ನವದೆಹಲಿ(ಸೆ. 22) ಈತ ಅಂತಿಂಥ ಚಾಲಾಕಿ ಆಸಾಮಿ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ನಕಲಿ ಖಾತೆ ಮಾಡಿಕೊಂಡು ಹೆಣ್ಣು ಮಕ್ಕಳ ಬೆತ್ತಲೆ ಪೋಟೋ ಸಂಗ್ರಹ ಮಾಡುತ್ತಿದ್ದ!

ಹದಿನೇಳು ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ ಮೇಲೆ ಆರೋಪಿಯ ಬಣ್ಣ ಬಯಲಾಗಿದೆ.  ರಾಶಿ ಗೋಯೆಲ್ ಎಂಬ ಹೆಸರಿನ ಮಹಿಳೆ (ಆರೋಪಿ) ಸೋಶಿಯಲ್ ಮೀಡಿಯಾ ಮುಖೇನ ನನ್ನ ಸಂಪರ್ಕ ಮಾಡಿ ನಿನ್ನ ಪೋಟೋ ಕಳಿಸು, ನಿನಗೆ ವೆಬ್ ಸೀರಿಸ್ ನಲ್ಲಿ ನಟನೆ ಮಾಡುವ ಅವಕಾಶ ಮಾಡಿಕೊಡುತ್ತೇನೆ ಎಂದು ನಂಬಿಸಿ ನನ್ನ ಬೆತ್ತಲೆ ಪೋಟೋ ಪಡೆದುಕೊಳ್ಳಲಾಗಿದೆ ಎಂದು ದೂರು ನೀಡಿದ್ದರು.

ಏನಿದು ಬೆತ್ತಲೆ ಭಯ; ಗಂಡನ ಮುಂದೆಯೂ ಆಗಲ್ಲ!

ಮಾತನ್ನು ನಂಬಿದ ಯುವತಿ ಬೆತ್ತಲೇ ಪೋಟೋ ಕಳುಹಿಸಿ ಕೊಟ್ಟಿದ್ದಾಳೆ. ಇನ್ನು ಹೆಚ್ಚಿನ ಪೋಟೋ ಕಳಿಸಿಕೊಡಲು ಬೇಡಿಕೆ ಬಂದಿದೆ. ಅನುಮಾನಗೊಂಡು ಯುವತಿ ಆ ಖಾತೆಯನ್ನು ಬ್ಲಾಕ್ ಮಾಡಿದ್ದಾಳೆ. ಇದಾದ ಮೇಲೆ ಇಬ್ಬರು ವ್ಯಕ್ತಿಗಳು ಯುವತಿಯನ್ನು ಸಂಪರ್ಕ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾರೆ.  ನಮ್ಮ ಬೇಡಿಕೆಗೆ ಒಪ್ಪದಿದ್ದರೆ ನಿನ್ನ ನ್ಯೂಡ್ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೇವೆ ಎಂಧು ಬೆದರಿಕೆ ಹಾಕಿದ್ದಾರೆ. ಸ್ನೇಹತರಿಗೂ ಇದನ್ನು ಕಳಿಸಿ ವೈರಲ್ ಮಾಡುತ್ತೇವೆ ಎಂದಿದ್ದಾರೆ.

ಪೊಲೀಸರಿಗೆ ಯುವತಿ ದೂರು ನೀಡಿದ ನಂತರ ಐಪಿ ಅಡ್ರೆಸ್ ಆಧಾರದಲ್ಲಿ ಆರೋಪಿ ಮಾಮ್ ಚಂದ್(37) ಎಂಬಾತನ ಬಂಧಿಸಿ ಕರೆದುಕೊಂಡು ಬರಲಾಗಿದೆ.   ನಾನು ಯಾರನ್ನು ಇಲ್ಲಿಯವರೆಗೆ ಭೇಟಿ ಮಾಡಿಲ್ಲ ಎಂದು  ಆರೋಪಿ ಹೇಳಿದ್ದಾನೆ. ಆತನ ಮೊಬೈಲ್ ಮತ್ತು ಲ್ಯಾಪ್ ಟಾಪ್ ಪರಿಶೀಲನೆ ಮಾಡಿದಾಗ ಹಲವಾರು ಮಹಿಳೆ ಮತ್ತು ಯುವತಿಯರ ಬೆತ್ತಲೆ ಪೋಟೋಗಳು ಲಭ್ಯವಾಗಿವೆ.