Asianet Suvarna News Asianet Suvarna News

ಭದ್ರಾವತಿ ಶಾಸಕ ವಿರುದ್ಧ ಫೇಸ್‌ಬುಕ್ ಪೋಸ್ಟ್; ಮೊನ್ನೆ ಕಾರಿನ ಗಾಜು, ಇಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

ಭದ್ರಾವತಿ ಶಾಸಕನ ವಿರುದ್ಧ ಫೇಸ್‌ಬುಕ್ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಮೇಲೆ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಭದ್ರಾವತಿ ಹೋಟೆಲ್ ಬಳಿಕ ನಿನ್ನೆ ತಡರಾತ್ರಿ ನಡೆದಿದೆ.

Fatal attack on BJP worker Gokul Krishna Bhadravati at shivamogga rav
Author
First Published Dec 11, 2023, 10:03 AM IST

ಶಿವಮೊಗ್ಗ (ಡಿ.11): ಭದ್ರಾವತಿ ಶಾಸಕನ ವಿರುದ್ಧ ಫೇಸ್‌ಬುಕ್ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಮೇಲೆ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಭದ್ರಾವತಿ ಹೋಟೆಲ್ ಬಳಿಕ ನಿನ್ನೆ ತಡರಾತ್ರಿ ನಡೆದಿದೆ.

ಗೋಕುಲ್ ಕೃಷ್ಣ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ. ಭವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಗೋಕುಲ್.  ಕೆಂಚನಹಳ್ಳಿ ಕುಮಾರ್ ಮತ್ತು ಅವರ ಕಾರು ಚಾಲಕ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ. ಮೊನ್ನೆಯಷ್ಟೇ ಮನೆಮುಂದೆ ನಿಲ್ಲಿಸಿದ್ದ ಗೋಕುಲ್ ಕೃಷ್ಣ ಅವರ ಕಾರಿನ ಗಾಜು ಒಡೆದುಹಾಕಿದ್ದ ಕಿರಾತಕರು. ಇದೀಗ ನಿನ್ನೆ ತಡರಾತ್ರಿ ಗೋಕುಲ್ ಕೃಷ್ಣ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ. ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಗೋಕುಲ ಕೃಷ್ಣ.

ಘಟನೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಗೋಕುಲ್ ಕೃಷ್ಣ ಆರೋಗ್ಯ ವಿಚಾರಿಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ. ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಗೋಕುಲ್ ಕೃಷ್ಣ ಮೇಲಿನ ಹಲ್ಲೆ ಪ್ರಕರಣ ದಾಖಲಾಗಿದೆ.

ಭದ್ರಾವತಿ ಶಾಸಕರ ವಿರುದ್ಧ ಫೇಸ್‌ಬುಕ್‌ ಪೋಸ್ಟ್; ಬಿಜೆಪಿ ಕಾರ್ಯಕರ್ತನ ಕಾರು ಪುಡಿಪುಡಿ!

ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಗಳಾಗುತ್ತಿವೆ. ಸರ್ಕಾರವನ್ನ ಪ್ರಶ್ನಿಸುವ ಕಾರ್ಯಕರ್ತರ ಮೇಲೆ ಹಾಡಹಗಲೇ ದಾಳಿಗಳು ಆಗುತ್ತಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ವಿಫಲವಾಗಿದೆ.. ಸರ್ಕಾರದ ಹೇಳಿದಂತೆ ಪೊಲೀಸರು ಕೇಳುತ್ತಿದ್ದಾರೆ. ಕೇಸ್ ದಾಖಲಿಸಿದರೂ ಯಾವುದೇ ಶಿಕ್ಷೆ ಇಲ್ಲದೆ ಪುಂಡಾಟ ಮರೆಯುತ್ತಿರುವ ದುಷ್ಕರ್ಮಿಗಳು. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಹಲ್ಲು ಕಿತ್ತ ಹಾವಿನಂತಾಗಿರುವ ಪೊಲೀಸ್ ಇಲಾಖೆ ಎಂದು ಕಾರ್ಯಕರ್ತರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಗರ ಮೇಲೆ ಐಟಿ ದಾಳಿ ಆದರೂ ದುಡ್ಡು ಸಿಗುತ್ತೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Follow Us:
Download App:
  • android
  • ios