Asianet Suvarna News Asianet Suvarna News

ಬೆಂಗಳೂರು: ಇ.ಡಿ ಹೆಸರಲ್ಲಿ ಜಿಎಸ್‌ಟಿ ಸಿಬ್ಬಂದಿ ನಕಲಿ ರೇಡ್‌, 1.5 ಕೋಟಿ ಸುಲಿಗೆ..!

ಕೆಲ ದಿನಗಳ ಹಿಂದೆ ಮೆಕೋ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಆ ಕಂಪನಿಯಲ್ಲೇ ಉದ್ಯೋಗಿಗಳನ್ನು 2 ದಿನ ಬಂಧನದಲ್ಲಿಟ್ಟು, ಜಿಎಸ್‌ ಅಧಿಕಾರಿಗಳು ಹಣ ಸುಲಿಗೆ ಮಾಡಿದರು. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಗೆ ಕಂಪನಿ ಉದ್ಯೋಗಿ ದೂರು ನೀಡಿದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಜಿಎಸ್‌ಟಿ  ಅಧಿಕಾರಿ ಅಭಿಶೇಖ್‌ನನ್ನು ಬಂಧಿಸಿದಾಗ ಅಸಲಿ ಮುಖವಾಡ ಕಳಚಿದೆ. 

Fake raid by GST staff in the name of ED in Bengaluru grg
Author
First Published Sep 12, 2024, 7:33 AM IST | Last Updated Sep 12, 2024, 7:33 AM IST

ಬೆಂಗಳೂರು(ಸೆ.12): ಅಕ್ರಮ ಹಣಕಾಸು ಅವ್ಯಹಾರ ಶಂಕೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಹೆಸರಿನಲ್ಲಿ ಖಾಸಗಿ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಅಲ್ಲಿನ ಉದ್ಯೋಗಿಗಳನ್ನು ಅಕ್ರಮ ಬಂಧನದಲ್ಲಿಟ್ಟು 1.5 ಕೋಟಿ ರು. ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧೀಕ್ಷಕ ಸೇರಿ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಜಿಎಸ್‌ಟಿ ಬೆಂಗಳೂರು ಪ್ರಾದೇಶಿಕ ಕಚೇರಿ ದಕ್ಷಿಣ ವಿಭಾಗದ ಅಧೀಕ್ಷಕ ಅಭಿಷೇಕ್, ಹಿರಿಯ ಗುಪ್ತಚರ ಅಧಿಕಾರಿ ಮನೋಜ್‌ ಸೈನಿ,  ನಾಗೇಶ್‌ ಬಾಬು ಹಾಗೂ ಸೋನಾಲಿ ಸುಹಾಮ್‌ ಬಿಮಾ ನಗರದ ಮೆಕೋ ಸಲ್ಯೂಷನ್ ಪ್ರೈ, ಕಂಪನಿ ಉದ್ಯೋಗಿ ಕೇಶವ್ ಸಕ್ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ. 

ಬೆಂಗಳೂರು: ಕನ್ನಡ ಭಾಷೇಲಿ ಮಾತನಾಡಿ ಎಂದಿದ್ದಕ್ಕೆ ಹಿಂದಿ ಗ್ಯಾಂಗ್‌ನಿಂದ ಗೂಂಡಾಗಿರಿ..!

ಕೆಲ ದಿನಗಳ ಹಿಂದೆ ಮೆಕೋ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಆ ಕಂಪನಿಯಲ್ಲೇ ಉದ್ಯೋಗಿಗಳನ್ನು 2 ದಿನ ಬಂಧನದಲ್ಲಿಟ್ಟು, ಜಿಎಸ್‌ ಅಧಿಕಾರಿಗಳು ಹಣ ಸುಲಿಗೆ ಮಾಡಿದರು. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಗೆ ಕಂಪನಿ ಉದ್ಯೋಗಿ ದೂರು ನೀಡಿದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಜಿಎಸ್‌ಟಿ  ಅಧಿಕಾರಿ ಅಭಿಶೇಖ್‌ನನ್ನು ಬಂಧಿಸಿದಾಗ ಅಸಲಿ ಮುಖವಾಡ ಕಳಚಿದೆ. 

