Asianet Suvarna News Asianet Suvarna News

50 ದಿನವಾದ್ರೂ ನಿಗೂಢವಾಗಿಯೇ ಉಳಿದ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ

ಒಂದೂವರೆ ತಿಂಗಳು ಉರುಳಿದರೂ ಸಹ ಸಲ್ಲಿಕೆಯಾಗಿದ ತಜ್ಞರ ವರದಿ| ಪ್ರಕರಣ ಮತ್ತಷ್ಟು ಜಟಿಲ| ಡಿ.16ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಲಕ್ಷ್ಮೀ| ಪ್ರಕರಣ ಸಂಬಂಧ ಮೃತರ ಪತಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಹಲವು ಜನರ ವಿಚಾರಣೆ| 

Expert Report Was Not Submitted about Dysp Lakshmi Suicide Case grg
Author
Bengaluru, First Published Feb 4, 2021, 1:47 PM IST

ಬೆಂಗಳೂರು(ಫೆ.04): 50 ದಿನಗಳು ಕಳೆದರೂ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಹಿಂದಿರುವ ಕಾರಣ ಪತ್ತೆಯಾಗದೆ ನಿಗೂಢವಾಗಿಯೇ ಉಳಿದಿದೆ.

ಈ ಸಂಬಂಧ ಅನ್ನಪೂರ್ಣೇಶ್ವರಿ ನಗರದ ಠಾಣೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರ ವರದಿ ನಿರೀಕ್ಷೆಯಲ್ಲಿದ್ದಾರೆ. ಇತ್ತ ಒಂದೂವರೆ ತಿಂಗಳು ಉರುಳಿದರೂ ಸಹ ತಜ್ಞರ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ಪ್ರಕರಣ ಮತ್ತಷ್ಟು ಜಟಿಲವಾಗಿದೆ ಎಂದು ತಿಳಿದು ಬಂದಿದೆ.

ನಿಗೂಢವಾಗಿ ಮೃತಪಟ್ಟ ಡಿವೈಎಸ್ಪಿ ಲಕ್ಷ್ಮಿ ನಾಪತ್ತೆ ಕೇಸ್‌ಗೆ ಹೊಸ ಟ್ವಿಸ್ಟ್

2014ನೇ ಸಾಲಿನ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ, ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾಗರಬಾವಿ ಸಮೀಪ ಸ್ನೇಹಿತನ ಮನೆಯಲ್ಲಿ ಡಿ.16ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಈ ಘಟನೆ ನಿಖರ ಕಾರಣ ಪತ್ತೆಯಾಗಿರಲಿಲ್ಲ. ಇನ್ನೂ ಈ ಪ್ರಕರಣ ಸಂಬಂಧ ಮೃತರ ಪತಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಹಲವು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆತ್ಮಹತ್ಯೆಗೆ ಹಿಂದಿನ ಸ್ಪಷ್ಟವಾದ ಕಾರಣ ಬಹಿರಂಗವಾಗಿಲ್ಲ ಎಂದು ಹೇಳಲಾಗಿದೆ.
 

Follow Us:
Download App:
  • android
  • ios