Crime News: ಬ್ರೇಕಪ್ ಮಾಡಿದಳೆಂದು ಪ್ರೇಯಸಿಯನ್ನು ಕೊಂದ ವಿವಾಹಿತ

Crime News: ಗೆಳತಿ ಬ್ರೇಕ್‌ಅಪ್‌ ಮಾಡಿದ ಕಾರಣಕ್ಕೆ ಆಕೆಯನ್ನು ಕೊಂದ ಆರೋಪದಡಿ  29 ವರ್ಷದ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Delhi Married man arrested for killing girlfriend after she breaks up with him mnj

ನವದೆಹಲಿ (ನ. 01): ಗೆಳತಿ ಬ್ರೇಕ್‌ಅಪ್‌ ಮಾಡಿದ ಕಾರಣಕ್ಕೆ ಆಕೆಯನ್ನು ಕೊಂದ ಆರೋಪದಡಿ  29 ವರ್ಷದ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರೋಹಿತ್ ಗುಪ್ತಾ ಅಲಿಯಾಸ್‌ ಸೋನು ಎಂದು ಗುರುತಿಸಲಾಗಿದೆ.  ದೆಹಲಿಯ ಸದರ್ ಬಜಾರ್ ನಿವಾಸಿಯಾದ ಈತ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮೃತ ಮಹಿಳೆಯನ್ನು ಸಲ್ಮಾ ಎಂದು ಗುರುತಿಸಲಾಗಿದ್ದು, ಕರೋಲ್ ಬಾಗ್‌ನ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ರೋಹಿತ್ ಮೃತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಬ್ರೇಕಪ್ ನಂತರ ಹತಾಶೆಗೊಂಡು ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. 

ಅಕ್ಟೋಬರ್ 28 ರಂದು ವಜೀರ್‌ಪುರದ ಜೆಜೆ ಕಾಲೋನಿಯಲ್ಲಿ ಮಹಿಳೆಯೊಬ್ಬರ ಹತ್ಯೆಯಾಗಿತ್ತು. ಮಾಹಿತಿ ತಿಳಿದು ಘಟನಾಸ್ಥಳಕ್ಕೆ ಪೊಲೀಸರು ತೆರಳಿದ್ದರು. ಬಳಿಕ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರು ಮಹಿಳೆ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಬೆನ್ನತ್ತಿದ್ದ ಪೊಲೀಸರು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಿದ್ದರು. 

ಕ್ಷಮೆ ಕೇಳಿದ ಬಳಿಕವೂ ಚಾಕೋಲೇಟ್ ಕದ್ದ ವಿಡಿಯೋ ವೈರಲ್: ಸಾವಿಗೆ ಶರಣಾದ ವಿದ್ಯಾರ್ಥಿನಿ

ವಿಚಾರಣೆ ವೇಳೆ ಆರೋಪಿ ಮಹಿಳೆ ಜತೆ ಸಂಬಂಧ ಹೊಂದಿದ್ದ ಬಗ್ಗೆ ಮಾಹಿತಿ ನೀಡಿದ್ದು ಬ್ರೇಕಪ್‌ನಿಂದ ಬೇಸರಗೊಂಡು ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೃತ್ಯದ ಬಳಿಕ ತಲೆಮರೆಸಿಕೊಳ್ಳಲಿ ಬೇರೆ ಬೇರೆ ಖಾಸಗಿ ಹೋಟೆಲ್‌ಗಳಲ್ಲಿ ತಂಗಿದ್ದ ಆರೋಪಿ ಕೃತ್ಯಕ್ಕೆ ಬಳಸಿದ್ದ ಬಂದೂಕನ್ನೆ ಕೂಡ ಚರಂಡಿಗೆ ಎಸೆದಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ. ಇದಲ್ಲದೆ ತನ್ನ ವೈವಾಹಿಕ ಜೀವನದ ಹಲವು ವಿವಾದಗಳಿದ್ದವೂ ಎಂದು ಆರೋಪಿ ಬಹಿರಂಗಪಡಿಸಿದ್ದಾನೆ. 

Latest Videos
Follow Us:
Download App:
  • android
  • ios