ಬೆಂಗಳೂರು(ಮಾ.01): ಇಂಜಿನಿಯರಿಂಗ್ ವಿದ್ಯಾರ್ಥಿ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಜಯಂತ್​ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಎರಡನೇ ವರ್ಷದ ಎಂಜಿನಿಯರಿಂಗ್​​ನ ಮೂರನೇ ಸೆಮಿಸ್ಟರ್​ನಲ್ಲಿ ಓದುತ್ತಿದ್ದ.

"

ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಡೆತ್ ನೋತ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ರ‍್ಯಾಂಕ್  ಸ್ಟುಡೆಂಟ್ ಆಗಿದ್ದ 22 ವರ್ಷದ ಜಯಂತ್ ಡಿಪ್ಲೋಮಾದಲ್ಲಿ  ಶೇ. 94 ಗಳಿಸಿದ್ದ.  ದಿನೇ ದಿನೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಂತ್  ಎರಡು ಬಾರಿ ಮನೋವೈದ್ಯರನ್ನು ಭೇಟಿಯಾಗಿದ್ದ. ದಿನೇ ದಿನೇ ಸಾಯೋ ಬದಲು ಒಮ್ಮೆಲೆ ಸಾಯೋದು ಮೇಲು ಎಂದು ಡೆತ್ ನೋಟ್ ನಲ್ಲಿ ಜಯಂತ್ ಬರೆದಿದ್ದಾನೆ.

ಆದರೆ ಯಾವ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ಅನ್ನೋದು ಮಾತ್ರ ಬರೆದಿಲ್ಲ. ಸೋಮವಾರ ಬೆಳಗ್ಗೆ 9.30 ಕ್ಕೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿ 7 ನೇ ಮಹಡಿಯಲ್ಲಿ ಓಡಾಡಿಕೊಂಡಿದ್ದ. ಇದ್ದಕ್ಕಿದ್ದಂತೆ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕಿತ್ಸೆ ನೀಡಿದ್ದ ಮನೋ ವೈದ್ಯರನ್ನು ಭೇಟಿ ಪೊಲೀಸರು ಪ್ರಶ್ನೆ ಮಾಡಲಿದ್ದಾರೆ. 

ದೊಡ್ಡವರ ಅಫೇರ್‌ ಗೆ ಬಲಿಯಾಯ್ತು ಚಿಕ್ಕವರ ಜೀವ

ವಿದ್ಯಾರ್ಥಿ ಆತ್ಮಹತ್ಯೆ ನಂತರ ಸ್ಟುಡೆಂಟ್ಸ್ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಿಐಟಿ ಪ್ರಾಂಶುಪಾಲ ಅಶ್ವತ್ಥ್  ಮಾತನಾಡಿ, ವಿದ್ಯಾರ್ಥಿ ಆತ್ಮಹತ್ಯೆ ನಮಗೂ ತಂಬಾ ಶಾಕ್ ಆಗಿದೆ. ಕಾಲೇಜು ಶುರುವಾಗಿ 42 ವರ್ಷ ಆಗಿದೆ ಇದು ಮೊದಲ ಅವಘಡ, ನಾವೂ ಶಾಕ್ ಆಗಿದ್ದೀವಿ. ಜಯಂತ್ ರೆಡ್ಡಿ ಒಂದು ವರ್ಷ ಪರೀಕ್ಷೆ ತಗೊಂಡಿರಲಿಲ್ಲ. ಪರೀಕ್ಷೆ ಚನ್ನಾಗಿ ಬರಿಬೇಕು ಅಂತಾ ಎಕ್ಸಾಂ ಬರೆದಿರಲಿಲ್ಲ.. ಈ ವರ್ಷ ಕೊರೊನಾ ದಿಂದ ಸಾಕಷ್ಟು ತೊಂದರೆ ಆಗಿದೆ. ಅವನು ಯಾಕೆ ಬೇಜಾರು ಮಾಡ್ಕೊಂಡ್ನೊ ಗೊತ್ತಿಲ್ಲ ಎಂದಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆಯಿಂದ ನಾವು ದುಖಃದಲ್ಲಿದ್ದಿವಿ..ಆತ್ಮಕ್ಕೆ ಶಾಂತಿ ಸಿಗಲಿ. ಹುಡಗಿರಿಗಾಗಿ ಆತ್ಮಸ್ಥೈರ್ಯ ತುಂಬುವ ತರಗತಿಯನ್ನೂ ಮಾಡ್ತಿದ್ದೀವಿ ನಾವು ವಿದ್ಯಾರ್ಥಿಗಳನ್ನೂ ಕೌನ್ಸಲಿಂಗ್ ಮಾಡ್ತಿದ್ದೀವಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ಪರೀಕ್ಷೆ ಬರಿಯದೇ ಡಿಗ್ರಿ ಸರ್ಟಿಫಿಕೇಟ್ ಕೊಡಬಾರದು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನಾವು ಮಾಡ್ತಿದ್ದೇವೆ. ಯುನಿವರ್ಸಿಟಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸ್ತೇವೆ ಎಂದು ಹೇಳಿದ್ದಾರೆ.