ತೃತೀಯ ಲಿಂಗಿಗಳು ಮಾಡಿದ ಕೆಲಸ/ ಮದುವೆಗೆ ಕರೆದುಕೊಂಡು ಹೋದ ಯುವಕನ ಮರ್ಮಾಂಗ ಕತ್ತರಿಸಿದರು/ ಉತ್ತರ ಪ್ರದೇಶದಿಂದ ಘಟನೆ ವರದಿ/ ಇಬ್ಬರು ತೃತೀಯ ಲಿಂಗಿಗಳ ಬಂಧನ
ನವದೆಹಲಿ(ಏ. 11) ಇಬ್ಬರು ತೃತೀಯಲಿಂಗಿಗಳು 24 ವರ್ಷದ ಯುವಕನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾರೆ. ಉತ್ತರ ಪ್ರದೇಶದಿಂದ ಘಟನೆ ವರದಿಯಾಗಿದೆ.
ತೃತೀಯಲಿಂಗಿಗಳ ಜತೆ ಯುವಕ ಮದುವೆ ಸಮಾರಂಭವೊಂದಕ್ಕೆ ನೃತ್ಯ ಮಾಡಲು ತೆರಳಿದ್ದ. ಸಂತ್ರಸ್ತನ ಸಹೋದರಿ ದೆಹಲಿ ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಗುಡ್ಡಿ ಮತ್ತು ರಜ್ಜಿ ಎಂಬುವರನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 326 ರ ಅಡಿ ದೂರು ದಾಖಲಾಗಿದೆ.
ಬಾರ್ ಗಲಾಟೆಯಲ್ಲಿ ಮರ್ಮಾಂಗ ಕಳೆದುಕೊಂಡ ಯುವಕ
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅನೇಕರನ್ನು ತನಿಖೆಗೆ ಒಳಪಡಿಸಿದ್ದಾರೆ. ಯುವಕ ಘಟನೆಯನ್ನು ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.
ಏಪ್ರಿಲ್ ಏಳರಂದು ಮದುವೆಗೆ ತೆರಳಿದ್ದ. ಮದುವೆಗೆ ವ್ಯಕ್ತಿ ಗಾಯಗೊಂಡಿದ್ದ ಮರುದಿನ ನಡೆದ ವಿಚಾರವನ್ನು ತಿಳಿಸಿದ್ದಾನೆ. ಗಂಡ ತನಗೆ ಮೋಸ ಮೋಸ ಮಾಡುತ್ತಿದ್ದಾನೆ ಎಂದು ಪತ್ನಿಯೊಬ್ಬಳು ಗಂಡನ ಮರ್ಮಾಂಗ ಕತ್ತಿಸಿದ್ದ ಘಟನೆ ಮುಂಬೈನಿಂದ ವರದಿಯಾಗಿತ್ತು.
