ಪ್ರಧಾನಿ ಮೋದಿ ಸರ್ಕಾರದಲ್ಲಿ ಮಂತ್ರಿ ನಾನು. ಯಾವ ಕೆಲಸ ಆಗಬೇಕಾದರೂ ನನ್ನ ಮೂಲಕವೇ ಆಗಬೇಕು ಎಂದು ಹಲವರನ್ನು ವಂಚಿಸುತ್ತಿದ್ದ ಖದೀಮನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧನ ಬಳಿಕ ಈತನ ಸ್ಟೋರಿ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಕಾರಣ ಈತ ಸೋನಿಯಾ ಗಾಂಧಿ ಆಪ್ತ ಎಂದು ಹಲವರನ್ನು ವಂಚಿಸಿದ್ದ.

ನವದೆಹಲಿ(ಮಾ.03): ಪ್ರಧಾನಿ ಮೋದಿ ಸರ್ಕಾರದಲ್ಲಿ ಮಂತ್ರಿ ನಾನು ಎಂದು ಹೇಳುತ್ತಾ ಓಡಾಡಿಕೊಂಡು ಹಲವರನ್ನು ವಂಚಿಸಿದ ಖದೀಮನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರದಲ್ಲಿ ಕೆಲಸ, ವರ್ಗಾವಣೆ ಸೇರಿದಂತೆ ಯಾವುದೇ ಕೆಲಸಗಳು ನನ್ನ ಮೂಲಕವೇ ನಡೆಯುತ್ತದೆ ಎಂದು ವಂಚಿಸುತ್ತಿದ್ದ ಈತ ಹಾಗೂ ಇತರರ ಮೂವರನನ್ನು ಬಂಧಿಸಲಾಗಿದೆ. ಈತನನನ್ನು ಸಂಜಯ್ ತಿವಾರಿ ಎಂದು ಗುರುತಿಸಲಾಗಿದೆ. ಬಂಧಿತನ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಬೆಚ್ಚಿ ಬಿದ್ದಿದ್ದಾೆ. ಈತ ಸರ್ಕಾರ ಬದಲಾದಂತೆ ಈತನ ಹುದ್ದೆಯೂ ಬದಲಾಗಿದೆ. ಈ ಹಿಂದೆ ಈತ ಸೋನಿಯಾ ಗಾಂಧಿ ಆಪ್ತ ಎಂದು ಹಲವರಿಗೆ ವಂಚಿಸಿದ್ದ. ಈ ಕುರಿತು ದಾಖಲಾದ ದೂರಿನಲ್ಲಿ 2017ರಲ್ಲಿ ಸಂಜಯ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದರು.

ಕೇಂದ್ರ ಸರ್ಕಾರದ ಸಚಿವ ಎಂದು ಸಂಜಯ್ ತಿವಾರಿ ಪೋಸ್ ನೀಡಿದ್ದ. ಹಲವು ಉದ್ಯಮಿಗಳು, ಸ್ಟಾರ್ಟ್ಅಪ್ ಕಂಪನಿಗಳ ಹೂಡಿಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸಿದ್ದ. 2017ರಲ್ಲಿ ಬಂಧನ್ನಕ್ಕೊಳಗಾಗಿ ಬಳಿಕ ಬಿಡುಗಡೆಯಾಗಿದ್ದ ಸಂಜಯ್ ತಿವಾರಿ, ಕೆಲ ತಿಂಗಳು ನಾಪತ್ತೆಯಾಗಿದ್ದ. ಬಳಿಕ ಕೇಂದ್ರ ಸಚಿವ ಅನ್ನೋ ನಕಲಿ ನೇಮ್ ಪ್ಲೇಟ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾನೆ. 

