Asianet Suvarna News Asianet Suvarna News

5 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ 20 ವರ್ಷ ಜೈಲು ಶಿಕ್ಷೆ

ಚಾಮರಾಜನಗರದಲ್ಲಿ ತನ್ನ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆಯನ್ನು ನೀಡಿ ಆದೇಶಿಸಿದೆ.

Father convicted to 20 years in prison for raping 5 year daughter sat
Author
First Published Nov 7, 2023, 4:20 PM IST

ಚಾಮರಾಜನಗರ (ನ.07): ಮನೆಯಲ್ಲಿ ಹೆಂಡತಿ ಹಾಗೂ ಇತರೆ ಮಕ್ಕಳಿಲ್ಲದ ವೇಳೆ ತನ್ನ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. 

ಮಹಿಳೆ ಹಾಗೂ ಹೆಣ್ಣು ಮಕ್ಕಳಿಗೆ ಮನೆಯೇ ಸುರಕ್ಷಿತವಾದ ಪ್ರದೇಶ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ, ಮನೆಯಲ್ಲಿಯೂ ಅತ್ಯಾಚಾರ ಹಾಗೂ ದೈಹಿಕ ಹಿಂಸೆಯಂತಹ ಕ್ರೌರ್ಯಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ 5 ವರ್ಷದ ಪುಟ್ಟ ಮಗುವಿನ ಮೇಲೆ ತನ್ನ ತಂದೆಯೇ ಅತ್ಯಾಚಾರ ಮಾಡಿದ ಪಾಪದ ಕಾರ್ಯ ಮಾಡಿದ್ದನು. ಈ ಬಗ್ಗೆ ನೊಂದ ಬಾಲಕಿಯ ತಾಯಿ ದೂರು ನೀಡಿದ್ದು, ನೀಚನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ ನಂತರ ತೀರ್ಪು ನೀಡಿದ ಮಕ್ಕಳ ಸ್ನೇಹಿ ಮತ್ತು 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರು ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಸಂತ್ರಸ್ತ ಬಾಲಕಿ ಜೀವನಕ್ಕೆ 6 ಲಕ್ಷ ರೂ. ಪರಿಹಾರ ಕೊಡುವಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಹಿಂದಿತ್ತು ಕೌಟುಂಬಿಕ ಕಲಹ: ಕಾರು ಚಾಲಕನ ಪೀಕಲಾಟಕ್ಕೆ ಅಧಿಕಾರಿ ಬಲಿ

ಸೈಯದ್ ಮುಜಾಮಿಲ್ (45) ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಮನೆಯಲ್ಲಿ ಹೆಂಡತಿ ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದ ಪಾಪಿ ತಂದೆ ಅತ್ಯಾಚಾರ ಎಸಗಿದ್ದಾನೆ. ಇನ್ನು ಬಾಲಕಿಯ ತಾಯಿಯು ಈಗಾಗಲೇ 2 ಮದುವೆಯನ್ನು ಆಗಿದ್ದು, ಅವರಿಂದ ತಲಾಖ್‌ ಪಡೆದು ಸೈಯದ್ ಮುಜಾಮಿಲ್‌ನನ್ನು 3ನೇ ಮದುವೆಯಾಗಿದ್ದಳು. ಆದರೆ, ಈ ಮಗಳು ತನ್ನ ಸ್ವಂತ ಮಗಳಲ್ಲ ಎಂಬ ವಿಕೃತ ಮನಸ್ಥಿತಿಯಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿಕ್ಕ ಮಗುವೆಂಬ ಕರುಣೆಯನ್ನೂ ತೋರದೇ ನೀಚ ಕೃತ್ಯವನ್ನು ಎಸಗಿದ್ದಾನೆ. 

ಈ ಘಟನೆಯನ್ನು ಕುರಿತಂತೆ ಚಾಮರಾಜನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ನಮ್ಮ ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ನೀಚ ಕ್ರೌರ್ಯವನ್ನು ತಡೆಯಲು ಕಠಿಣ ಶಿಕ್ಷಯಿರುವ ಕಾಯ್ದೆ ಜಾರಿಗೊಳಿಸಿದರೂ ಎಚ್ಚೆತ್ತುಕೊಳ್ಳದಂತಹ ನೀಚರಿಗೆ ದೊಡ್ಡ ಶಿಕ್ಷೆಯೇ ಆಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ದಂಡುಪಾಳ್ಯ ಗ್ಯಾಂಗ್‌ ಮಾದರಿಯಲ್ಲಿ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ!

Follow Us:
Download App:
  • android
  • ios