ಪ್ರಕರಣದ ವಿವರ ಹೀಗಿದೆ: 

ಕೆಲ ತಿಂಗಳಿಂದ ಜೆ.ಬಿ. ನಗರ ರಸ್ತೆಯಲ್ಲಿ ವೆಬ್ ಡಿಸೈನಿಂಗ್‌ ಮೆಕ್ಕೋಕಂಪನಿ ವಹಿವಾಟು ನಡೆಸುತ್ತಿದೆ. ಈ ಕಂಪನಿ ಬಗ್ಗೆ ಮಾಹಿತಿ ಪಡೆದ ಜಿಎಸ್‌ಟಿ ಅಧೀಕ್ಷಕ ಅಭಿಷೇಕ್ ತಂಡವು, ಆ.30 ರಂದು ಬೆಳಗ್ಗೆ9 ಗಂಟೆಗೆ ಜಿ.ಎಂ.ಪಾಳ್ಯದಲ್ಲಿದ್ದ  ಆ ಕಂಪನಿಯ ಉದ್ಯೋಗಿ ಕೇಶವ್ ಮನೆ ಮೇಲೆ ದಾಳಿ ನಡೆಸಿದೆ. ಆಗ ತಮ್ಮನ್ನು ಇ.ಡಿ ಹಾಗೂ ಜಿಎಸ್‌ಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಆರೋಪಿಗಳು, ನಿಮ್ಮ ಕಂಪನಿಯಲ್ಲಿ ಆಕ್ರಮ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಬಂದಿದೆ. ಅದಕ್ಕೆ ದಾಳಿ ನಡೆಸಿದ್ದೇವೆ ಎಂದಿದ್ದಾರೆ. ಬಳಿಕ ಕೇಶವನನ್ನು ವಶಕ್ಕೆ ಪಡೆದ ಆರೋಪಿಗಳು, ಆತ ನಿಂದ ಮೊಬೈಲ್ ಕಸಿದು ದಾಖಲೆಗಳನ್ನು ಪರಿಶೀಲಿ ಸಬೇಕಿದೆ. ಕಂಪನಿ ಕಚೇರಿಗೆ ಕರೆದೊಯ್ಯುತ್ತಿದ್ದೇವೆ ಎಂದಿದ್ದಾರೆ. ಆ ವೇಳೆ ಕೇಶವ್ ಮನೆಯಲ್ಲಿದ್ದ ನಗರದ ರಸ್ತೆಯಲ್ಲಿದ್ದ ಕಂಪನಿ ಕಚೇರಿಗೆ ಕರೆತಂದಿದ್ದಾರೆ. ಆನಂತರ ಅವರನ್ನು ಪ್ರತ್ಯೇಕವಾಗಿ ಕೋಣೆಯಲ್ಲಿಟ್ಟು ಮನಬಂದಂತೆ ಥಳಿಸಿ ಹಿಂಸಿಸಿ 3 ಕೋಟಿ ರು. ಕೊಡುವಂತೆ ಜಿಎಸ್‌ಟಿ ತಂಡ ಬೇಡಿಕೆ ಇಟ್ಟಿತ್ತು ಎಂದು ಆರೋಪಿಸಲಾಗಿದೆ. ಬಳಿಕ ಇಂದಿರಾ ನಗರಕ್ಕೆ ಕೇಶವನನ್ನು ಹಿರಿಯ ಜಿಎಸ್‌ಟಿ ಅಧಿಕಾರಿ ಮನೋಜ್ ಕರೆದೊಯ್ದಿದ್ದಾರೆ. ಅಲ್ಲಿ ಆತನ ಮೊಬೈಲ್ ಅನ್ನು ಪ್ರೈಟ್ ಮೋಡ್ ಕನೆಕ್ಟ್ ಮಾಡಿಸಿದ ಮನೋಜ್, ಬಳಿಕ ಆತನ ಸ್ನೇಹಿತ ರೋಷನ್‌ಗೆ ಕೇಶವ್‌ನಿಂದ ವಾಟಾಪ್ ಕಾಲ್ ಮಾಡಿಸಿ 3 ಕೋಟಿ ರು. ತರುವಂತೆ ಹೇಳಿಸಿದ್ದರು. ನಂತರ ಮತ್ತೆ ಕೇಶವನನ್ನು ಕಂಪನಿ ಕಚೇರಿಗೆ ಆರೋಪಿಗಳು ಕರೆತಂದಿದ್ದರು. ಮರು ದಿನ ಕೇಶವ್ ನನ್ನು ಮತ್ತೆ ಕಾರಿನಲ್ಲಿ ಕರೆದೊಯ್ದು ನಗರದ ವಿವಿಧೆಡೆ ಸುತ್ತಾಡಿಸಿ ಮರಳಿ ಕಂಪನಿ ಕಚೇರಿಗೆ ಕರೆತಂದಿದ್ದರು. ಆಗ ಕೇಶವನಿಂದ ಮತ್ತೆ ಆತನ ಸ್ನೇಹಿತ ರೋಷನ್‌ಗೆ ಕರೆ ಮಾಡಿಸಿ ಹಣವನ್ನು ಶೀಘ್ರವೇ ಹಣ ತರುವಂತೆ ಒತ್ತಾಯಿಸಿದರು. ಪಣ ತಡವಾಗಿದ್ದಕ್ಕೆ ಕೇಶವ್‌ಗೆ ಆರೋಪಿಗಳು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. 