28 ಲಕ್ಷ ರು. ಸಾಲ ಪಡೆದು ವಂಚಿಸಿದ್ದ ಆನ್‌ಲೈನ್‌ ಗೆಳತಿ: ಶಿಕ್ಷಕ ಆತ್ಮಹತ್ಯೆ

ಸಂಜಯ್ ತಿವಾರಿ ವಿರುದ್ಧ ಹಲವು ದೂರುಗಳು ದಾಖಲಾಗಿತ್ತು. ಹೀಗಾಗಿ ಪೊಲೀಸರು ಈತನ ಹುಡುಕಾಟ ಆರಂಭಿಸಿದ್ದರು. ಇದೀಗ ಬಲೆಗೆ ಬಿದ್ದಿದ್ದಾನೆ. ದೆಹಲಿ ಪೊಲೀಸರು ಇಂಟೆಲೆಜೆನ್ಸಿ ಎಜೆನ್ಸಿ ಜೊತೆ ವಿಚಾರಣೆ ಆರಂಭಿಸಿದ್ದಾರೆ. ಹಲವು ದಾಖಲೆಗಳನ್ನು ತಿರುಚಿರುವ ಸಾಧ್ಯತೆ ಇದೆ ಅನ್ನೋ ಅನುಮಾನಗಳು ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಯುಪಿಎ ಸರ್ಕಾರದ ವೇಳೆ ಈತ ತಾನು ಸೋನಿಯಾ ಗಾಂಧಿ ಆಪ್ತ ಎಂದು ತಿರುಗಾಡಿದ್ದ. ಈ ಮೂಲಕ ಕೆಲವರಿಗೆ ಟೋಪಿ ಹಾಕಿದ್ದ.ಈತನ ವಿರುದ್ಧ ದೂರು ದಾಖಲಾಗಿತ್ತು. 2017ರಲ್ಲಿ ಸಂಜಯ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನನ ಮೇಲೆ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಸಿಬಿಐ ಅಧಿಕಾರಿ ಸೋಗಲ್ಲಿ ವಂಚನೆ: ಆರೋಪಿ ಬಲೆಗೆ
ಕೇಂದ್ರ ಸರ್ಕಾರದಲ್ಲಿ ಕೆಲಸ ಕೊಡಿಸುವುದಾಗಿ ಸಿಬಿಐ ಅಧಿಕಾರಿ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ವಂಚಕನನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲದ ಪ್ರವೀಣ್‌ ಶೆಟ್ಟಿಬಂಧಿತನಾಗಿದ್ದು, ಆರೋಪಿಯಿಂದ ನಕಲಿ ಗುರುತಿನ ಪತ್ರ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಶೃತಿ ಎಂಬ ಯುವತಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.

ಚಿನ್ನದ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡ, ಅಜ್ಜಿ ಗ್ಯಾಂಗ್ ಚಿನ್ನದ ಆಟಕ್ಕೆ ಬೆಸ್ತು ಬಿದ್ದ ಬಂಗಾರ ವ್ಯಾಪಾರಿ!

ಮೈಸೂರು ಶ್ರೀರಾಮಪುರದ ಪ್ರವೀಣ್‌ ಶೆಟ್ಟಿ, ಹಲವು ದಿನಗಳಿಂದ ನಗರದಲ್ಲಿ ನೆಲೆಸಿದ್ದ. ತನಗೆ ರಾಜಕಾರಣಿಗಳು ಪರಿಚಯವಿದೆ ಎಂದು ಹೇಳಿ ಜನರಿಗೆ ವಂಚಿಸಿ ಹಣ ಸಂಪಾದಿಸು ವುದೇ ಆತನ ಕೆಲಸವಾಗಿತ್ತು. ಇತ್ತೀಚಿಗೆ ಸ್ನೇಹಿತರ ಮೂಲಕ ಆತನಿಗೆ ಶೃತಿ ಸಂಪರ್ಕವಾಗಿದೆ. ಆಗ ಕೇಂದ್ರ ಅಪರಾಧ ತನಿಖಾ ವಿಭಾಗದ (ಸಿಬಿಐ) ದಕ್ಷಿಣ ಭಾರತ ಉಸ್ತುವಾರಿ ಹಾಗೂ ಭ್ರಷ್ಟಾಚಾರ ನಿಗ್ರಹದಳದ ರಾಷ್ಟ್ರೀಯ ನಿರ್ದೇಶಕ ಎಂದು ನಕಲಿ ಗುರುತಿನ ಪತ್ರ ತೋರಿಸಿ, ಆರೋಪಿ ಪರಿಚಯಿಸಿಕೊಂಡಿದ್ದ. ಬಳಿಕ ಸಂತ್ರಸ್ತೆಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಎಂದು ಅವರು ಮಾಹಿತಿ ನೀಡಿದರು.