ಹುಬ್ಬಳ್ಳಿ(ಫೆ.27): ನಗರದ ಖ್ಯಾತ ವೈದ್ಯ ದಂಪತಿ ಕೌಟುಂಬಿಕ ಕಲಹ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪತಿ ಹಾಗೂ ಪತ್ನಿ ದೂರು, ಪ್ರತಿದೂರು ದಾಖಲಿಸಿದ್ದಾರೆ.

ಖ್ಯಾತ ನ್ಯೂರೋ ಸರ್ಜನ್‌ ಡಾ. ಕ್ರಾಂತಿ ಕಿರಣ್‌ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪತ್ನಿ ಡಾ.ಶೋಭಾ ಸುಣಗಾರ ವಿರುದ್ಧ 17 ಲಕ್ಷ ವಂಚನೆ ಮಾಡಿದ ಆರೋಪದಡಿ ದೂರು ದಾಖಲಿಸಿದ್ದರೆ, ಪತ್ನಿ ಡಾ. ಶೋಭಾ ಕೂಡ ಪತಿ ವಿರುದ್ಧ ಪ್ರತಿದೂರು ನೀಡಿದ್ದು, ತನ್ನ ಸಹಿ ಇಲ್ಲದೇ ಆಸ್ಪತ್ರೆ ಬ್ಯಾಂಕ್‌ ಅಕೌಂಟ್‌ ಚೇಂಜ್‌ ಮಾಡಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕಟ್ಟಡದಿಂದ ಜಿಗಿದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಆತ್ಮಹತ್ಯೆ

ನಗರದಲ್ಲಿ ಪ್ರಸಿದ್ಧ ಖಾಸಗಿ ಆಸ್ಪತ್ರೆಯನ್ನು ಈ ದಂಪತಿ ಕಟ್ಟಿದ್ದು, ಪತಿ ಆಸ್ಪತ್ರೆಯ ಅಧ್ಯಕ್ಷರಾದರೆ, ಪತ್ನಿ ನಿರ್ದೇಶಕಿ. ತನ್ನ ಅನುಮತಿಯಿಲ್ಲದೇ ಬ್ಯಾಂಕ್‌ ಅಕೌಂಟ್‌ ಚೇಂಜ್‌ ಮಾಡಿದ್ದಲ್ಲದೆ, ಪತಿಯ ಮೇಲೆ ಜೀವಬೇದರಿಕೆ, ಹಲ್ಲೆ ಆರೋಪದಡಿ ಕೇಸ್‌ ದಾಖಲಿಸಿದ್ದಾರೆ. ಕಳೆದ ವರ್ಷ ಪತ್ನಿಯಿಂದಲೇ ಜೀವ ಬೇದರಿಕೆಯಿದೆ ಎಂದು ಡಾ. ಕ್ರಾಂತಿ ಕಿರಣ ದೂರು ನೀಡಿದ್ದರು.