Asianet Suvarna News Asianet Suvarna News

ಬೆಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಆಟೋ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು

ಮೈಸೂರು ರಸ್ತೆಯ ಟಿಂಬರ್ ಲೇಔಟ್ ಸಮೀಪ ತನ್ನ ಗೆಳೆಯರ ಜತೆ ಮಂಗಳವಾರ ರಾತ್ರಿ ಅರುಣ್ ಮಾತನಾಡುತ್ತ ನಿಂತಿದ್ದಾಗ ಆತನ ಮೇಲೆ ಹಂತಕರು ಎರಗಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅರುಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. 

Auto Driver Killed in Bengaluru grg
Author
First Published Dec 7, 2023, 6:47 PM IST

ಬೆಂಗಳೂರು(ಡಿ.07):  ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬನ ಮೇಲೆ ಪರಿಚಿತರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಯಾಟರಾಯನಪುರ ನಿವಾಸಿ ಅರುಣ್‌ (40) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಜೆ.ಜೆ.ನಗರದ ಅಪ್ಪು, ಮನು ಹಾಗೂ ಹರೀಶ್‌ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ರಸ್ತೆಯ ಟಿಂಬರ್ ಲೇಔಟ್ ಸಮೀಪ ತನ್ನ ಗೆಳೆಯರ ಜತೆ ಮಂಗಳವಾರ ರಾತ್ರಿ ಅರುಣ್ ಮಾತನಾಡುತ್ತ ನಿಂತಿದ್ದಾಗ ಆತನ ಮೇಲೆ ಹಂತಕರು ಎರಗಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅರುಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನೀಲಗಿರಿ ಮರಕ್ಕಾಗಿ ಫೈಟ್‌, ವ್ಯಕ್ತಿಯೊಬ್ಬನಿಗೆ ಗುಂಡಿಟ್ಟು ಸಾಯಿಸಿದ ಕಿರುತೆರೆ ನಟ!

ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್‌ ನಿಲ್ದಾಣ ಸಮೀಪ ಎಟಿಸಿಸಿ ಕ್ವಾಟ್ರರ್ಸ್‌ನಲ್ಲಿ ನೆಲೆಸಿದ್ದ ಅರುಣ್‌, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಈ ಹಿಂದೆ ಆತನ ಮೇಲೆ ಕೊಲೆ ಯತ್ನ ಪ್ರಕರಣವೊಂದು ಬ್ಯಾಟರಾಯನಪುರ ಠಾಣೆಯಲ್ಲಿ ದಾಖಲಾಗಿತ್ತು. ವೈಯಕ್ತಿಕ ವಿಚಾರವಾಗಿ ಜೆ.ಜೆ.ನಗರದ ಅಪ್ಪು ಹಾಗೂ ಆತನ ಸ್ನೇಹಿತರಿಗೂ ಅರುಣ್ ಮಧ್ಯೆ ಮನಸ್ತಾಪ ಬೆಳೆದಿತ್ತು. ಈ ಹಿನ್ನಲೆಯಲ್ಲಿ ಅರುಣ್‌ನನ್ನು ಹೊಂಚು ಹಾಕಿ ಆರೋಪಿಗಳು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow Us:
Download App:
  • android
  • ios