* ಕಾಲೇಜುಗಳಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ ಸಂಗ್ರಹ* 40 ಸಾವಿರಕ್ಕೆ ಪ್ರಮಾಣ ಪತ್ರ ಮಾರಾಟ* ಇದನ್ನು ಬಳಸಿ ಕಂಪನಿಗಳಲ್ಲಿ ಕೆಲಸದ ಗಿಟ್ಟಿಸಿದ ವಿದ್ಯಾರ್ಥಿಗಳು
ಬೆಂಗಳೂರು(ಮಾ.09): ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ರಾಜ್ಯ ಹಾಗೂ ಹೊರರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ(Universities) ಹೆಸರಿನಲ್ಲಿ ನಕಲಿ ಅಂಕಪಟ್ಟಿ(Duplicate Markscard) ಹಾಗೂ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಜಯನಗರ ಪೊಲೀಸರು(Police), ನಾಲ್ವರನ್ನು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ರಘು (34), ಚಿಕ್ಕಲಸಂದ್ರದ ಧರ್ಮ ಕುಮಾರ್ (39), ಉತ್ತರಹಳ್ಳಿಯ ದೀಪಕ್ (32), ಕೆ.ಆರ್.ಪುರಂ ನಿವಾಸಿ ನರೇಶ್ ರೆಡ್ಡಿ (37) ಬಂಧಿತರು. ಅವರಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ 200 ನಕಲಿ ಅಂಕಪಟ್ಟಿ, ಬ್ಯಾಂಕ್ ಖಾತೆಯಲ್ಲಿದ್ದ .4.60 ಲಕ್ಷ, ಎರಡು ಲ್ಯಾಪ್‌ಟಾಪ್, ಪ್ರಿಂಟರ್ ಸೇರಿದಂತೆ ಹಲವು ನಕಲಿ ಸೀಲುಗಳು, ಹಾಲೋಗ್ರಾಮನ್ನು ಜಪ್ತಿ ಮಾಡಲಾಗಿದೆ.
Digital Documentation: ರಾಜ್ಯಪಾಲರ ಡಿಜಿಟಲ್ ಅಂಕಪಟ್ಟಿ ಆದೇಶ ವಾಪಸ್: ಗೊಂದಲಕ್ಕೆ ತೆರೆ
ಸೋಮವಾರ ಮಧ್ಯಾಹ್ನ ಜಯನಗರ 3ನೇ ಬ್ಲಾಕ್‌ನ ಎನ್‌ಎಂಕೆಆರ್ ಕಾಲೇಜಿನ ಬಳಿ ಆರೋಪಿಗಳಾದ(Accused) ರಘು ಮತ್ತು ಧರ್ಮಕುಮಾರ್ ಅನುತ್ತೀರ್ಣರಾಗಿ ಮರು ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳನ್ನು ಹುಡುಕುತ್ತಿದ್ದರು. ಈ ಬಗ್ಗೆ ಸಿಕ್ಕಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈ ನಕಲಿ ಅಂಕಪಟ್ಟಿ ದಂಧೆಯ ಜಾಲ ಬೆಳಕಿಗೆ ಬಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ಸಾಫ್ಟ್‌ವೇರ್ ಎಂಜಿನಿಯರ್ ನರೇಶ್, ಎಂಬಿಎ ಪದವಿಧರ ದೀಪಕ್, ಧರ್ಮಕುಮಾರ್ ಹಾಗೂ ರಘು ವಿಶ್ವವಿದ್ಯಾಲಯಗಳಲ್ಲಿ ಡೋನೇಷನ್ ಸೀಟು ಕೊಡಿಸುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದ ಆರೋಪಿಗಳು ಅಕ್ರಮವಾಗಿ ಹಣ(Money) ಗಳಿಸುವ ಉದ್ದೇಶದಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ(Students) 25 ಸಾವಿರದಿಂದ .40 ಸಾವಿರವರೆಗೆ ಹಣ ಪಡೆದು ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ(Degree Marks Card) ಮಾರಾಟ ಮಾಡುವ ದಂಧೆಗೆ ಇಳಿದಿದ್ದರು. ನಗರದ ವಿವಿಧ ಕಾಲೇಜುಗಳ ಬಳಿ ತೆರಳಿ ಅಟೆಂಡರ್‌ಗಳಿಗೆ ಕೊಂಚ ಹಣ ಕೊಟ್ಟು ಅನುತ್ತೀರ್ಣ ವಿದ್ಯಾರ್ಥಿಗಳ ಪಟ್ಟಿ ಹಾಗೂ ಅವರ ಮಾಹಿತಿ ಸಂಗ್ರಹಿಸುತ್ತಿದ್ದರು.
ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಗಾಳ!
ಕಾಲೇಜುಗಳಲ್ಲಿ(Colleges) ಸಂಗ್ರಹಿಸಿದ ಮಾಹಿತಿ ಆಧರಿಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ನೀಡುವ ಆಮಿಷವೊಡ್ಡುತ್ತಿದ್ದರು.
Bengaluru: ರಾತ್ರಿ ವೇಳೆ ಬಾಗಿಲು, ಕಿಟಕಿ ತೆರೆದಿರುವ ಮನೆಗಳೇ ಈತನ ಟಾರ್ಗೆಟ್..!
ಯಾವುದೇ ಪರೀಕ್ಷೆ(Exam) ಬರೆಯದೆ, ತರಗತಿಗೆ ಹೋಗದೆ ನಿಮಗೆ ಬೇಕಾದ ವಿಶ್ವವಿದ್ಯಾಲಯದ ಹೆಸರಿನಲ್ಲಿ ಉತ್ತೀರ್ಣದ ಅಂಕಪಟ್ಟಿಹಾಗೂ ಪ್ರಮಾಣ ಪತ್ರ ನೀಡುವುದಾಗಿ ಹೇಳುತ್ತಿದ್ದರು. ವಿದ್ಯಾರ್ಥಿಗಳು ಹಣ ನೀಡಿದ 20 ದಿನದಲ್ಲೇ ಕೇಳಿದ ವಿಶ್ವವಿದ್ಯಾಲಯದ ಹೆಸರಿನಲ್ಲಿ ಪದವಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ತಯಾರಿಸಿ ನೀಡುತ್ತಿದ್ದರು.
200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ
ಆರೋಪಿಗಳು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೈನ್ಸ್, ಛತ್ತಿಸ್‌ಗಡದ ಡಾ. ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಮಧ್ಯ ಪ್ರದೇಶದ ರವೀಂದ್ರನಾಥ ಠಾಗೋರ್ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಹಾಗೂ ಬಿಎ, ಎಂಬಿಎ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಈವರೆಗೂ ಆರೋಪಿಗಳು ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಂದ ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ಪಡೆದಿರುವ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳು, ಬ್ಯಾಂಕ್ ಸೇರಿದಂತೆ ವಿವಿಧೆಡೆ ಉದ್ಯೋಗ ಗಿಟ್ಟಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಾದ ರಘು ಹಾಗೂ ಧರ್ಮಕುಮಾರ್ ಕಾಲೇಜುಗಳಲ್ಲಿ ಸುತ್ತಾಡಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ತಂದರೆ, ಆರೋಪಿಗಳಾದ ನರೇಶ್ ರೆಡ್ಡಿ ಮತ್ತು ದೀಪಕ್ ನಕಲಿ ಅಂಕಪಟ್ಟಿಮತ್ತು ಪದವಿ ಪ್ರಮಾಣ ಪತ್ರ ಸೃಷ್ಟಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
