ಸೂಟ್‌ಕೇಸ್ ಜೊತೆ ರೈಲ್ವೆ ನಿಲ್ದಾಣಕ್ಕೆ ಬಂದ ತಂದೆ-ಮಗಳು, ಅನುಮಾನದಿಂದ ಒಳಗೇನಿದೆ ಅಂತ ನೋಡಿದಾಗ?

ರೈಲ್ವೆ ನಿಲ್ದಾಣದಲ್ಲಿ ತಂದೆ-ಮಗಳು ಸೂಟ್‌ಕೇಸ್‌ ಕಂಡ ಪ್ರಯಾಣಿಕರೊಬ್ಬರು ಅನುಮಾನದಿಂದ ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ತಂದೆ ಮತ್ತು ಮಗಳನ್ನು ಬಂಧಿಸಿದ್ದಾರೆ.

Father and daughter came to the chennai railway station with a suitcase mrq

ಚೆನ್ನೈ: ರೈಲ್ವೆ ಸ್ಟೇಶನ್‌ನಲ್ಲಿ ತಂದೆ ಮತ್ತು ಮಗಳು ಟ್ರೋಲಿ ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದರು. ಆದ್ರೆ ನಿಲ್ದಾಣದಲ್ಲಿದ್ದ ಓರ್ವ ಪ್ರಯಾಣಿಕನಿಗೆ ತಂದೆ ಮತ್ತು ಮಗಳ ವರ್ತನೆ ಬಗ್ಗೆ ಅನುಮಾನ ಬಂದಿತ್ತು. ಕೂಡಲೇ ಆರ್‌ಪಿಎಫ್‌ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ, ಚೆನ್ನೈ ರೈಲ್ವೆ ನಿಲ್ದಾಣದಲ್ಲಿರುವ ಇಬ್ಬರ ಬಗ್ಗೆ ಬಲವಾದ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಆರ್‌ಪಿಎಫ್ ಪೊಲೀಸರು ಇಬ್ಬರನ್ನು ನಿಲ್ಲಿಸಿ ಬ್ಯಾಗ್‌ನಲ್ಲಿ ಏನಿದೆ ಎಂದು ಕೇಳಿದ್ದಾರೆ. ಇದಕ್ಕೆ ಇಬ್ಬರು ಏನಿಲ್ಲ ಎಂದಿದ್ದಾರೆ. ಪೊಲೀಸರು ಬ್ಯಾಗ್ ಓಪನ್ ಮಾಡಿದಾಗ ನಿಲ್ದಾಣದಲ್ಲಿದ್ದ ಪೋಷಕರೆಲ್ಲಾ ಶಾಕ್ ಆಗಿದ್ದರು. 

43 ವರ್ಷದ ವ್ಯಕ್ತಿ ಮತ್ತು 17 ವರ್ಷದ ಆತನ ಮಗಳು ಟ್ರೋಲಿ ಬ್ಯಾಗ್‌ನೊಂದಿಗೆ ಚೆನ್ನೈನ ಮಿಂಜುರ್ ರೈಲ್ವೆ ಸ್ಟೇಶನ್‌ಗೆ ಬಂದಿದ್ದರು. ಬ್ಯಾಗ್‌ನಲ್ಲಿ ಮಹಿಳೆಯ ಶವ ತಂದಿದ್ದ ಇಬ್ಬರು ನಿಲ್ದಾಣದಲ್ಲಿ ಬಿಟ್ಟು ಹೋಗುವ ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಪ್ರಯಾಣಿಕರು ನೀಡಿದ ಮಾಹಿತಿಯಿಂದ ಇಬ್ಬರು ತಗ್ಲಾಕೊಂಡಿದ್ದಾರೆ. ನೆಲ್ಲೂರು ಮೂಲದ ಈ ವ್ಯಕ್ತಿ ಭಾನುವಾರ ರಾತ್ರಿ ತನ್ನ ಪಕ್ಕದ್ಮನೆ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಆಕೆಯ ಚಿನ್ನಾಭರಣದಿಂದ ತನ್ನ ಸಾಲವನ್ನು ತೀರಿಸಿಕೊಳ್ಳೋದು ಆತನ ಉದ್ದೇಶವಾಗಿತ್ತು ಎಂದು ಆರ್‌ಪಿಎಫ್‌ ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಲೈವ್ ವ್ಲಾಗ್ ಮಾಡ್ತಿದ್ದ ಯುವತಿಗೆ ನಡು ರಸ್ತೆಯಲ್ಲಿ ಎದೆಭಾಗಕ್ಕೆ ಕೈ ಹಾಕಿದ ಯುವಕ!

ಮಹಿಳೆಯನ್ನು ಕೊಲೆಗೈದ ಬಳಿಕ ತಂದೆ-ಮಗಳು ಜೊತೆಯಾಗಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿಕೊಂಡು ಚೆನ್ನೈಗೆ ಬಂದಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಚೆನ್ನೈಗೆ ಹೊರಡುವ ಮೆಮೊ ಟ್ರೈನ್ ಹತ್ತಿ ಬೆಳಗ್ಗೆ 8.30ಕ್ಕೆ ನಿಲ್ದಾಣಕ್ಕೆ ಬಂದಿದ್ದಾರೆ. ನಂತರ ಸುಮಾರು 100 ಮೀಟರ್ ದೂರದವರೆಗ ಬ್ಯಾಗ್ ಎಳೆದುಕೊಂಡು ಬಂದು ಬಿಟ್ಟಿದ್ದಾರೆ. ನಂತರ ಅಲ್ಲಿಂದ ಮತ್ತೆ ತಮ್ಮೂರಿಗೆ ಹೋಗಲು ರೈಲು ಹಿಡಿಯಲು ಮುಂದಾಗಿದ್ದರು. ಅಷ್ಟರಲ್ಲಿಯೇ ನಿಲ್ದಾಣದಲ್ಲಿದ್ದ ರೈಲ್ವೆ ಸಿಬ್ಬಂದಿ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. 

ಆರೋಪಿಯನ್ನು ಬಾಲಸುಬ್ರಮಣ್ಯಂ ಎಂದು ಗುರುತಿಸಲಾಗಿದೆ. ಆರ್‌ಪಿಎಫ್ ಸಿಬ್ಬಂದಿ ಸೂಟ್‌ಕೇಸ್ ತೆರೆದಾಗ ಮಹಿಳೆಯ ಶವ ಕಂಡು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ತಲೆ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ದೇಹವೆಲ್ಲಾ ರಕ್ತಮಯವಾಗಿತ್ತು. ಬ್ಯಾಗ್‌ ಅಂಚಿನಲ್ಲಿಯೂ ರಕ್ತದ ಹನಿ ಸೋರುತ್ತಿತ್ತು. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹತ್ಯೆಯಾದ ಮಹಿಳೆಯನ್ನು 65 ವರ್ಷದ ಮನ್ನಮ್ಮ ರಮಣಿ ಎಂದು ಗುರುತಿಸಲಾಗಿದೆ. ಸದ್ಯ ತಂದೆ-ಮಗಳನ್ನು ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೀಪಾವಳಿಯಂದು ರಾತ್ರಿ 11ರವರೆಗೂ ಕೆಲಸ ಮಾಡಿದ್ದ Zomato ಡೆಲಿವರಿ ಬಾಯ್‌ಗೆ ಸಿಕ್ಕ ಹಣ ಎಷ್ಟು?

Latest Videos
Follow Us:
Download App:
  • android
  • ios