1.5 ಕೋಟಿ ರು. ಹಣ ಸಲ್ಲಿಕೆ : 

ಕೊನೆಗೆ ಕೇಶವನ ಸಂಕಷ್ಟದ ಮಾಹಿತಿ ತಿಳಿದು 1.5 ಕೋಟಿ ಹಣವನ್ನು 12.300 ಸುಮಾರಿಗೆ ಮುಖೇಶ್ ಜೈನ್ ಮೂಲಕ ಕೇರವ್ ಮನೆಗೆ ಹಣ ಕಳುಹಿಸಿದ್ದರು. ಆಗ ಕೇಶವ್ ಮನೆಗೆ ಣದ ಹಣ ಎಂದು ಸುಳ್ಳು ಹೇಳಿ ಆ ಹಣವನ್ನು ಜಪ್ತಿ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಕಂಪನಿಯ ನೌಕರರಾದ ಪವನ್ ತಕ್, ಮುಖೇಶ್ ಜೈನ್ ಹಾಗೂ ಸ್ನೇಹಿತ ರಾಕೇಶ್ ಮಾಣಕ ಚಾಂದನಿಯನ್ನು ಜಿಎಸ್‌ಟಿ ತಂಡ ವಶಕ್ಕೆ ಪಡೆದಿದೆ. ನಂತರ ಮನೆಯಿಂದ ಬಲವಂತವಾಗಿ ಆ ನಾಲ್ವರನ್ನು ಕಾರುಗಳಲ್ಲಿ ಕರೆದುಕೊಂಡು ಜೆ.ಬಿ.

ಮಹಜ‌ರ್ ದಾಖಲೆ ಬಿಟ್ಟು ಸಿಕ್ಕಿಬಿದ್ದರು..! 

ಕೇಶವ್ ಮನೆ ಮೇಲೆ ದಾಳಿ ನಡೆಸಿದ ಜಿಎಸ್‌ಟಿ ತಂಡವು, ಆ ಮನೆಯಲ್ಲಿ ಅಕ್ರಮ ವ್ಯವಹಾರದ ಹಣ ಎಂದು ಜಪ್ತಿ ಮಾಡಿದ ನಂತರ ಮಹಜರ್ ಪ್ರಕ್ರಿಯೆ ನಾಟಕವಾಡಿದ್ದರು. ಆದರೆ ಹಣ ಜಪ್ತಿ ಮಾಡಿ ತೆರಳುವಾಗ ಆ ಮನೆಯಲ್ಲೇ ಮಹಜರ್ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ತೆರಳಿದ್ದರು. ಆ ದಾಖಲೆಯನ್ನು ನೋಡಿದ ಕೇಶವ್ ಕುಟುಂಬದವರು ಏನೋ ಮರೆತು ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಎರಡು ದಿನಗಳಾದರೂ ಮಹಜರ್ ದಾಖಲೆ ಪಡೆಯಲು ಬಾರದೆ ಹೋದಾಗ ಜಿಎಸ್‌ಟಿ ಅಧಿಕಾರಿಗಳ ನಡವಳಿಕೆ ಮೇಲೆ ಕೇಶವಗೆ ಅನುಮಾನ ಬಂದಿದೆ. ಆಗ ಈ ದಾಳಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಕೂಡಲೇ ಬೈಯಪ್ಪನಹಳ್ಳಿ ತಾಣಗೆ ತೆರಳಿ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಒಂಟಿ ಮಹಿಳೆಯರ ಮೈ ಮುಟ್ಟುತ್ತಿದ್ದ ವಿಕೃತ ಕಾಮುಕ ಬಂಧನ

