Asianet Suvarna News Asianet Suvarna News

Udupi: ಮದುವೆ ಮನೆಯಲ್ಲಿ ಯುವತಿ ಸಾವು: ದುರ್ಘಟನೆಗೆ ಕಂಬನಿ ಮಿಡಿದ ಜನತೆ

ಮದುವೆ ಮುನ್ನಾ ದಿನ ಆಚರಣೆ ಮಾಡಲಾಗುತ್ತಿದ್ದ ರೋಸ್‌ ಕಾರ್ಯಕ್ರಮದಲ್ಲಿ ಎಲ್ಲರೂ ಖುಷಿಯಿಂದ ಇರುವಾಗ, ಇತ್ತ 23 ವರ್ಷದ ಯುವತಿ ಕುಳಿತಲ್ಲಿಯೇ ಕುಸಿದು ಬೀಳುತ್ತಾಳೆ. ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಸಾವನ್ನಪ್ಪಿದ ದುರ್ಘಟನೆ ಉಡುಪಿ ಜಿಲ್ಲೆಯ ಹಾವಂಜೆಯಲ್ಲಿ ನಡೆದಿದೆ.

Death of a young woman in the marriage house People sympathized with the tragedy
Author
First Published Nov 24, 2022, 8:41 PM IST

ಉಡುಪಿ (ನ.24) : ಮದುವೆ ಮುನ್ನಾ ದಿನ ಆಚರಣೆ ಮಾಡಲಾಗುತ್ತಿದ್ದ ರೋಸ್‌ ಕಾರ್ಯಕ್ರಮದಲ್ಲಿ ಎಲ್ಲರೂ ಖುಷಿಯಿಂದ ಇರುವಾಗ, ಇತ್ತ 23 ವರ್ಷದ ಯುವತಿ ಕುಳಿತಲ್ಲಿಯೇ ಕುಸಿದು ಬೀಳುತ್ತಾಳೆ. ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಸಾವನ್ನಪ್ಪಿದ ದುರ್ಘಟನೆ ಉಡುಪಿ ಜಿಲ್ಲೆಯ ಹಾವಂಜೆಯಲ್ಲಿ ನಡೆದಿದೆ.

ಮನುಷ್ಯನ ಜೀವನದಲ್ಲಿ ಸಾವು ಹೇಗೆಲ್ಲಾ ಬರುತ್ತದೆ ಎಂದು ತಿಳಿಯುವುದೇ ಇಲ್ಲ. ಇಲ್ಲಿ ಮೃತ ಯುವತಿಯ ಜೀವನದಲ್ಲೂ ಕೂಡ ಇಂತಹದ್ದೇ ದುರ್ಘಟನೆ ನಡೆದಿದ್ದು, ಕುಳಿತಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಎಂದು ಗುರುತಿಸಲಾಗಿದೆ. ಜೋಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ರಾತ್ರಿ ಸುಮಾರು 8.30 ಸುಮಾರಿಗೆ ಕುಳಿತಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಸಂಬಂಧಿಕರು ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಜೋಸ್ನಾ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಮಗನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದ ತಾಯಿ ಕುಸಿದು ಬಿದ್ದು ಸಾವು

ಯುವಜನರೇ ಎಚ್ಚರ: ಮದುವೆ ಮನೆಗೆ ಆಗಮಿಸಿದ ಸಂಬಂಧಿಕರು ಈಗ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದಾರೆ. ಇನ್ನು ಮದುವೆ ನಡೆದಿದೆಯೋ ಇಲ್ಲವೋ ಎಂಬ ಮಾಹಿತಿ ಕೂಡ ಲಭ್ಯವಾಗಿಲ್ಲ. ಮತ್ತೊಂದೆಡೆ ಯುವತಿ ಸಾವಿಗೆ ನಿಖರ ಕಾರಣವೇನೆಂಬುದು ಕೂಡ ಪತ್ತೆಯಾಗಿಲ್ಲ. ಹೀಗಾಗಿ, ಯುವಜನರು ಕೂಡ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ನಿಗಾವಹಿಸಬೇಕು. ಆರೋಗ್ಯಕರ ಆಹಾರ ಸೇವನೆ ಮತ್ತು ದುಶ್ಚಟಗಳಿಂದ ದೂರ ಇರಬೇಕು. ಯಾವುದೇ ಚಟಗಳು ಇಲ್ಲದಿದ್ದರೂ ದೇಹವನ್ನು ದಂಡಿಸುವ ಚಟುವಟಿಕೆಗಳನ್ನು ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. 

ಡಿಜೆ ಸೌಂಡ್‌ಗೆ ತಾಯಿ ಸಾವು: ಇತ್ತೀಚೆಗೆ ರಾಜಸ್ಥಾನದ ಆಲ್ವಾರ್‍‌ ಜಿಲ್ಲೆಯಲ್ಲಿ ನಡೆಯುತತಿದ್ದ ಅದ್ಧೂರಿ ಮದುವೆ ಸಮಾರಂಭದಲ್ಲಿ ಡಿಜೆ ಸೌಂಡ್‌ ಸಿಸ್ಟಂ ಹಾಕಿಕೊಂಡು ಎಲ್ಲ ಬಂಧು ಬಳಗದವರು ಸೇರಿ ನೃತ್ಯ ಮಾಡುತ್ತಿದ್ದರು. ಆದರೆ, ಜೋರಾದ ಡಿಜೆ ಸೌಂಡ್‌ನ ಮುಂದೆ ವಧುವಿನ ತಾಯಿಯೂ ನೃತ್ಯ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಮಗನ ತೋಳಿನಲ್ಲಿಯೇ ಸಾವನ್ನಪ್ಪಿದ್ದರು. ಆದರೆ, ಮೃತ ಮಹಿಳೆಗೆ 50 ವರ್ಷವಾಗಿತ್ತು. ಆದರೆ, ಉಡುಪಿಯ ಯುವತಿಗೆ ಕೇವಲ 23 ವರ್ಷವಾಗಿದ್ದು, ಎಲ್ಲರೂ ಹುಡುಗಿಯ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

Follow Us:
Download App:
  • android
  • ios