Asianet Suvarna News Asianet Suvarna News

ಆಸ್ತಿ ವಿವಾದ: ಹುಟ್ಟುಹಬ್ಬ ಆಚರಣೆ ಗುಂಗಲಿದ್ದವನ ಮೇಲೆ ಡೆಡ್ಲಿ ಅಟ್ಯಾಕ್!

ಆತ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿ ಹೊಸ ಜೀವನ ನಡೆಸಲು ಆರಂಭಿಸಿದ್ದ, ಇನ್ನೂ ಹುಟ್ಟುಹಬ್ಬ ಅಂತಾ ಗೆಳೆಯರಿಗೆ ಪಾರ್ಟಿ ಕೊಡಿಸಿ ಮನೆಗೆ ವಾಪಾಸ್ ಆಗ್ತಿದ್ದ‌‌. ಕಾದು ಕುಳಿತಿದ್ದ ದುಷ್ಕರ್ಮಿಗಳು ಮಧ್ಯ ರಾತ್ರಿ ನಡು ರಸ್ತೆಯಲ್ಲೇ ಆತನ ಮೇಲೆ ಅಟ್ಯಾಕ್ ಮಾಡಿದರು.

Deadly Attack on Person over Property Dispute in Belagavi District gvd
Author
Bangalore, First Published Jun 9, 2022, 10:10 PM IST

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್.

ಚಿಕ್ಕೋಡಿ (ಜೂ.09): ಆತ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿ ಹೊಸ ಜೀವನ ನಡೆಸಲು ಆರಂಭಿಸಿದ್ದ, ಇನ್ನೂ ಹುಟ್ಟುಹಬ್ಬ ಅಂತಾ ಗೆಳೆಯರಿಗೆ ಪಾರ್ಟಿ ಕೊಡಿಸಿ ಮನೆಗೆ ವಾಪಾಸ್ ಆಗ್ತಿದ್ದ‌‌. ಕಾದು ಕುಳಿತಿದ್ದ ದುಷ್ಕರ್ಮಿಗಳು ಮಧ್ಯ ರಾತ್ರಿ ನಡು ರಸ್ತೆಯಲ್ಲೇ ಆತನ ಮೇಲೆ ಅಟ್ಯಾಕ್ ಮಾಡಿದರು. ಅಷ್ಟಕ್ಕೂ ಹುಟ್ಟುಹಬ್ಬ ಆಚರಣೆ ಗುಂಗಲಿದ್ದವನ ಮೇಲೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ಮಾಡಿದ್ಯಾರು? ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವವನ ಹಿನ್ನೆಲೆಯ ಏನೂ ಅಂತೀರಾ ಈ ಸ್ಟೋರಿ ನೋಡಿ. 

ಕೈಯಲ್ಲಿ ಮಚ್ಚು ಹಿಡಿದು ಮನುಷ್ಯ ಅನ್ನೋದನ್ನೂ ಲೆಕ್ಕಿಸದೇ ಕೊಚ್ಚುತ್ತಿರುವ ದುಷ್ಕರ್ಮಿ, ವಿರೋಧ ವ್ಯಕ್ತಪಡಿಸಿದ್ರೂ ಬಿಡದೇ ಎಲ್ಲೆಂದರಲ್ಲಿ ಹಲ್ಲೆ ಮಾಡಿ ಎಸ್ಕೇಪ್ ಆದ ಕಟುಕ, ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟು ಮೇಲೆದ್ದು ಆಸ್ಪತ್ರೆ ಬಾಗಿಲು ಬಳಿ ಒದ್ದಾಡುತ್ತಿರುವ ವ್ಯಕ್ತಿ, ಬೆಡ್ ಮೇಲೆ ಚಿಕಿತ್ಸೆ ಕುಟುಂಬಸ್ಥರಿಂದ ಕಾಳಜಿ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ. ಇಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ವ್ಯಕ್ತಿಯ ಹೆಸರು ಹಿರೋಜ್ ಮಾವರ್ಕರ್ ಅಂತಾ ಗೋಕಾಕ್ ನಗರದ ನಿವಾಸಿ. ಶಾಲೆಯೊಂದನ್ನ ನೋಡಿಕೊಳ್ಳುವುದರ ಜತೆಗೆ ಸ್ವಂತ ಪತ್ರಿಕೆಯೊಂದನ್ನ ಮಾಡಿಕೊಂಡು ಹಿರೋಜ್ ಜೀವನ ನಡೆಸುತ್ತಿದ್ದಾರೆ‌. 

ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕೋದೇ ತಪ್ಪಾ?

ಇನ್ನೂ ಹಿರೋಜ್ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು ಹೊಸ ಜೀವನದಲ್ಲಿ ಬ್ಯುಸಿಯಾಗಿದ್ದ. ಜೂನ್. 6ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಹಿರೋಜ್ ಅಂದು ರಾತ್ರಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿ ಮುಗಿಸಿಕೊಂಡು ವಾಪಾಸ್ ಆಗ್ತಿದ್ದಾನೆ. ಈ ವೇಳೆ ಹೊಂಚು ಹಾಕಿಕೊಂಡು ಕುಳಿತಿದ್ದ ಮೂವರು ದುಷ್ಕರ್ಮಿಗಳು ವಾಲ್ಮೀಕಿ ವೃತ್ತದ ಬಳಿ ಹಿರೋಜ್ ಮೇಲೆ ಅಟ್ಯಾಕ್ ಮಾಡ್ತಾರೆ. ಒಬ್ಬನೇ ಮನೆಗೆ ಹೋಗ್ತಿರುವಾಗ ಬೈಕ್ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗ್ತಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಹಿರೋಜ್ ಇನ್ನೂರು ಮೀಟರ್ ದೂರದಲ್ಲಿದ್ದ ಖಾಸಗಿ ಆಸ್ಪತ್ರೆ ಬಳಿ ಓಡೋಡಿ ಬರ್ತಾನೆ. 

ಹೀಗೆ ಬಂದವನ ಹಿಂದೆಯೇ ಬಂದ ಆರೋಪಿ ರಮೇಶ್ ಕಿಲಾರಿ ಎಂಬಾತ ಕೈಯಲ್ಲಿದ್ದ ಮಚ್ಚಿನಿಂದ ಹಲ್ಲೆ ಮಾಡ್ತಾನೆ. ಇಷ್ಟೇ ವಿರೋಧ ವ್ಯಕ್ತಪಡಿಸಿದರು ತಲೆಗೆ, ಕೈಗೆ ಎದೆ ಭಾಗಕ್ಕೆ ತೀವ್ರವಾಗಿ ಹೊಡೆದು ಹಲ್ಲೆ ಮಾಡ್ತಾನೆ. ಹಿರೋಜ್ ಮೂರ್ಛೆ ಹೋದ ಬಳಿಕ ಅಲ್ಲಿಂದ ಪಾಪಿ ರಮೇಶ್ ಎಸ್ಕೇಪ್ ಆಗ್ತಾನೆ. ಇನ್ನೂ ಮೂರ್ಛೆ ಹೋಗಿ ಎಚ್ಚರಾದ ಹಿರೋಜ್ ಅಷ್ಟೆಲ್ಲಾ ಗಾಯವಾದ್ರೂ ಮತ್ತೆ ಎದ್ದು ಆಸ್ಪತ್ರೆ ಬಾಗಿಲು ಬಳಿ ಬಂದು ಬೀಳ್ತಾನೆ‌. ಒಂದು ಗಂಟೆ ಸುಮಾರಿಗೆ ಈ ಘಟನೆಯಾಗಿದ್ದು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತ ಆತ ಆಸ್ಪತ್ರೆ ಬಾಗಿಲು ಬಳಿ ಬಿದ್ದಿರುವುದನ್ನ ಗಮನಿಸಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ತಿಳಿಸಿ ಕೂಡಲೇ ಹಿರೋಜ್‌ಗೆ ಆಸ್ಪತ್ರೆಗೆ ಸೇರಿಸಿದ್ದಾರೆ. 

ಇನ್ನೂ ಹಿರೋಜ್‌ಗೆ ಮೂರು ದಿನಗಳಿಂದ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು 33 ಸ್ಟೀಚ್ ಹಾಕಿದ್ದಾರೆ. ಕೈಯಲ್ಲಿನ ಬೆರಳು ಕಟ್ ಆಗಿದ್ದು, ತಲೆ ಭಾಗಕ್ಕೂ ಹೆಚ್ಚಿನ ಗಾಯವಾಗಿದ್ದು ಸದ್ಯ ಸ್ವಲ್ಪ ಚೇತರಿಸಿಕೊಳ್ತಿದ್ದಾನೆ ಹಿರೋಜ್. ಇನ್ನೂ ಗೋಕಾಕ್ ನಗರ ಠಾಣೆಯಲ್ಲಿ ಮೂರು ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿ ರಮೇಶ್ ಕಿಲಾರಿಗೆ ಈಗಾಗಲೇ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ‌. ಅಷ್ಟಕ್ಕೂ ಅರೆಸ್ಟ್ ಆದ ರಮೇಶ್ ಜಾಗದ ವಿಚಾರದಲ್ಲಿ ಈ ರೀತಿ ಕೊಲೆಗೆ ಯತ್ನ ನಡೆಸಿದ್ದಾನಂತೆ. ಹಿರೋಜ್‌ ತಂದೆ ಹಳೆ ದನದ ಪೇಟೆ ಬಳಿ 15ಗುಂಟೆ ಜಾಗ ಪಡೆದಿದ್ದು, ಅದರಲ್ಲಿ ನಾಲ್ಕು ಗುಂಟೆ ಈಗಾಗಲೇ ತಮ್ಮ ಹೆಸರಿಗೆ ಮಾಡಿಕೊಂಡು ಶಾಲೆಯನ್ನ ನಡೆಸುತ್ತಿದ್ದಾರೆ. ಇನ್ನೂಳಿದ ಹನ್ನೊಂದು ಗುಂಟೆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಹಿರೋಜ್ ಓಡಾಡ್ತಿದ್ದನಂತೆ. 

ಹೆಗಡೆವಾರ್‌ ಇತಿಹಾಸ ಓದಿದ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ: ನಿರಾಣಿ

ಆ ಜಾಗ ನಮ್ಮದು ಅಂತಾ ರಮೇಶ್ ಜಗಳ ಮಾಡಿದ್ದನಂತೆ. ಇದಾದ ಬಳಿಕ ಜೂನ್.6 ರಂದು ಕೊಲೆ ಮಾಡಲು ಯತ್ನಿಸಿದ್ದು ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕು ಅಂತಾ ಹಿರೋಜ್ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.‌ ಸದ್ಯ ಗೋಕಾಕ್ ನಗರದ ಜನರು ಘಟನೆ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ‌. ಇದೀಗ ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಹಿರೋಜ್‌ಗೆ ಚಿಕಿತ್ಸೆ ಮುಂದುವರೆದಿದೆ‌. ಇತ್ತ ಓರ್ವ ಆರೋಪಿ ಬಂದಿಸಿರುವ ಗೋಕಾಕ್ ಪೊಲೀಸರು ಮತ್ತಿಬ್ಬರ ಪತ್ತೆಗೆ ಬೆನ್ನು ಬಿದ್ದಿದ್ದಾರೆ. ಆದರೆ ಜಾಗದ ವಿಚಾರದಲ್ಲಿ ಮೃಗದಂತೆ ನಡೆದುಕೊಂಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಅನ್ನೋದು ಕುಟುಂಬಸ್ಥರ ಒತ್ತಾಯ.

Follow Us:
Download App:
  • android
  • ios