Asianet Suvarna News Asianet Suvarna News

ಬೈಕ್ ಡಿಕ್ಕಿಯಾಗಿ ವೃದ್ದೆ ಸಾವು: ಮತ್ತಿನಲ್ಲಿದ್ದ ಸವಾರನ ಬಂಧನ

ಮದ್ಯ ಸೇವಿಸಿ ವೇಗವಾಗಿ ಬೈಕ್‌ ಚಲಾಯಿಸಿ ಪಾದಚಾರಿ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಆಂಧ್ರಹಳ್ಳಿ ಮುಖ್ಯರಸ್ತೆಯ ಹೋರೋಹಳ್ಳಿ ಬಳಿ ನಡೆದಿದೆ.

Elderly woman dies in bike collision Arrest of passenger gvd
Author
First Published Jun 10, 2024, 11:03 AM IST

ಬೆಂಗಳೂರು (ಜೂ.10): ಮದ್ಯ ಸೇವಿಸಿ ವೇಗವಾಗಿ ಬೈಕ್‌ ಚಲಾಯಿಸಿ ಪಾದಚಾರಿ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಆಂಧ್ರಹಳ್ಳಿ ಮುಖ್ಯರಸ್ತೆಯ ಹೋರೋಹಳ್ಳಿ ಬಳಿ ನಡೆದಿದೆ. ಹೇರೋಹಳ್ಳಿ ನಿವಾಸಿ ಶಿವಮ್ಮ (66) ಮೃತ ದುರ್ದೈವಿ.

ಏನಿದು ಘಟನೆ: ಶಿವಮ್ಮ ಬೆಳಗ್ಗೆ ವಾಯುವಿಹಾರ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಆಂಧ್ರ ಮುಖ್ಯರಸ್ತೆಯಲ್ಲಿ ಪಾನಮತ್ತ ಸುನೀಲ್‌ ದ್ವಿಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಿವಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಶಿವಮ್ಮನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಶಿವಮ್ಮ ಮೃತಪಟ್ಟಿದ್ದಾರೆ.

ಆಟೋ ಚಾಲಕರೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ದ್ವಿಚಕ್ರ ವಾಹನ ಸವಾರ ಸುನೀಲ್‌ನನ್ನು ವಶಕ್ಕೆ ಪಡೆದು ಆಲ್ಕೋಮೀಟರ್‌ನಲ್ಲಿ ಪರೀಕ್ಷೆ ಮಾಡಿದಾಗ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳಿಂದ ಕಸ ಸಂಗ್ರಹಕ್ಕೆ 100 ಶುಲ್ಕ?: ಸರ್ಕಾರ ಒಪ್ಪಿದರೆ ಜಾರಿ

ರಾಹುಲ್ ಬಿರಾದಾರ ಸಾವು: ಯುವತಿಯೊಂದಿಗೆ ಪ್ರೀತಿ ವಿಷಯವಾಗಿ ಪೇಟ್ರೋಲ್ ಸುರಿದು ಸುಡುವ ಪ್ರಯತ್ನಿಸಿದ್ದಾಗ ವೇಳೆ ಬೆಂಕಿ ತಗುಲಿ ಶೇಕಡಾ 75 ರಷ್ಟು ಸುಟ್ಟು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ತೀವೃ ನಿಗಾ ಘಟಕದಲ್ಲಿ ದಾಖಲಾಗಿದ್ದ ತಾಲೂಕಿನ ಢವಳಗಿ ಗ್ರಾಮದ ರಾಹುಲ್ ಬಿರಾದಾರ(25) ಎನ್ನುವ ಯುವಕ ಭಾನುವಾರ ಸಂಜೆ 4 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಪ್ರೇಮ ಪ್ರಕರಣಕ್ಕೆ ಸಂಭಂದಿಸಿದಂತೆ ಪಟ್ಟಣದ ಪ್ರತಿಷ್ಠಿತ ಕುಟುಂಭದ ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಅವರ ಮನೆಯಲ್ಲಿ ಮೇ 26 ರಂದು ರಾಹುಲ್ ಬಿರಾದಾರ ಯುವಕನ ಮೇಲೆ ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿತ್ತು ಎಂಬುದು ರಾಹುಲ ತಂದೆ ರಾಮನಗೌಡ ಬಿರಾದಾರ ಅವರು ನೀಡಿದ ದೂರಿನಲ್ಲಿದೆ.

Latest Videos
Follow Us:
Download App:
  • android
  • ios