ಬೆಂಗಳೂರು(ಮಾ. 01)  ರಾತ್ರಿ ಜಾಲಿರೈಡ್ ಗೆ ಅಂತ ತೆರಳೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್. ಏರ್ಪೊರ್ಟ್ ರಸ್ತೆಯಿಂದ ಹೆಬ್ಬಾಳ ಮಾರ್ಗವಾಗಿ ಸಂಚರಿಸುವಾಗ ಎದುರಾಗ ಈತ ಮಾಡುವ ಖತರ್ ನಾಕ್ ಕೆಲಸಕ್ಕೆ ಈಗ ತಕ್ಕ ಶಿಕ್ಷೆಯಾಗಿದೆ.

ಒಂಟಿ ಮಹಿಳೆ ಅಂತ ಗೊತ್ತಾದ್ರೆ ರಸ್ತೆಯಲ್ಲಿ ವಾಹನ ಅಡ್ಡ ಹಾಕುವ ಈ ನಕಲಿ ಪೊಲೀಸ್ ಅವರನ್ನು ಚುಡಾಯಿಸುತ್ತಾನೆ.  ಮಹಿಳೆಯರಿಗೆ ತಡರಾತ್ರಿ ಕಾಟ ಕೊಡ್ತಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.  ಚೋಳನಾಯಕನಹಳ್ಳಿ ನಿವಾಸಿ ನರೇಶ್ ಅಲಿಯಾಸ್ ಗುರುನರೇಶ್ ಬಂಧಿಸಲಾಗಿದೆ.

ಚಲಿಸುವ ಬೆಐಕ್ ಟ್ಯಾಂಕ್ ಮೇಲೆ ಕುಳಿತು ಯುವತಿಯ ರೊಮಾನ್ಸ್

ತಡರಾತ್ರಿ ಬೈಕ್ ನಲ್ಲಿ ಒಂಟಿ ಮಹಿಳೆಯರ ಕಾರುಗಳನ್ನ ಚೇಸ್ ಮಾಡ್ತಿದ್ದ ಆರೋಪಿ ನಂತರ ರಸ್ತೆಯಲ್ಲಿ  ಯುವತಿಯರ ವಾಹನಗಳನ್ನ ಅಡ್ಡಗಟ್ಟುತ್ತಿದ್ದ. ಯುವತಿಯರನ್ನ ಕಾರಿನಿಂದ ಕೆಳಗಿಳಿಸಿ ನಡುರಸ್ತೆಯಲ್ಲಿ ಚುಡಾಯಿಸುತ್ತಿದ್ದ. ಪೊಲೀಸರಿಗೆ ಕರೆಮಾಡಲು ಮುಂದಾದ್ರೆ ನಾನೇ ಪೊಲೀಸ್ ಎಂದು ಹೇಳುತ್ತಿದ್ದ. 

ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಧಿತ ಆರೋಪಿ ಇದೀಗ ಪೊಲೀಸರ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದಾನೆ.