ಮೈಸೂರಿನಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಬಂಧಪಟ್ಟಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತೌಸಿಫ್ (30) ಹಾಗೂ ಒಬ್ಬ ಬಾಲಕ ಬಂಧಿತರು. 

ಹುಣಸೂರು (ಜೂ.26): ಮೈಸೂರಿನಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಬಂಧಪಟ್ಟಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತೌಸಿಫ್ (30) ಹಾಗೂ ಒಬ್ಬ ಬಾಲಕ ಬಂಧಿತರು. ಈಗಾಗಲೇ ಅಭಿಷೇಕ್ 26 ಅಲಿಯಾಸ್ ಅಭಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಅಭಿ ನೀಡಿದ ಹೇಳಿಕೆ ಆಧರಿಸಿ ಮತ್ತಿಬ್ಬರನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. 

ಏನಿದು ಘಟನೆ: ಜೂನ್​ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್​ನಲ್ಲಿರುವ ಎಸ್​.ಎಸ್​. ಸಾಮಿಲ್​ನ ಕಾವಲುಗಾರರಾದ ವೆಂಕಟೇಶ್ (75)​ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂ (65) ನನ್ನು ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಮೃತರ ಜೇಬನ್ನು ಪರಿಶೀಲಿಸಿ ಅದರಲ್ಲಿ ಸಿಕ್ಕ 488 ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಘಟನೆ ನಡೆದ 36 ಘಂಟೆಗಳ ಒಳಗಾಗಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಿಷೇಕ್​ ಈ ಹಿಂದೆ ಹುಣಸೂರು ಪೊಲೀಸ್​ ಠಾಣಾ ವ್ಯಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ದೂರು

ಮನಬಂದಂತೆ ಚಾಕು ಇರಿದು ಅಡುಗೆ ಸಹಾಯಕನ ಕೊಲೆ: ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ನೇಪಾಳ ಮೂಲದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹರಳೂರು ನಿವಾಸಿ ಡೇವಿಡ್‌(20) ಕೊಲೆಯಾದ ಯುವಕ. ಶನಿವಾರ ರಾತ್ರಿ 10.30ರ ಸುಮಾರಿಗೆ ಕಸವನಹಳ್ಳಿ ರಸ್ತೆಯ ಬೇಕರಿ ಬಳಿ ಈ ಘಟನೆ ನಡೆದಿದೆ. ಕೊಲೆ ಸಂಬಂಧ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳ ಮೂಲದ ಡೇವಿಡ್‌ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ಸೋದರನ ಜತೆಗೆ ಹರಳೂರಿನಲ್ಲಿ ನೆಲೆಸಿದ್ದಾನೆ. ಕಳೆದೊಂದು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜತೆಗೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಜಗಳದ ವಿಚಾರವಾಗಿ ದ್ವೇಷ ಕಾರುತ್ತಿದ್ದ ಸ್ನೇಹಿತರು ಡೇವಿಡ್‌ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಶನಿವಾರ ರಾತ್ರಿ ಬೇಕರಿ ಬಳಿ ನಿಂತಿದ್ದ ಡೇವಿಡ್‌ ಮೇಲೆ ಏಕಾಏಕಿ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಮನ ಬಂದಂತೆ ಇರಿದು ಪರಾರಿಯಾಗಿದ್ದರು.

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಜಗ​ಳ: ಪೊಲೀಸ್‌ ಬಂದೋ​ಬಸ್ತ್ ಬಿಸಿ

ಈ ವೇಳೆ ತಪ್ಪಿಸಿಕೊಳ್ಳಲು ಡೇವಿಡ್‌ ಸುಮಾರು 50 ಮೀಟರ್‌ನಷ್ಟುದೂರು ಓಡಿ ಕುಸಿದು ಬಿದ್ದಿದ್ದಾನೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಡೇವಿಡ್‌ನನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.