Asianet Suvarna News Asianet Suvarna News

ಗದಗ: ಜಮೀನಲ್ಲಿ ಮಲಗಿದ್ದ ರೈತ ಕಾರ್ಮಿಕನ ಬರ್ಬರ ಹತ್ಯೆ ಪ್ರಕರಣ, ರುಂಡ ಪತ್ತೆ ಹಚ್ಚಿದ ಪೊಲೀಸರು

ನಿನ್ನೆಯಿಂದ ರುಂಡಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಶ್ವಾನದಳ, ಸೀನ್ ಆಫ್ ಕ್ರೈಂ ತಂಡದ ಸಹಾಯದೊಂದಿಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು(ಭಾನುವಾರ) ರುಂಡ ಪತ್ತೆ ಹಚ್ಚಲಾಗಿದೆ. 

Deadbody Found in Gadag grg
Author
First Published Dec 10, 2023, 1:44 PM IST

ಗದಗ(ಡಿ.10):  ಜಮೀನಲ್ಲಿ ಮಲಗಿದ್ದ ರೈತ ಕಾರ್ಮಿಕನ ಕತ್ತು ಕತ್ತರಿಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಸ್ಥಳದಿಂದ 400 ಮೀಟರ್ ದೂರದಲ್ಲಿ ರುಂಡ ಪತ್ತೆಯಾಗಿದೆ. ಗದಗ ಗ್ರಾಮಾಂತರ ಪೊಲೀಸರು ರುಂಡ ಪತ್ತೆ ಹಚ್ಚಿದ್ದಾರೆ. 

ನಿನ್ನೆಯಿಂದ ರುಂಡಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಶ್ವಾನದಳ, ಸೀನ್ ಆಫ್ ಕ್ರೈಂ ತಂಡದ ಸಹಾಯದೊಂದಿಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು(ಭಾನುವಾರ) ರುಂಡ ಪತ್ತೆ ಹಚ್ಚಲಾಗಿದೆ.  ಮೆಣಸಿನಕಾಯಿ ಜಮೀನು ಕಾವಲು ಕಾಯುತ್ತಿದ್ದವನ್ನ ಅಪರಿಚತರು ಕೊಲೆ ಮಾಡಿದ್ದರು. ಗದಗ ತಾಲೂಕಿನ ತಿಮ್ಮಾಪುರ ವ್ಯಾಪ್ತಿಯ ಜಮೀನಿನಲ್ಲಿ ಭೀಕರ ಹತ್ಯೆ ನಡೆದಿತ್ತು. ಕೊಪ್ಪಳದ ಮಾಳೆಕೊಪ್ಪ ಮೂಲದ ಸಣ್ಣಹನಂತಪ್ಪ ವಜ್ರದ್ ಎಂಬುವವರನ್ನ ಕೊಲೆ ಮಾಡಲಾಗಿತ್ತು.  

ಬೆಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಆಟೋ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು

ತಿಮ್ಮಾಪುರ ಗ್ರಾಮದ ರೈತ ಬಾಲಪ್ಪ ಕೊಪ್ಪದ ಎನ್ನುವ ರೈತರ ಜಮೀನಿನಲ್ಲಿ ಕೊಲೆ ಮಾಡಲಾಗಿತ್ತು. ನಿಗೂಢ ಕಾರಣಕ್ಕೆ ರೈತ ಸಣ್ಣಹನುಂತಪ್ಪ ವಜ್ರದ್ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.  ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ತಂಡಗಳನ್ನ ರಚನೆ ಮಾಡಲಾಗಿದೆ ಎಂದು ಗದಗ ಎಸ್‌ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios