ಮುಂಜಾನೆ 4 ಗಂಟೆಗೆ ಬ್ಯಾಗ್ ಹಿಡಿದು ಹೊರಟಿದ್ದ ಅಫ್ತಾಬ್, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!
ಡೆಲ್ಲಿಯ 35 ಪೀಸ್ ಮರ್ಡರ್ ಕೇಸ್‌ನಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾನ ಅಕ್ಟೋಬರ್ 18ರ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿದೆ. ಆ ದಿನದಂದು ಮುಂಜಾನೆ 4 ಗಂಟೆಯ ವೇಳೆ ಮೂರು ಬಾರಿ ಕೈಯಲ್ಲಿ ಬ್ಯಾಗ್‌ಅನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಶೃದ್ಧಾ ವಾಕರ್‌ಳ ದೇಹದ ಭಾಗಗಳನ್ನು ಬ್ಯಾಗ್‌ನಲ್ಲಿಟ್ಟು ಆತ ಎಸೆಯಲು ಹೋಗುತ್ತಿರುವ ದೃಶ್ಯ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ,
ನವದೆಹಲಿ (ನ.19): ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಹೊಸ ಹೊಸ ಮಾಹಿತಿಗಳು ನಿರಂತರವಾಗಿ ಹೊರಬರುತ್ತಲೇ ಇದೆ. ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 18 ರ ಸಿಸಿಟಿವಿ ದೃಶ್ಯಗಳು ಪೊಲೀಸರ ಕೈಸೇರಿದೆ. ಇದರಲ್ಲಿ ಮುಂಜಾನೆ 4 ಗಂಟೆಗೆ ಅಫ್ತಾಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಬ್ಯಾಗುಗಳಲ್ಲಿ ಆತ ಶ್ರದ್ಧಾ ದೇಹದ ತುಂಡುಗಳನ್ನು ಹಾಕಿಕೊಂಡು ಎಸೆಯಲು ಹೋಗುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆ ರಾತ್ರಿ ಅಫ್ತಾಬ್ ಒಟ್ಟು ಮೂರು ಬಾರಿ ಇದೇ ರೀತಿ ಬ್ಯಾಗ್‌ಅನ್‌ನು ಹೆಗಲಿಗೇರಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.ಮತ್ತೊಂದೆಡೆ, ದೆಹಲಿ ಪೊಲೀಸರು ಮೆಹ್ರೌಲಿ ಫ್ಲಾಟ್‌ನಿಂದ ಎಲ್ಲಾ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳಲ್ಲಿ ಶ್ರದ್ಧಾ ಅವರ ಬಟ್ಟೆಗಳೂ ಸೇರಿವೆ. ಇವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಘಟನೆ ನಡೆದ ದಿನ ಇಬ್ಬರೂ ಧರಿಸಿದ್ದ ಬಟ್ಟೆ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಶ್ರದ್ಧಾ ಮರ್ಡರ್ ಕೇಸ್‌ನಲ್ಲಿ ಶನಿವಾರ ಕೆಲವೊಂದು ಅಪ್‌ಡೇಟ್‌ಗಳು ಆಗಿದ್ದು, ಅಫ್ತಾಬ್‌ನ ಮಂಪರು ಪರೀಕ್ಷೆಯ ಮಾಹಿತಿ ಇನ್ನಷ್ಟೇ ಬರಬೇಕಿದೆ. ಈ ನಡುವೆ ಶ್ರದ್ಧಾ ಅವರ ಇಬ್ಬರು ಸ್ನೇಹಿತರನ್ನು ಇಂದು ವಿಚಾರಣೆ ಮಾಡಲಾಗಿದೆ.
