ವೇರ್ ಹೌಸ್‌ನಿಂದ 38 ಐಪೋನ್ ಮಂಗಮಾಯ! ಸಿಕ್ಕಿಬಿದ್ದವರು ಯಾರು?
ಗೋದಾಮೀನಿಂದ ಐಪೋನ್ ಕದ್ದಿದ್ದ ಚಾಲಾಕಿ ಚೋರರು/ ವೇರ್ ಹೌಸ್ ಕೆಲಸ ಮಾಡುತ್ತಿದ್ದವರದ್ದೆ ಕಿತಾಪತಿ/ ಕೊರೋನಾ ಕಾರಣಕ್ಕೆ ಭದ್ರತಾ ತಪಾಸಣೆ ಕೈಬಿಡಲಾಗಿತ್ತು
ಗುರುಗ್ರಾಮ(ಡಿ.20) ಇವರು ಚಾಲಾಕಿ ಕಳ್ಳರು. ಅಮೆಜಾನ್ ವೇರ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದವರು ಬಿಲಾಸ್ಪುರದ ಕಂಪನಿಯ ಗೋದಾಮಿನಿಂದ 38 ಐ ಪೋನ್ ಗಳನ್ನು ಕಳ್ಳತನ ಮಾಡಿದ್ದರು.
ಕಳ್ಳತನ ಮಾಡಿಕೊಂಡು ಹೋಗಿದ್ದ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೊರೋನಾ ಕಾರಣಕ್ಕೆ ಭದ್ರತಾ ತಪಾಸಣೆಯನ್ನು ಕೈಬಿಡಲಾಗಿತ್ತು. ಇದೇ ಅವಕಾಶ ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿದ್ದರು.
ಚಳಿ ಶುರುವಾಗ್ತಿದ್ದಂತೆ ಜೋರಾಯ್ತು ಕಳ್ಳತನ
ಆರೋಪಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಸಿಸ್ಟಂಟ್ ಕಮಿಷನರ್ ಪ್ರೀತ್ ಸಿಂಗ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಮೊಬೈಲ್ ಗಳನ್ನು ರವಾನೆ ಮಾಡುತ್ತಿದ್ದ ಲಾರಿಯನ್ನೇ ಅಪರಹರಣ ಮಾಡಲಾಗಿತ್ತು.