆ ಹೈದ್ರಾಬಾದನಿಂದ ಸ್ವಗ್ರಾಮಕ್ಕೆ ಬಂದಿದ್ದನು. ಗದೂರದ ಊರಿಗೆ ದುಡಿಯಲು ಹೋಗಿ ವಾಪಸ್ ಬಂದಿದ್ದರೂ ಆತನ ಮುಖದಲ್ಲಿ ಸಂತಸ ಇರಲಿಲ್ಲ. ನಿನ್ನೆಯಿಂದ ಸದಾ ಚಿಂತನೆಯಲ್ಲೇ ಮುಳುಗಿದ್ದ ಹಣಮಂತ ಇಂದು ಮಧ್ಯಾಹ್ನ ವೇಳೆ ಮಕ್ಕಳನ್ನು ತನ್ನೊಂದಿಗೆ ಕರೆದೊಕೊಂಡು ಹೋಗಿ, ಇಬ್ಬರಿಗೂ ಮೊದಲು ಹಗ್ಗ ಕಟ್ಟಿದ್ದಾನೆ. ಈ ವೇಳೆ ಅಪ್ಪ ಏನು ಮಾಡುತ್ತಿದ್ದಾನೆ ನಂತರ, ಇಬ್ಬರಿಗೂ ಕಟ್ಟಿದ್ದ ಹಗ್ಗವನ್ನು ತಾನೂ ಕಟ್ಟಿಕೊಂಡು ಬಾಯಿಗೆ ಜಿಗಿದಿದ್ದಾನೆ.
ಅಪ್ಪನ ಜೊತೆ ಖುಷಿಯಿಂದ ಹೋದ ಮಕ್ಕಳು ಮರಳಿ ಬರಲೇ ಇಲ್ಲ: ಹೈದರಾಬಾದ್‌ನಿಂದ ಬಂದಿದ್ದ ವ್ಯಕ್ತಿ ಮಕ್ಕಳನ್ನು ಕರೆದುಕೊಂಡು ಊರಿನ ಹೊರಗೆ ಹೋದವರು ಮರಳಿ ಬಾರಲೇ ಇಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಹಾಗೂ ಸಂಬಂಧಿಕರು ಫೋನಿಗೆ ಕರೆ ಮಾಡಿದ್ದಾರೆ. ಮೊಬೈಲ್ ಕೂಡ ಮನೆಯಲ್ಲಿಯೇ ಇದೆ. ಇನ್ನು ಊರಿನಲ್ಲಿ ಪರಿಚಯಸ್ಥರ ಎಲ್ಲರನ್ನೂ ವಿಚಾರಿಸಿದಾಗ ಮಕ್ಕಳನ್ನು ಊರಿನ ಹೊರಗೆ ಬಾವಿಯ ಬಳಿಗೆ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಬಾವಿಗೆ ಹೋಗಿ ನೋಡಿದಾಗ ತಂದೆ, ಇಬ್ಬರು ಮಕ್ಕಳು ಸೇರಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಪ್ರೀತಿ ಕೊಂದ ಪೋಷಕರು: ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ ಪ್ರೇಮಿಗಳು
ಮೀನು ಹಿಡಿಯಲು ಹೋಗಿ ನೀರುಪಾಲಾದ ಮಕ್ಕಳು: ಬೆಂಗಳೂರು (ಜೂ.18): ಶನಿವಾರ ಮಧ್ಯಾಹ್ನದ ನಂತರ ಶಾಲೆ ಬಿಟ್ಟ ಮೇಲೆ ಕೆರೆಯ ದಡದಲ್ಲಿ ಆಟವಾಡುತ್ತಾ ಮೀನು ಹಿಡಿಯಲು ಹೋಗಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಚಿಕ್ಕನಹಳ್ಳಿ ಅಮಾನಿಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಕಾರ್ತಿಕ್ (16), ಧನುಷ್ (15), ಮತ್ತು ಗುರುಪ್ರಸಾದ್ (6) ಸಾವನ್ನಪ್ಪಿದ ಬಾಲಕರು ಎಂದು ಗುರುತಿಸಲಾಗಿದೆ. ಮೀನು ಹಿಡಿಯಲು ಹೋಗಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಕೆರೆ ಬಳಿ ಹೋಗಿದ್ದ ಬಾಲಕರು ಮೀನು ಹಿಡಿಯಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.