ಶ್ರದ್ಧಾ ಮರ್ಡರ್ ಕೇಸ್‌ನ ಇಂದಿನ ಅಪ್‌ಡೇಟ್:
- ಮೆಹ್ರೌಲಿ ಅರಣ್ಯದಲ್ಲಿ ಸಾಕ್ಷಿ ಪತ್ತೆಗಾಗಿ ದೆಹಲಿ ಪೊಲೀಸರ ಶೋಧ ಕಾರ್ಯಾಚರಣೆ ಸತತ ಆರನೇ ದಿನವೂ ಮುಂದುವರಿದಿದೆ.
- ಇಂದು ಅಫ್ತಾಬ್ ನ ನಾರ್ಕೋ ಪರೀಕ್ಷೆ ನಡೆಯಲಿದೆ.
- ದೆಹಲಿ ಪೊಲೀಸರು ಮುಂಬೈನಲ್ಲಿ ಶ್ರದ್ಧಾ ಅವರ ಸ್ನೇಹಿತ ರಾಹುಲ್ ಮತ್ತು ಗಾಡ್ವಿನ್ ಅವರನ್ನು ವಿಚಾರಣೆ ನಡೆಸಿದರು.
- ದೆಹಲಿ ಪೊಲೀಸರ ತಂಡವೊಂದು ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆಯ ತೋಷ್ ಗ್ರಾಮಕ್ಕೆ ತೆರಳಿ ಶ್ರದ್ಧಾ ಅವರ ಬಟ್ಟೆ, ಮೊಬೈಲ್ ಹಾಗೂ ಕೊಲೆಗಾಗಿ ಬಳಸಿದ ಆಯುಧ ಪತ್ತೆ ಹಚ್ಚಿದೆ.
- ದೆಹಲಿ ಪೊಲೀಸರು ಅಫ್ತಾಬ್‌ನೊಂದಿಗೆ ಗುರುಗ್ರಾಮ್‌ನ ಡಿಎಲ್‌ಎಫ್ 2 ನೇ ಹಂತಕ್ಕೆ ತೆರಳಿದ್ದರು. ಅಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲನೆ ಮಾಡಲಾಗಿದೆ.
ಅಫ್ತಾಬ್ ವಿರುದ್ಧ ಪ್ರಕರಣ ದಾಖಲಿಸಿದ್ದ ಶ್ರದ್ಧಾ: ಪೊಲೀಸರು ಶನಿವಾರ ಶ್ರದ್ಧಾ ಅವರ ಸ್ನೇಹಿತ ಗಾಡ್ವಿನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ನಂತರ, ಗಾಡ್ವಿನ್ ಮಾಧ್ಯಮಗಳಿಗೆ ಮಾತನಾಡಿದ್ದು, ನವೆಂಬರ್ 2020 ರಲ್ಲಿ ಅಫ್ತಾಬ್, ಶ್ರದ್ಧಾ ಮೇಲೆ ಹಲ್ಲೆ ನಡೆಸಿದ್ದರು. ಆ ಸಮಯದಲ್ಲಿ ಶ್ರದ್ಧಾ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಅಣ್ಣನೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದ. ಶ್ರದ್ಧಾ ತನ್ನ ಸಮಸ್ಯೆಯನ್ನು ಬಾಸ್ ಬಳಿ ಹೇಳಿಕೊಂಡಾಗ, ಆತ ಸಹಾಯ ಮಾಡಲು ನನ್ನ ಸಹೋದರನಿಗೆ ಹೇಳಿದ್ದರು. ನನ್ನ ಸಹೋದರನ ಸೂಚನೆಯ ಮೇರೆಗೆ ನಾನು ಶ್ರದ್ಧಾಳೊಂದಿಗೆ ನಲಸೋಪಾರಾದ ತುಳಿಂಜ್ ಪೊಲೀಸ್ ಠಾಣೆಗೆ ಹೋಗಿ ಅಫ್ತಾಬ್ ವಿರುದ್ಧ ದೂರು ನೀಡಿದ್ದೆ. ಇದಾದ ನಂತರ ಶ್ರದ್ಧಾ ದೂರು ಹಿಂಪಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಫ್ತಾಬ್ ನಾಟಕವಾಡಿದ್ದ. ಈ ಹಿನ್ನೆಲೆಯಲ್ಲಿ ಶ್ರದ್ಧಾ ಪ್ರಕರಣವನ್ನು ಹಿಂಪಡೆದಿದ್ದರು.
Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!
2020 ರಲ್ಲಿ ತನ್ನ ಮಾಜಿ ಮ್ಯಾನೇಜರ್ ಕರಣ್ ಭಕ್ಕಿ ಅವರೊಂದಿಗೆ ಶ್ರದ್ಧಾ ಅವರ ಚಾಟ್ ಕೂಡ ಗಮನಕ್ಕೆ ಬಂದಿದೆ. ಇದರಲ್ಲಿ ಶ್ರದ್ಧಾ, ಅಫ್ತಾಬ್ ಜೊತೆಗಿನ ಜಗಳದ ಬಗ್ಗೆ ಪ್ರಸ್ತಾಪಿಸಿದ್ದಾರೆ. 'ಹಾಸಿಗೆಯಿಂದ ಎದ್ದೇಳಲು ಕೂಡ ನನಗೆ ಶಕ್ತಿಯಿಲ್ಲ. ನನಗೆ ತುಂಬಾ ನೋವಾಗಿದೆ. ಕೆಲಸಕ್ಕೆ ಬರಲು ಸಾಧ್ಯವಿಲ್ಲ. ಬಿಪಿ ಕೂಡ ಕಡಿಮೆ ಆದ ಹಾಗೆ ಇದೆ. ನನ್ನ ದೇಹದ ಎಲ್ಲಾ ಕಡೆ ನೋವಾಗುತ್ತಿದೆ' ಎಂದು ಚಾಟ್‌ನಲ್ಲಿ ಬರೆದಿದ್ದು, ಇಂದು ನಾನು ಇಲ್ಲಿಂದ ಹೊರಡುವ ಬಗ್ಗೆ ನಿರ್ಧರಿಸಬೇಕು ಎಂದು ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸಿ ಬರೆದಿದ್ದಾಳೆ.
ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!
ನವೆಂಬರ್ 2020 ರಲ್ಲಿ, ನಾನು ಮೊದಲ ಬಾರಿಗೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ತಿಳಿದುಕೊಂಡೆ ಎಂದು ಶ್ರದ್ಧಾ ಅವರ ಮಾಜಿ ಮ್ಯಾನೇಜರ್ ಕರಣ್ ಹೇಳಿದ್ದಾರೆ. ಮನುಷ್ಯ ಒಬ್ಬ ಮನುಷ್ಯನ್ನು ಇಷ್ಟು ಕ್ರೂರವಾಗಿ ಹೇಗೆ ಕೊಲ್ಲಲು ಸಾಧ್ಯ ಅನ್ನುವುದೇ ನಂಬಲು ಸಾಧ್ಯವಾಗಿತ್ತಿಲ್ಲ. ಅಫ್ತಾಬ್ ತನ್ನ ಪತಿ ಎಂದು ಶ್ರದ್ಧಾ ನನಗೆ ಹೇಳಿದ್ದರು ಎಂದು ಕರಣ್ ತಿಳಿಸಿದ್ದಾರೆ. ಸಾಕಷ್ಟು ಹಲ್ಲೆಯ ಬಳಿಕ ಶ್ರದ್ಧಾ ಪೊಲೀಸರ ಮೊರೆ ಹೋಗಲು ತೀರ್ಮಾನಿಸಿದ್ದರು. ಆದರೆ ಈ ಮಧ್ಯೆ ಅಫ್ತಾಬ್ ತನ್ನನ್ನು ತೊರೆದರೆ ನಾನೇ ಏನಾದರೂ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆ ಬಳಿಕ ಪೊಲೀಸ್ ದೂರು ನೀಡದಿರಲು ಶ್ರದ್ಧಾ ಯೋಚನೆ ಮಾಡಿದ್ದರು ಎಂದಿದ್ದಾರೆ.