* ಗಂಡನಿಂದ ಹಣಕ್ಕೆ ಬೇಡಿಕೆ* ಕಾಮದ ಕಣ್ಣಿನಲ್ಲಿ ನೋಡುತ್ತಿದ್ದ ಮಾವ* ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ
ಬೆಂಗಳೂರು(ಜು. 28) ತವರು ಮನೆಯಿಂದ ಹಣ ತರು ಪತಿ ಕಿರುಕುಳ ನೀಡುತ್ತಿದ್ದರೆ ಇನ್ನೊಂದು ಕಡೆ ಮಾವನ ಕಾಮದ ಕಣ್ಣು ಆಕೆಯ ಮೇಲೆ ಬಿದ್ದಿತ್ತು. 24 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ.
ಕೋರಮಂಗಲ ನಿವಾಸಿ ಹರೀಶ್ 2016 ರಲ್ಲಿ ಮಹಿಳೆಯನ್ನು ವಿವಾಹವಾಗಿದ್ದ. ಕೆಲ ವರ್ಷಗಳ ಬಳಿಕ ಗಂಡ ತಗಾದೆ ತೆಗೆದಿದ್ದು ತವರು ಮನೆಯಿಂದ 10 ಲಕ್ಷ ರೂ. ತೆಗೆದುಕೊಂಡು ಬರಬೇಕು ಎಂದು ಪಟ್ಟು ಹಿಡಿದಿದ್ದ. ಇನ್ನೊಂದು ಕಡೆ ಮಾವ ಬಂದು ನಿನಗೆ ಬೇಕಾದ ಸಹಾಯ ಮಾಡುತ್ತೇನೆ ನಾನು ಹೇಳಿದಂತೆ ಕೇಳು ಎಂದಿದ್ದ. ಅಲ್ಲದೇ ಸ್ನಾನ ಮಾಡುವಾಕ ಕಿಟಕಿಯಲ್ಲಿ ಇಣುಕುವುದು, ಬಟ್ಟೆ ಬದಲಾಯಿಸುವಾಗ ಕದ್ದು ನೋಡುವುದು ಮಾಡುತ್ತಿದ್ದ.
ಪ್ರವಾಸಿ ತಾಣದಲ್ಲಿ ಪತ್ನಿಯೊಂದಿಗೆ ಸೆಕ್ಸ್ ಮಾಡಿ ಕತ್ತು ಹಿಸುಕಿದ
ಲೈಂಗಿಕವಾಗಿ ನೀನು ಸಹಕರಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಪಾಪಿ ಮಾವ ಸೊಸೆ ಬಳಿ ಕೇಳಿದ್ದ. ಮಹಿಳೆ ದೂರಿನಲ್ಲಿ ಎಲ್ಲ ವಿಚಾರಗಳನ್ನು ತಿಳಿಸಿದ್ದಾಎ.
ಬೇಸತ್ತ ಮಹಿಳೆ ಅಂತಿಮವಾಗಿ ದೂರು ದಾಖಲಿಸಿದ್ದಾರೆ. ಗಂಡ ಹರೀಶ್ ಮತ್ತು ಮಾವ ರಾಮಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ.
