Asianet Suvarna News

'25  ಕೋಟಿ ವ್ಯವಹಾರ' ದರ್ಶನ್ ಬಳಿ ಬಂದ ನಕಲಿ ಲೇಡಿ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್!

* ನಟ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೊಲೀಸರ ವಶಕ್ಕೆ.
* ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ.
* ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ.
* ನಿರ್ಮಾಪಕರ ಜತೆ ಬಂದಿದ್ದ ಮಹಿಳೆ

fake-bank-manager arrested who met Challenging star darshan-to-talk-about-25-crore-loan mah
Author
Bengaluru, First Published Jul 11, 2021, 5:43 PM IST
  • Facebook
  • Twitter
  • Whatsapp

ಬೆಂಗಳೂರು(ಜು. 11)  ನಟ ಚಾಲೆಂಜಿಂಗ್ ಸ್ಟಾರ್  ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೊಲೀಸರ ವಶದಲ್ಲಿದ್ದಾರೆ.

"

ಲೋನ್ ವಿಚಾರವಾಗಿ ಮಾತನಾಡಲು ಮಹಿಳೆ ತೆರಳಿದ್ದಳು. ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದಿದ್ದಳು.

ಹೊಲದಲ್ಲಿದ್ದ ಬಾವಿಯೇ ಕಣ್ಮರೆ; ಹುಡುಕಿಕೊಡಿ

ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ಮಹಿಳೆ ಬಂದಿದ್ದಳು ಮೈಸೂರಿನ ಕೆಲ ದರ್ಶನ್ ಸ್ನೇಹಿತರು 25 ಕೋಟಿ ಲೋನ್‌ಗೆ ಅರ್ಜಿ ಹಾಕಿದ್ದಾರೆ ಅಂತ ಹೇಳಿದ್ದಳು.

ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಯಾರು ಸಾಲ ಕೇಳಿದ್ದ ಮಾಹಿತಿ ಸಿಕ್ಕಿಲ್ಲ. ದರ್ಶನ್ ಸ್ನೇಹಿತರಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ನಂತರ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ಉಮಾಪತಿ ಹಾಗೂ ಶ್ರೀನಿವಾಸ್ ಗೌಡರನ್ನು ಕರೆಸಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಉಮಾಪತಿ ಹೇಳಿದ್ದಕ್ಕೆ ಈ ರೀತಿ ಮಾಡಿದೆ ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ.  ಖುದ್ದು ಡಿಸಿಪಿ ಪ್ರದೀಪ್ ಗುಂಠಿ ತನಿಖೆ ನಡೆಸುತ್ತಿದ್ದು ಎಸಿಪಿ ಶಿವಶಂಕರ್ ಜತೆಯಾಗಿದ್ದಾರೆ.

 

Follow Us:
Download App:
  • android
  • ios