Asianet Suvarna News Asianet Suvarna News

ಆರ್ಡರ್‌ ಮಾಡಿದ ವಸ್ತುಗಳಿಲ್ಲವೆಂದು ಡೆಲಿವರಿ ಬಾಯ್‌ಗೆ ಚಪ್ಪಲಿಯಿಂದ ಹಲ್ಲೆ: ಹಿಂದಿ ಭಾಷಿಕ ಮಹಿಳೆ ರಂಪಾಟ

ಆನ್‌ಲೈನ್‌ ಆರ್ಡರ್‌ನಲ್ಲಿ ಎರಡು ವಸ್ತುಗಳನ್ನು ತಂದಿಲ್ಲವೆಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿರುವ ದಂಪತಿ, ಬ್ಲಿಂಕಿಟ್‌ ಆಪ್ ಡೆಲಿವರಿ ಬಾಯ್‌ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

Delivery boy assaulted with slippers for not having ordered Items Hindi Speaking Lady rampage sat
Author
First Published Feb 2, 2023, 12:11 PM IST

ಬೆಂಗಳೂರು (ಫೆ.02): ತಾವು ಮಾಡಿದ ಆನ್‌ಲೈನ್‌ ಆರ್ಡರ್‌ನಲ್ಲಿ ಎರಡು ವಸ್ತುಗಳನ್ನು ತಂದಿಲ್ಲವೆಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿರುವ ದಂಪತಿ, ಬ್ಲಿಂಕಿಟ್‌ ಆಪ್ ಡೆಲಿವರಿ ಬಾಯ್‌ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

ಬ್ಲಿಂಕಿಟ್ ಆಪ್ ಮೂಲಕ ಆರೋಪಿಗಳಾದ ಶ್ರೀನಿ ಮತ್ತು ಆಕೆಯ ಪತಿ ಎಂಟು ಐಟಂಗಳನ್ನು ಒಳಗೊಂಡ ದಿನಸಿ ವಸ್ತುಗಳನ್ನು ಆರ್ಡರ್ ಆನ್‌ಲೈನ್‌ ಪೇಮೆಂಟ್‌ ಮಾಡದೇ ಕ್ಯಾಶ್‌ ಆನ್‌ ಡೆಲಿವರಿ ಮೋಡ್‌ ಮೂಲಕ ಆರ್ಡರ್‌ ಮಾಡಿದ್ದಾರೆ. ಅದರಂತೆ ಡೆಲಿವರಿ ಬಾಯ್ ವಿರೇಶ್ ಬೆಳಗ್ಗೆ 8 ಗಂಟೆ ಸುಮಾರಿಗೆ ಗೊಲ್ಲಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಅಪಾರ್ಟ್‌ಮೆಂಟ್‌ ಬಂದಿದ್ದರು. ಇನ್ನು ಆರ್ಡರ್‌ ಮಾಡಿದ ವಸ್ತುಗಳನ್ನು ಮನೆಯೊಳಗೆ ತೆದುಕೊಂಡು ಹೋಗಿ ಬಾಗಿಲು ಮುಚ್ಚಿಕೊಂಡು ನಂತರ ಹೊರಗೆ ಬಂದು ಎರಡು ವಸ್ತುಗಳು ಇಲ್ಲವೆಂದು ಆರೋಪ ಮಾಡಿದ್ದಾರೆ. ಆದರೆ, ಡೆಲಿವರಿ ಬಾಯ್‌ ನಾನು ಎಂಟೂ ವಸ್ತುಗಳನ್ನು ತಲುಪಿಸಿದ್ದು, ಹಣವನ್ನು ಕೊಡುವಂತೆ ಕೇಳಿದ್ದಾನೆ. ಇನ್ನು ಆರ್ಡರ್ ಮಾಡಿದ ವಸ್ತುಗಳಿಗೆ ಹಣ ಕೊಡದೇ ಕ್ಯಾತೆ ತೆಗೆದಿದ್ದರು. ಇದನ್ನ ಪ್ರಶ್ನಿಸಿದ್ದಕ್ಕೆ ಡೆಲಿವರಿ ಬಾಯ್ ವೀರೇಶ್ ಮೇಲೆ ಹಲ್ಲೆ‌‌ ಮಾಡಿದ್ದಾರೆ. ಉತ್ತರ ಭಾರತ ಮೂಲದ ಮಹಿಳೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಡೆಲಿವರಿ ಬಾಯ್ ರಿಂದ ಗಂಭೀರ ಆರೋಪ ಮಾಡಿದ್ದಾರೆ.

