ಕೋಲಾರ, (ಆ.28): ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕಚ್ಚಿ ಭೀಕರವಾಗಿ ಕೊಂದಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಐನೋರಹಳ್ಳಿ  ನಡೆದಿದೆ. 

ಕುಡಿತದ ಅಮಲಿನಲ್ಲಿದ್ದ ಮಂಜುನಾಥ ಎನ್ನುವಾತ, ತನ್ನ ಹೆಂಡತಿ 28 ವರ್ಷದ ರತ್ನಮ್ಮಎನ್ನುವಾಕೆಯನ್ನು ಕೊಲೆ ಮಾಡಿದ್ದಾನೆ. ಎದೆ ಮೈ ಕೈ, ಕುತ್ತಿಗೆ ಕಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. 

ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪತಿ ಮಂಜುನಾಥ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದಿದ್ದಾನೆ. ಈ ವೇಳೆ ದಂಪತಿಯ ನಡುವೆ ಕಲಹ ಏರ್ಪಟ್ಟಿದ್ದು, ಈ ಸಮಯದಲ್ಲಿ ಕೋಪಗೊಂಡ ಪತಿ ಮಹಾಶಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

ವಿಷಯ ತಿಳಿದ ರತ್ನಮ್ಮನ ಸಂಬಂಧಿಗಳು ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರತ್ನಮ್ಮ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದಿದು ವಿಚಾರಣೆ ಮುಂದುವರೆಸಿದ್ದಾರೆ.

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ

"