ಬೆಂಗಳೂರು( ಅ. 29) ಡ್ರಗ್ಸ್ ಪ್ರಕರಕಣ ಒಂದಾದ ಮೇಲೆ ಒಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್ ಕೊಡಿಯೇರಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಜೊತೆ ಬಿನೀಶ್ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಆಧಾರದಲ್ಲಿ ಬಂಧನವಾಗಿದೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ್ದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ರೂ.  ಹೂಡಿಕೆ ಮಾಡಿದ್ದರು ಎಂಬುದು ಮತ್ತೊಂದು ಪ್ರಮುಖ ಅಂಶ.

ರಾಗಿಣಿ ಜತೆ ನಂಟು; ಭೀತಿಯಿಂದ ಜಾಮೀನು ಪಡೆದ ಕಾಂಗ್ರೆಸ್ ನಾಯಕ

ಸತತ ನಾಲ್ಕು ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆರೋಪಿ ಬಿನೀಶ್ ಕೊಡಿಯೇರಿಯನ್ನು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.

ಅನಿಕಾ ಡಿ. ಬಂಧನದ ನಂತರ ತೆರೆದುಕೊಂಡ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅವರ  ಬಂಧನವಾಗಿದೆ.  ಉಳಿದ ಆರೋಪಿಗಳನ್ನು ಸಿಸಿಬಿ ವಿಚಾರಣೆ ನಡೆಸಿದೆ. ಇದೀಗ ಪ್ರಕರಣವನನ್ನು ಸಿಸಿಬಿ ಮತ್ತು ಎನ್ ಸಿಬಿ ವಿವಿಧ ಹಂತದಲ್ಲಿ ವಿಚಾರಣೆ ನಡೆಸುತ್ತಿದ್ದು ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಸಹ ಮಧ್ಯ ಪ್ರವೇಶ ಮಾಡಿದೆ.