ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಹಿಂದಿತ್ತು ಕೌಟುಂಬಿಕ ಕಲಹ: ಕಾರು ಚಾಲಕನ ಪೀಕಲಾಟಕ್ಕೆ ಅಧಿಕಾರಿ ಬಲಿ
ಕೆಎಎಸ್ ಅಧಿಕಾರಿ ಪ್ರತಿಮಾ ಅವರನ್ನು ಅವರ ಕಾರು ಚಾಲಕನೇ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆಯ ಹಿಂದಿನ ರೋಚಕ ಕಥೆಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ನ.06): ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಕೆಎಎಸ್ ಅಧಿಕಾರಿ ಪ್ರತಿಮಾ ಅವರನ್ನು ಅವರ ಕಾರು ಚಾಲಕನೇ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆಯ ಹಿಂದಿನ ರೋಚಕ ಕಥೆಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್ 5ನೇ ತಾರೀಕು ಬೆಳಗ್ಗೆ 8-30 ಕ್ಕೆ ನಮಗೆ ಫೋನ್ ಬರುತ್ತದೆ. ಮರ್ಡರ್ ಆಗಿರೊ ಬಗ್ಗೆ ಫೋನ್ ಬಂದಾಗ ಎಸಿಪಿ ಪವನ್, ಇನ್ಸ್ ಪೆಕ್ಟರ್ ಜಗದೀಶ್ ಸ್ಥಳಕ್ಕೆ ಹೋಗ್ತಾರೆ. ಕೊಲೆಯಾದ ಪ್ರತಿಮಾ ಸಹೋದರ ಫೋನ್ ಮಾಡಿದರೂ ತೆಗೆಯದ ಬಗ್ಗೆ ಹೇಳಿದ್ದರು. ಪ್ರತಿಮಾ ಸರ್ಕಾರಿ ಅಧಿಕಾರಿಯಾಗಿದ್ದರು. ಎಸಿಪಿ ನೇತೃತ್ವದಲ್ಲಿ ಮೂರು ಟೀಂ ಗಳನ್ನ ರಚನೆ ಮಾಡಲಾಯ್ತು. ಈ ಬಗ್ಗೆ ವಿಚಾರಣೆ ಮಾಡಲಾಗಿ ಒಂದು ಕ್ಲೂ ಸಿಕ್ಕಿತ್ತು. ಈ ಹಿಂದೆ ಡ್ರೈವರ್ ಆಗಿ ಕೆಲಸ ಮಾಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.
ಬೆಂಗಳೂರು : ಸರ್ಕಾರಿ ಅಧಿಕಾರಿ ಪ್ರತಿಮಾ ಕಗ್ಗೊಲೆ ಪ್ರಕರಣ, ಆರೋಪಿ ಬಂಧನ, ದ್ವೇಷದಿಂದಲೇ ಆಯ್ತು ಕೊಲೆ
ಕೊಲೆಯ ಆರೋಪಿ ಪ್ರತಿಮಾ ಅವರ ಚಾಲಕನನ್ನು ನಿನ್ನೆ ಸಂಜೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಿ ಕರೆತರಲಾಗಿತ್ತು. ಆರೋಪಿ ಕೊಲೆ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಳೆದ ಎಂಟು ವರ್ಷಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡ್ರೈವರ್ ಆಗಿದ್ದನು. ಪ್ರತಿಮಾರಿಗೆ ಕಳೆದ 4 ವರ್ಷಗಳಿಂದ ಡ್ರೈವರ್ ಆಗಿದ್ದನು. ಕೆಲಸದಲ್ಲಿ ಅಷ್ಟೊಂದು ಸರಿಯಿಲ್ಲದ ಕಾರಣ ಬೈಸಿಕೊಳ್ತಿದ್ದನು. ಆದರೆ, ಒಂದು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಶನಿವಾರಕ್ಕೂ ಮೊದಲು ಒಂದು ದಿನ ಮನೆ ಬಳಿ ಬಂದಿದ್ದನು. ಆದರೆ, ಆವತ್ತು ಭೇಟಿ ಸಾಧ್ಯವಾಗಿರಲಿಲ್ಲ.
ಕೆಲಸ ಹೋಗಿದ್ದಕ್ಕೆ ಹೆಂಡ್ತಿಯೂ ತವರು ಮನೆಗೆ ಹೋಗಿದ್ಲು: ಇನ್ನು ಶನಿವಾರ ಸಂಜೆ ವೇಳೆ ಪ್ರತಿಮಾ ಅವರ ಮನೆ ಬಳಿ ಬಂದಿದ್ದ ಕೊಲೆ ಆರೋಪಿ ಕಿರಣ್, ಪ್ರತಿಮಾ ಅವರು ಮನೆಯ ಒಳಗೆ ಹೋಗುತ್ತಿದ್ದಂತೆ ಅವರ ವೇಲ್‌ನಿಂದ ಕೊಲೆ ಮಾಡಿದ್ದಾನೆ. ವೃತ್ತಿ ಕಾರಣದಿಂದಲೇ ಆತನನ್ನ ಬೈದಿದ್ದು ಕಂಡುಬಂದಿದೆ. ಕೆಲಸ ಬಿಟ್ಟ ಮೇಲೆ ಹೆಂಡ್ತಿ ಬಿಟ್ಟು ತವರಿಗೆ ಹೋಗಿದ್ದಳು. ಇದ್ರಿಂದ ಕೂಡ ನೊಂದಿದ್ದ ಅನ್ನೊ ಮಾಹಿತಿಯಿದೆ. ಮಾತಾಡೋಕೆ ಅಂತಾ ಕೊಲೆಯಾದ ಹಿಂದಿನ ದಿನವೂ ಮನೆ ಬಳಿ ಹೋಗಿದ್ದನು. ಆದರೆ, ಪ್ರತಿಮಾ ಆರೋಪಿ ಕಿರಣ್‌ನನ್ನು ಮಾತನಾಡಿಸದೇ ನಿರ್ಲಕ್ಷ್ಯ ಮಾಡಿದ್ದರು. ಇನ್ನು ಆಫೀಸ್ ಬಳಿಯೂ ಹೋಗಿ ಒಮ್ಮೆ ಪ್ರತಿಮಾರ ಭೇಟಿಗೆ ಪ್ರಯತ್ನ ಪಟ್ಟಿದ್ದೆ ಎಂದು ಆರೋಪಿ ಕಿರಣ್ ಹೇಳಿದ್ದಾನೆ ಎಂದು ಡಿಸಿಪಿ ರಾಹುಲ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗದ ಡೈನಾಮಿಕ್ ಲೇಡಿ ಕೆಎಎಸ್ ಆಫೀಸರ್ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!
ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು, ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂದು, ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆಂದು ಸುದ್ದಿ ಇತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆದಿತ್ತು. ಇದೀಗ ಚಾಲಕನೇ ಕೊಲೆಗೆ ಕಾರಣ ಎಂದು ಸ್ಪಷ್ಟವಾಗಿದೆ. ಪ್ರತಿಮಾ ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದರು.