ಆನೇಕಲ್‌ನ ರಾಚಾಮಾನಹಳ್ಳಿಯಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಪತಿಯಿಂದ ಪತ್ನಿ ಕೊಲೆಯಾಗಿದೆ. ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿ ಅನಿತಾಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಬಾಬು ಪೊಲೀಸರ ವಶದಲ್ಲಿದ್ದಾನೆ.
ಆನೇಕಲ್: ಅನೈತಿಕ ಸಂಬಂಧ ಶಂಕೆಯಿಂದ ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಚಾಮಾನಹಳ್ಳಿಯಲ್ಲಿ ನಡೆದಿದೆ.
ಅನಿತಾ(27) ಕೊಲೆಯಾದ ಗೃಹಿಣಿ. ರಾಚಮಾನಹಳ್ಳಿಯ ವಾಸಿ ಬಾಬು(32) ಕೊಲೆಗೈದ ಪತಿ. ಬಾಬುಗೆ ಇಬ್ಬರು ಪತ್ನಿಯರು, ನಾಲ್ಕು ಜನ ಮಕ್ಕಳಿದ್ದಾರೆ. ಅನಿತಾ ಮೂಲತಃ ಮೈಸೂರಿನ ಚಿಕ್ಕ ಮಾರ್ಕೆಟ್ ನಿವಾಸಿ. 7 ವರ್ಷಗಳ ಹಿಂದೆ ಇಬ್ಬರನ್ನೂ ಪ್ರೀತಿಸಿ ಒಂದೇ ದಿನ ಒಟ್ಟಿಗೆ ಮದುವೆಯಾಗಿದ್ದ.
ಇದನ್ನೂ ಓದಿ:ಜಾಕ್ ಹಾಕಿ ಕಾರಿನ 4 ಚಕ್ರ ಬಿಚ್ಚಿಕೊಂಡು ಖದೀಮರು ಪರಾರಿ! ಹೋಟೆಲ್ ಮುಂದೆ ವಾಹನ ನಿಲ್ಲಿಸ್ತೀರಾ? ಇದನ್ನೊಮ್ಮೆ ನೋಡಿ!
ಇತ್ತೀಚೆಗೆ ಪತ್ನಿಯ ಶೀಲದ ಬಗ್ಗೆ ಶಂಕಿಸುತ್ತಿದ್ದ ಬಾಬು ಹೆಂಡತಿಯ ಜೊತೆ ಯಾವಾಗಲೂ ಜಗಳ ಮಾಡುತ್ತಿದ್ದ. ಬೇಸತ್ತ ಅನಿತಾ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು. ಕಳೆದ ವಾರ ಬಾಬು ಕುಟುಂಬಸ್ಥರು ಅನಿತಾಳ ಮನವೊಲಿಸಿ ಮತ್ತೆ ವಾಪಾಸ್ ಕರೆದುಕೊಂಡು ಬಂದಿದ್ದರು. ಪದೇ ಪದೇ ಜಗಳವಾಡುತ್ತಿದ್ದ ದಂಪತಿ ನಡುವೆ ನಿನ್ನೆ ಜಗಳವಾದಾಗ ಹೆಂಡತಿಗೆ ಮನೆಯಲ್ಲಿದ್ದ ಹಿಟ್ಟಿನ ದೊಣ್ಣೆ ಮತ್ತು ಕೈನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಬೆಳಗ್ಗೆ ಮೃತಳಾಗಿರುವ ಅನಿತಾ ಬಗ್ಗೆ ಮಾಹಿತಿ ಬಂದು ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನೆ ಮಾಡಿದ್ದು ಬಾಬುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರ: ಅನಿತಾ, ಆರೋಪಿ ಬಾಬು