Bengaluru: ಸಿಲಿಕಾನ್‌ ಸಿಟಿಯಲ್ಲಿ ಡೆಲಿವರಿ ಬಾಯ್‌ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ!

ಈ ಕುರಿತು ಹೆಬ್ಬುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೆಸ್ಟಿಜ್ ಸನ್ ರೈಸ್ ಪಾರ್ಕ್ ನಾರ್ವುಡ್  ಅಪಾರ್ಟ್ಮೆಂಟ್ ನಲ್ಲಿ ನಿನ್ನೆ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನ  ಶ್ರೀನಿ ಎಂಬ ಮಹಿಳೆ ಗೃಹಪಯೋಗಿ ಸಾಮಾಗ್ರಿಗಳನ್ನ ಬುಕ್ ಮಾಡಿದ್ದರು. ಬುಕ್ ಮಾಡಿದ ೮ ಸಾಮಾಗ್ರಿಗಳನ್ನು ಡೆಲಿವರಿ ಬಾಯ್ ತಲುಪಿಸಿದ್ದನು. ಡೆಲಿವರಿ ಕೊಟ್ಟ ಸಾಮಾಗ್ರಿಗಳನ್ನ, ಡೆಲಿವರಿ ಬಾಯ್ ಮುಂದೆ ಚೆಕ್ ಮಾಡದೇ, ಮನೆ ಡೋರ್ ಕ್ಲೋಸ್ ಮಾಡಿಕೊಂಡು ನಂತರ ೨ ಸಾಮಾಗ್ರಿಗಳು ಕಡಿಮೆ ಇದೆಯೆಂದು ಕ್ಯಾತೆ ತೆಗೆದಿದ್ದಾಳೆ. 

ಮಹಿಳೆಯಿಂದ ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ: ಇನ್ನು ಹಲ್ಲೆ ಮಾಡಿದ ಉತ್ತರ ಪ್ರದೇಶ ರಾಜ್ಯದ ಮೂಲದ ಹಿಂದಿ ಮಹಿಳೆಯಿಂದ ಕ್ಷಮೆಗೆ ಆಗ್ರಹಿಸಿ, ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಿದ್ದ ಡೆಲಿವರಿ ಬಾಯ್‌ಗಳು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಅಪಾರ್ಟ್ಮೆಂಟ್ ನಿಂದ ಹಲ್ಲೆ ಮಾಡಿದ್ದ ಮಹಿಳೆ ಎಸ್ಕೇಪ್‌ ಆಗಿದ್ದಳು. ಹಲ್ಲೆಗೊಳಗಾದ ಡೆಲಿವರಿ ಬಾಯ್ ನ ದೂರು ದಾಖಲಿಸಿಕೊಳ್ಳಲು ಹೆಬ್ಬುಗೋಡಿ ಪೊಲೀಸರು ಹಿಂದೇಟು ಹಾಕಿದ್ದಾರೆ. ನಂತರ ಡೆಲಿವರಿ ಬಾಯ್ ಹೆದರಿಸಿ, ಸಂಧಾನ ಮಾಡಿ ಕಳಿಸಿದ್ದಾರೆಂದು ಆರೋಪ ಮಾಡಿದ್ದಾನೆ.

ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್

ದೂರು ದಾಖಲಿಸಿಕೊಳ್ಳಲು ಪೊಲೀಸರ ಮುಂದೆ ಧರಣಿ: ಇಂದು ಪೊಲೀಸ್ ಠಾಣೆಯ ಮುಂದೆ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ. ದೂರು ದಾಖಲಿಸಿಕೊಳ್ಳಲು ನಿರಾಸಕ್ತಿ ತೋರಿದ ಪೊಲೀಸರ ಮೇಲೆಯೂ ಹಿರಿಯ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಬ್ಲಿಂಕಿಟ್ ಆ್ಯಪ್ ಡೆಲವರಿ ಬಾಯ್ ಆಗಿದ್ದ ವೀರೇಶ್ ಅವರಿಗೆ ಇತರೆ ಸಂಸ್ಥೆಗಳ ಡೆಲಿವರಿ ಬಾಯ್‌ಗಳು ಹಾಗೂ ಕನ್ನಡಪರ ಸಂಘಟನೆಗಳು ಕೂಡ ಪ್ರತಿಭಟನೆಯ ವೇಳೆ ಸಾಥ್‌ ನೀಡಿದ್ದರು. 

Follow Us:
Download App:
  • android
  • ios