ರಾಜಧಾನಿ ಬೆಂಗಳೂರಿನ ಪ್ರತಿಮನೆಗೆ ಮಾಸಿಕಕ್ 100 ಘನತ್ಯಾಜ್ಯ ಸೇವಾ ಶುಲ್ಕ ವಸೂಲಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ'  ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಕಾ೯ರದ ಅಪ್ಪಣೆ ದೊರೆಯುತ್ತಿದಂತೆ ಜಾರಿಗೊಳಿಸಲಿದೆ.

ವಿಶ್ವನಾಥ ಮಲೇಬೆನ್ನೂರು 

ಬೆಂಗಳೂರು (ಜೂ.10): ರಾಜಧಾನಿ ಬೆಂಗಳೂರಿನ ಪ್ರತಿಮನೆಗೆ ಮಾಸಿಕಕ್ 100 ಘನತ್ಯಾಜ್ಯ ಸೇವಾ ಶುಲ್ಕ ವಸೂಲಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ' ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಕಾ೯ರದ ಅಪ್ಪಣೆ ದೊರೆಯುತ್ತಿದಂತೆ ಜಾರಿಗೊಳಿಸಲಿದೆ. ಕಳೆದ ನಾಲೈ ದು ವರ್ಷಗಳಿಂದ ನಗರದಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಜನರಿಗೆ ಹೊರೆ ಆಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈ ಬಿಡಲಾಗಿತ್ತು. ಇದೀಗ ನಗರದ ಕಸ ವಿಲೇವಾರಿ ಜವಾಬ್ದಾರಿಯನ್ನು ಇತ್ತೀಚೆಗೆ ವಹಿಸಿಕೊಂಡ ಘನತ್ಯಾಜ್ಯ ನಿರ್ವಹಣಾ ಕಂಪನಿ ಮೂಲಕ ಶತಾಯಗತಾಯ ಸೇವಾ ಶುಲ್ಕ ವಸೂಲಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. 

ಇತರೆ ನಗರಗಳನ್ನಾಧಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ: ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣಾ ನಿಯಮ-2016 ಹಾಗೂ ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ- 2020 ರ ಅನ್ವಯ ವಸತಿಕಟ್ಟಡಗಳಿಂದಗರಿಷ್ಠಕ 200ಘನತ್ಯಾಜ್ಯ ಸೇವಾ ಶುಲ್ಕ ಹಾಗೂ ವಾಣಿಜ್ಯ ಬಳಕೆದಾರರಿಂದ 2500 ಸಂಗ್ರಹಿಸುವುದಕ್ಕೆ ಅವಕಾಶವಿದೆ. ದೇಶದ ಹಲವು ಮಹಾ ನಗರದಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈ ಸಂಗತಿಯನ್ನಾಧಾರಿಸಿ ರಾಜ್ಯ ಸರ್ಕಾರಕ್ಕೆಬಿಎಸ್‌ಡಬ್‌ಲ್ಯೂಎಂಎಲ್‌ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಸರ್ಕಾರದಿಂದ ಅನುಮೋದನೆ ದೊರೆಯುತ್ತಿದಂತೆ ಸೇವಾ ಶುಲ್ಕ ವಸೂಲಿ ಆರಂಭಗೊಳ್ಳಲಿದೆ.

ವಾಟ್ಸಾಪ್‌ನಲ್ಲಿ 'ಡಿಯರ್' ಮೆಸೇಜ್: ಪ್ರಶ್ನಿಸಿದಕ್ಕೆ ಮನೆಯಿಂದ ಪತ್ನಿ ನಾಪತ್ತೆ!

ಆಸ್ತಿ ತೆರಿಗೆಯೊಂದಿಗೆ ಸಂಗ್ರಹ: ಈ ಹಿಂದೆ ವಿದ್ಯುತ್ ಬಿಲ್‌ನೊಂದಿಗೆ ಘನತ್ಯಾಜ್ಯ ಸೇವಾಶುಲ್ಕ ಸಂಗ್ರಹಿಸುವ ಚರ್ಚೆಗಳು ನಡೆಸಲಾಗಿತ್ತು. ಆದರೆ, ಗೃಹ ಜ್ಯೋತಿ ಯೋಜನೆಯಿಂದ ಬಹುತೇಕರು ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವೇ ಇಲ್ಲ. ಹೀಗಾಗಿ, ಆಸ್ತಿ ತೆರಿಗೆಯೊಂದಿಗೆ ಸೇವಾಶುಲ್ಕವನ್ನು ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ. ಸಂಗ್ರಹವಾಗುವ ಸೇವಾ ಶುಲ್ಕವನ್ನು ಬಿಬಿಎಂಪಿಯು, ಬಿಎಸ್‌ಡಬ್‌ಲ್ಯೂಎಂಎಲ್‌ವರ್ಗಾವಣೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.