ಮೇಲಧಿಕಾರಿಗಳಿಗೆ ತಿಳಿಸದೆ ಅಧಿಕಾರಿಗಳ ದಾಳಿ 

ಅಕ್ರಮ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸುವ ಮುನ್ನ ತಮ್ಮ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಕೆಳಹಂತದ ಅಧಿಕಾರಿಗಳು ಪಡೆಯಬೇಕಿದೆ. ಅಂತೆಯೇ ಮೆಕ್ಕೋ ಕಂಪನಿ ಮೇಲಿನ ದಾಳಿ ಕುರಿತು ಮಾಹಿತಿಗೆ ಕೇಂದ್ರ ಜಿಎಸ್‌ಟಿ ಪ್ರಾದೇಶಿಕ ಕಚೇರಿಯ ಮಹಾನಿರ್ದೇಶಕ (ಗುಪ್ತದಳ) ಅವರನ್ನು ಸಂಪರ್ಕಿಸಲಾಯಿತು. ಆಗ ಈ ಪ್ರಕರಣದ ಕುರಿತು ಅವರಿಗೆ ಮಾಹಿತಿಯೇ ಇರಲಿಲ್ಲ, ಡಿಜಿ ಅನುಮತಿ ಪಡೆಯದೆ ಅಧೀಕ್ಷಕರು ದಾಳಿ ನಡೆಸಿದ್ದರು. ಆಕ್ರಮ ಆರ್ಥಿಕ ವ್ಯವಹಾರದ ಮಾಹಿತಿ ಮೇರೆಗೆ ಕಂಪನಿ ಮೇಲೆ ದಾಳಿ ನಡೆಸಿ ದಾಖಲ ಪರಿಶೀಲನೆಗೆ ಕಾನೂನು ಪ್ರಕಾರ ಜಿಎಸ್‌ಟಿ ಅಧಿಕಾರಿಗಳಿಗೆ ಅವಕಾಶವಿದೆ. ಆದರೆ 1.5 ಕೋಟಿ ರು. ಹಣ ಸುಲಿಗೆ ಮಾಡಿದ್ದು ಯಾಕೆ? 2 ದಿನಗಳು ಆಕ್ರಮ ಬಂಧನದಲ್ಲಿಟ್ಟಿದ್ದು ಕಾನೂನುಬಾಹಿರ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ಹೇಳಿದ ಸತ್ಯ 

ಈ ಬಗ್ಗೆ ತನಿಖೆಗಿಳಿದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಕೃತ್ಯದ ಹಿಂದೆ ವೃತ್ತಿಪರ ದರೋಡೆಕೋರರೆ ಮಾತ್ರವಿರಬಹುದು ಎಂದು ಶಂಕಿಸಿದ್ದರು. ಆದರೆ ಕೇಶವ್ ಮನೆ ಹಾಗೂ ಅವರ ಕಂಪನಿಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಜಿಎಸ್‌ಟಿ ಅಧಿಕಾರಿಗಳ ಚಲನವಲನದ ದೃಶ್ಯಾವಳಿಗಳು ಪತ್ತೆಯಾದವು. ಈ ಸುಳಿವು ಆಧರಿಸಿ ಅಧೀಕ್ಷಕ ಅಭಿಷೇಕ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

Latest Videos
Follow Us:
Download App:
  • android
  • ios