ಲವ್ ಆಫ್ ಮೈ ಲೈಫ್ ಅಂತ ಹಳೆ ಹೆಂಡ್ತಿ ಫೋಟೋ ಶೇರ್: ಕೊಲೆ ಮಾಡಿದ ಲೀವಿಂಗ್ ಪಾರ್ಟ್ನರ್
ಮಹಿಳೆಯೊಂದಿಗೆ ಲೀವಿಂಗ್ ಟುಗೇದರ್ ರಿಲೇಷನ್‌ಶಿಪ್‌ನಲ್ಲಿದ್ದ 32 ಹರೆಯದ ವಿಚ್ಛೇದಿತ ವ್ಯಕ್ತಿಯನ್ನು ಲೀವಿಂಗ್ ಪಾರ್ಟ್ನರ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಯಾನಕ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತಾ: ಮಹಿಳೆಯೊಂದಿಗೆ ಲೀವಿಂಗ್ ಟುಗೇದರ್ ರಿಲೇಷನ್‌ಶಿಪ್‌ನಲ್ಲಿದ್ದ 32 ಹರೆಯದ ವಿಚ್ಛೇದಿತ ವ್ಯಕ್ತಿಯನ್ನು ಲೀವಿಂಗ್ ಪಾರ್ಟನರ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಯಾನಕ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಾರ್ಥಕ್ ದಾಸ್ ಎಂದು ಗುರುತಿಸಲಾಗಿದೆ. ಸಂಹತಿ ಪಾಲ್ ಎಂಬಾಕೆಯೊಂದಿಗೆ ಈತ ಲೀವಿಂಗ್ ಟುಗೇದರ್‌ನಲ್ಲಿದ್ದ.
ಕೊಲೆ ನಡೆಯುವುದಕ್ಕೆ ಕೆಲ ಗಂಟೆಗಳ ಮೊದಲು ಈತ ತನ್ನ ವಿಚ್ಛೇದಿತ ಪತ್ನಿ ಹಾಗೂ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ, ಜೊತೆಗೆ ಬೆಟರ್ ಹಾಫ್ (ಅರ್ಧಾಂಗಿ) ಲವ್ ಆಫ್ ಮೈ ಲೈಫ್( ನನ್ನ ಜೀವನದ ಪ್ರೀತಿ) ಎಂದೆಲ್ಲಾ ಫೋಟೋಗೆ ಹ್ಯಾಶ್ ಟ್ಯಾಗ್ ನೀಡಿದ್ದ, ಇದರಿಂದ ಕುಪಿತಗೊಂಡ ಲೀವಿಂಗ್ ಪಾರ್ಟನರ್ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ.
ಮದುವೆ ಆನಿವರ್ಸರಿಗೆ ಗಿಫ್ಟ್ ನೀಡದ ಗಂಡ, ಚಾಕುವಿನಿಂದ ಇರಿದ ಬೆಂಗಳೂರಿನ ಮಹಿಳೆ!
ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂಹತಿ ಪಾಲ್‌ಗೂ ಕೂಡ ವಿಚ್ಛೇದನವಾಗಿದ್ದು, ತನ್ನ ಮೊದಲ ಪತಿಯ ಜೊತೆಗಿನ ದಾಂಪತ್ಯದ ಫಲವಾಗಿ ಆಕೆಗೆ ಓರ್ವ ಮಗನೂ ಇದ್ದ, ಇತ್ತ ಸಾರ್ಥಕ್ ದಾಸ್ ಕೂಡ ವಿಚ್ಛೇದಿತನಾಗಿದ್ದು, ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೂ ಓರ್ವ ಮಗನಿದ್ದಾನೆ. ಕೋಲ್ಕತ್ತಾದ ಡುಂಡುಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಕಳೆದೊಂದು ವರ್ಷದಿಂದ ಜೊತೆಯಾಗಿ ವಾಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಇಬ್ಬರೂ ಆಗಾಗ ಜಗಳ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಹಲವು ಬಾರಿ ತನ್ನ ಲೀವಿಂಗ್ ಪಾರ್ಟನರ್‌ಗೆ ಚಾಕುವಿನಿಂದ ಇರಿದ ಸಂಹತಿ ಪಾಲ್ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ರಕ್ತದ ಮದುಡವಿನಲ್ಲಿ ಸಾರ್ಥಕ್ ದಾಸ್ ಮೃತದೇಹ ಬಿದ್ದಿರುವುದು ಕಂಡಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರು ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಅಪ್ಪನ ತೀಟೆಗೆ ಹೊರಟೋಯ್ತು ಪುಟ್ಟ ಮಗನ ಪ್ರಾಣ: ತಂದೆಯ ಲೀವಿಂಗ್ ಪಾರ್ಟನರ್‌ನಿಂದ ಮಗನ ಕೊಲೆ
ಆರೋಪಿ ಸಂಹತಿ ಪಾಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದು, ಆಕೆ ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಲೀವಿಂಗ್ ಪಾರ್ಟನರ್‌ನ ಸೋಶಿಯಲ್ ಮೀಡಿಯಾ ಪೋಸ್ಟೇ ಘಟನೆಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಆಕೆಯನ್ನು ಬಂಧಿಸಿ ಹತ್ಯೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಬರಾಕ್‌ಪೊರೆ ಡಿಸಿಪಿ ಅನುಪಮ್ ಸಿಂಗ್ ಹೇಳಿದ್ದಾರೆ.