31 ಸಾವಿರ ಕೋಟಿ ಸಂಗ್ರಹ?: ಘನತ್ಯಾಜ್ಯ ನಿಯಮದಲ್ಲಿ ವಸತಿ ಕಟ್ಟಡದಿಂದ ಮಾಸಿಕ *200 ರವರೆಗೆ ವಸೂಲಿಗೆ ಅವಕಾಶವಿದ್ದರೂ ಸದ್ಯಕ್ಕೆ 7100 ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ.ಇದರಿಂದಬಿಎಸ್‌ಡಬ್‌ ಲ್ಯೂಎಂಎಲ್‌ಗೆ ವಾರ್ಷಿಕ ಸುಮಾರು 7800 ಕೋಟರಿಂದ 21 ಸಾವಿರ ಕೋಟಿವರೆಗೆ ಸಂಗ್ರಹವಾಗಲಿದೆ. ಈ ಮೊತ್ತದಲ್ಲಿ ನಗರದ ಕಸ ವಿಲೇವಾರಿ ನಿರ್ವಹಣೆ ಮಾಡಬಹುದು. ಸರ್ಕಾರ ಮತ್ತು ಬಿಬಿಎಂಪಿಯ ಅನುದಾನ ಪಡೆಯುವ ಅಗತ್ಯ ಇರುವುದಿಲ್ಲ ಎಂದು ಬಿಎಸ್‌ಡಬ್‌ಲ್ಯೂಎಂಎಲ್ ಅಧಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶುಲ್ಕದ ಹೊರೆ ಮನೆ ಮಾಲೀಕರಿಗೆ: ಒಂದು ಕಟ್ಟಡದಲ್ಲಿ 10 ಮನೆ ಇದ್ದರೆ, ಪ್ರತಿ ಮನೆಗೆ ಮಾಸಿಕವಾಗಿ 7100 ನಂತೆ ಸೇವಾ ಶುಲ್ಕ ವಿಧಿಸಲಾಗುವುದು. ಈ ಸೇವಾ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸೇರ್ಪಡೆಗೊಳಿಸಲಾಗುವುದು. ಮನೆ ಅಥವಾ ಕಟ್ಟಡ ಮಾಲೀಕ ಈ ಸೇವಾ ಶುಲ್ಕವನ್ನು ಪಾವತಿ ಮಾಡಬೇಕು. ನಗರದಲ್ಲಿ ಎಷ್ಟು ಕಟ್ಟಡ ಇವೆ. ಅದರಲ್ಲಿ ಎಷ್ಟು ಮನೆಗಳಿವೆ ಎಂಬುದರ ಬಗ್ಗೆ ಘನತ್ಯಾಜ್ಯ ನಿರ್ವಹಣಾ ಕಂಪನಿ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸುವುದಕ್ಕೆ ನಿರ್ಧರಿಸಿದೆ.

ಜಾತಿ, ಧರ್ಮ ಮೀರಿದ ಸಮಾಜ ನಿರ್ಮಾಣವಾಗಬೇಕು: ಸಚಿವ ಮಹದೇವಪ್ಪ

ಸೇವಾ ಶುಲ ಸಂಗ್ರಹ ಅನಿವಾರ್ಯ: ಕಂಪನಿ ನಗರದ ತ್ಯಾಜ್ಯವನ್ನು ಸೂಸೂತ್ರವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ 2021 ರಲ್ಲಿ ಘನತ್ಯಾಜ್ಯ ನಿರ್ವಹಣಾ ಕಂಪನಿ ಯನ್ನು ಸ್ಥಾಪಿಸಲಾಗಿತ್ತು. ಕಳೆದ 3ವರ್ಷದಲ್ಲಿ ಕಂಪನಿಯು ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕಾರ್ಯವನ್ನು ಬಿಬಿಎಂಪಿಯ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಜೂನ್ 1ರಿಂದ ನಗರದ ಮನೆ ಮನೆಯಿಂದ ಕಸ ಸಂಗ್ರಹಿಸಿ, ಸಾಗಾಣಿಕೆ ಮಾಡಿ, ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಘನತ್ಯಾಜ್ಯ ನಿರ್ವಹಣಾ ಕಂಪನಿಗೆ ಹಸ್ತಾಂತರಿಸಲಾಗಿದೆ. ಕಂಪನಿಗೆ ಕಸ ವಿಲೇವಾರಿ ಜವಾಬ್ದಾರಿ ನೀಡಲಾಗಿದೆ. ಕಂಪನಿ ನಿರ್ವಹ ಣೆಗೆ ಸೇವಾ ಶುಲ್ಕ ವಿಧಿಸುವುದು ಅನಿವಾ ರ್ಯವಾಗಿದೆ ಎಂದು ತ್ಯಾಜ್ಯ ನಿರ್ವಹಣಾ ಕಂಪನಿಯ ಅಧಿಕಾರಿಗಳು ತಿಳಿಸಿದರು.