Chikkamagaluru: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ಸ್ಪರ್ಶ: ವ್ಯಕ್ತಿ ಸ್ಥಳದಲ್ಲೇ ಸಾವು
ಕಬ್ಬಿಣದ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗದ್ಗಲ್ ಗ್ರಾಮದ ಬಳಿ ನಡೆದಿದೆ. ಮೃತನನ್ನ 48 ವರ್ಷದ ಪ್ರಸನ್ನ ಸಾಲ್ಡನ್ ಎಂದು ಗುರುತಿಸಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.09): ಕಬ್ಬಿಣದ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗದ್ಗಲ್ ಗ್ರಾಮದ ಬಳಿ ನಡೆದಿದೆ. ಮೃತನನ್ನ 48 ವರ್ಷದ ಪ್ರಸನ್ನ ಸಾಲ್ಡನ್ ಎಂದು ಗುರುತಿಸಲಾಗಿದೆ. ಮೃತ ಪ್ರಸನ್ನ ಮನೆಯಲ್ಲಿ ಬೇರೆ ಕೆಲಸದ ನಿಮಿತ್ತ ಕಾಫಿ ತೋಟದಿಂದ ಕಬ್ಬಿಣದ ಏಣಿಯನ್ನ ಮನೆಗೆ ತಂದಿದ್ದರು. ಕೆಲಸವಾದ ಬಳಿಕ ಏಣಿಯನ್ನ ಮತ್ತೆ ಕಾಫಿ ತೋಟಕ್ಕೆ ಇಡಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಬ್ಬಿಣದ ಏಣಿಯಾದ ಕಾರಣ ವಿದ್ಯುತ್ ಸ್ಪರ್ಶಿಸಿದ ಕೂಡಲೇ ಸಾಲ್ಡರ್ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮನೆಯಿಂದ ಏಣಿಯನ್ನ ಕೊಂಡೊಯ್ಯುವಾಗ ಗಬ್ಗಲ್ ಗ್ರಾಮದ ಶಾಲೆ ಪಕ್ಕ ಎತ್ತರದ ಪ್ರದೇಶದಲ್ಲಿ ಏಣಿಯನ್ನ ಹೊತ್ತುಕೊಂಡು ಹೋಗುವಾಗ ಏಣಿ ವಿದ್ಯುತ್ ತಂತಿಗೆ ತಗುಲಿ ಸಾವನಪ್ಪಿದ್ದಾರೆ. ಮಲೆನಾಡ ಭಾರೀ ಗಾಳಿ-ಮಳೆಗೆ ವಿದ್ಯುತ್ ತಂತಿಗಳು ಕೂಡ ಜಗ್ಗಿದ್ದವು. ಅತ್ಯಂತ ಕೆಳಭಾಗದಲ್ಲಿ ಇದ್ದ ವಿದ್ಯುತ್ ತಂತಿಗಳಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ-ಜೆಡಿಎಸ್‌ನವರಿಂದ ದ್ವೇಷದ ರಾಜಕಾರಣ: ಸಚಿವ ಕೃಷ್ಣ ಬೈರೇಗೌಡ
ಪತ್ನಿಯ ಕೊಂದವ ಕಟ್ಟಡದಿಂದ ಜಿಗಿದು ಸಾವು: ಕೌಟುಂಬಿಕ ವಿಚಾರಕ್ಕೆ ತವರು ಮನೆ ಸೇರಿದ್ದ ಪತ್ನಿಯನ್ನು ಹಾಡಗಲೇ ಬರ್ಬರವಾಗಿ ಕೊಲೆ ಮಾಡಿ ಕೋಲಾರದ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯು ಪೊಲೀಸರ ಬಂಧನದ ಭೀತಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರಿನ ಸಿದ್ದಾಪುರ ನಿವಾಸಿ ತಬ್ರೇಜ್ ಪಾಷಾ(37) ಮೃತ ಆರೋಪಿ. ಆ.2ರಂದು ಬೆಳಗ್ಗೆ ಸುಮಾರು 8.30ಕ್ಕೆ ಚಾಮರಾಜಪೇಟೆ ಎಂ.ಡಿ.ಬ್ಲಾಕ್‌ನ ಅತ್ತೆ ಮನೆಗೆ ತೆರಳಿ ಅನಾರೋಗ್ಯಪೀಡಿತ ಅತ್ತೆಯ ಎದುರೇ ಪತ್ನಿ ಸೈಯಿದಾ ಫಾಜೀಯಾ ಫಾತೀಮಾ(34)ಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಚಾಮರಾಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದರು.
ಕರಾವಳಿ ಮತ್ತು ಮಲೆನಾಡಿಗೆ 300 ಕೋಟಿ ಅನುದಾನ ನೀಡಲು ಸಿಎಂ ಒಪ್ಪಿಗೆ: ಸಚಿವ ಕೃಷ್ಣ ಭೈರೇಗೌಡ
ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ: ಮತ್ತೊಂದೆಡೆ ಆರೋಪಿ ಪತ್ನಿ ಕೊಲೆಗೈದ ಬಳಿಕ ಕೋಲಾರಕ್ಕೆ ತೆರಳಿ ಮೂರು ದಿನ ಮಸೀದಿವೊಂದರಲ್ಲಿ ಆಶ್ರಯ ಪಡೆದಿದ್ದ. ಬಳಿಕ ಕೋಲಾರದ ಹೊರವಲಯದ ಜೂಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಈ ನಡುವೆ ಚಾಮರಾಜಪೇಟೆ ಠಾಣೆ ಪೊಲೀಸರು, ಆರೋಪಿ ಕೋಲಾರದಲ್ಲಿರುವ ಸುಳಿವು ಆಧರಿಸಿ ಕೋಲಾರಕ್ಕೆ ತೆರಳಿ ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ಪೊಲೀಸರು ತನ್ನನ್ನು ಹುಡುಕಿಕೊಂಡು ಕೋಲಾರಕ್ಕೆ ಬಂದಿರುವ ವಿಚಾರ ತಿಳಿದ ಆರೋಪಿ ತಬ್ರೇಜ್ ಪಾಷಾ, ಬಂಧನದ ಭೀತಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ.