ಕೊಡಗು: ನೇಣುಬಿಗಿದ ಸ್ಥಿತಿಯಲ್ಲಿ ಕಾರ್ಮಿಕ ಮಹಿಳೆ ಶವ ಪತ್ತೆ
ಮತ್ತಿಕಾಡು ಕಾಫಿ ತೋಟವೊಂದರಲ್ಲಿ ಕರಿಮೆಣಸು ಕೊಯ್ಲು ಕೆಲಸಕ್ಕೆ ಆಗಮಿಸಿದ ತಮಿಳುನಾಡಿನ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸುಂಟಿಕೊಪ್ಪ (ಏ.9): ಮತ್ತಿಕಾಡು ಕಾಫಿ ತೋಟವೊಂದರಲ್ಲಿ ಕರಿಮೆಣಸು ಕೊಯ್ಲು ಕೆಲಸಕ್ಕೆ ಆಗಮಿಸಿದ ತಮಿಳುನಾಡಿನ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ತಿರುನೆಲ್ವಿ ಜಿಲ್ಲೆಯ ಗುಣಶೇಖರ್ ಎಂಬವರ ಪುತ್ರಿ ಶಾಲಿನಿ (21) ಎಂಬಾಕೆಯನ್ನು ಕಳೆದ 2 ವರ್ಷಗಳ ಹಿಂದೆ ಸಂಜೀವ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು, 2 ತಿಂಗಳ ಹಿಂದೆ ದಂಪತಿ ಕರಿಮೆಣಸು ಕೊಯ್ಲು ಕೆಲಸಕ್ಕೆಂದು ಮತ್ತಿಕಾಡುವಿನ ಚೌಡಿಕಾಡು ತೋಟದಲ್ಲಿ ಬಂದು ಲೈನ್ ಮನೆಯಲ್ಲಿ ನೆಲೆಸಿದ್ದರು.
Kodagu: ಕಾವೇರಿ ನೀರು ಕ್ಷೀಣದೊಂದಿಗೆ ನದಿಯ ಬಣ್ಣವೂ ಬದಲು!
ಏ.4ರಂದು ತಮಿಳುನಾಡಿನಲ್ಲಿದ್ದ ಶಾಲಿನಿ ತಂದೆಗೆ ಕರೆ ಮಾಡಿದ್ದ ಸಂಜೀವ್, ಸೋಮವಾರ ಬೆಳಿಗ್ಗೆಯಿಂದ ಶಾಲಿನಿ ಕಾಣೆಯಾಗಿದ್ದಾಳೆ ಎಂದು ವಿಷಯ ತಿಳಿಸಿದ್ದು, ಈ ಬಗ್ಗೆ ಸುಂಟಿಕೊಪ್ಪ(Suntikoppa) ಪೊಲೀಸ್ ಠಾಣೆಗೂ ದೂರು ನೀಡಿದ್ದರು. ತಮಿಳುನಾಡಿ(Tamilnadu woman)ನಿಂದ ಬಂದ ಶಾಲಿನಿಯ ತಂದೆ ಗುಣಶೇಖರ್, ಮಗಳು ಕಾಣೆಯಾಗಿರುವುದರಲ್ಲಿ ಅಳಿಯನ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಏ.6ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಸಮೀಪದ ದೇವಿ ತೋಟದ ಮರದಲ್ಲಿ ಶಾಲಿನಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡÜ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪ್ರಕಾಶ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್, ಪೊಲೀಸ್ ಮುಖ್ಯಪೇದೆ ಸತೀಶ್, ಜಗದೀಶ್ ಸ್ಥಳ ಪರಿಶೀಲನೆ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಬೆಳಗಾವಿ ಮೂಲದ ನವ ವಿವಾಹಿತೆ ಗ್ರಾಮಲೆಕ್ಕಿಗೆ ಮೈಸೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!
ಸುಂಟಿಕೊಪ್ಪ: ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ
ರಾಷ್ಟ್ರೀಯ ಹೆದ್ದಾರಿ(National highway) ಬದಿ ಮನೆಯ ಮುಂಭಾಗ ನಿಲ್ಲಿಸಿದ್ದ 2 ಕಾರುಗಳಿಗೆ ನಸುಕಿನ ವೇಳೆ ಕಾಡಾನೆ(Wild elephant) ದಾಳಿ ನಡೆಸಿದ ಘಟನೆ ಆನೆಕಾಡು ಬಳಿಯ ಮೆಟ್ನಹಳ್ಳದಲ್ಲಿ ನಡೆದಿದೆ. ಒಂದು ಕಾರನ್ನು ತಳ್ಳಿಕೊಂಡು ಬಂದು ಹೆದ್ದಾರಿಗೆ ತಂದು ನಿಲ್ಲಿಸಿದೆ.
ಆನೆಕಾಡು ಬಳಿಯ ಮೆಟ್ನಹಳ್ಳ ಬಳಿ ಹೆದ್ದಾರಿ ಬದಿಯಲ್ಲಿ ಸಾನಿಪು ಅವರ ಸ್ವಿಫ್‌್ಟಹಾಗೂ ಶೇಖರ್ ಎಂಬವರಿಗೆ ಸೇರಿದ ಸ್ಯಾಂಟ್ರೋ ಕಾರುಗಳನ್ನು ನಿಲ್ಲಿಸಲಾಗಿತ್ತು. ಶನಿವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಹೆದ್ದಾರಿಯಲ್ಲಿ ಆಗಮಿಸಿದ ಕಾಡಾನೆ, ಸ್ಯಾಂಟ್ರೋ ಕಾರಿನ ಮೇಲೆ ದಾಳಿ ನಡೆಸಿತ್ತು. ನಂತರ ಸಾನಿಪು ಅವರ ಕಾರಿಗೆ ದಾಳಿ ಮಾಡಿ ಹೆದ್ದಾರಿ ವರೆಗೆ ತಳ್ಳಿಕೊಂಡು ಬಂದಿದೆ. ಬಳಿಕ ಕಾರನ್ನು ಅಲ್ಲಿಯೇ ಬಿಟ್ಟು ಕಾಡಾನೆ ಪರಾರಿಯಾಗಿದೆ. ಕಾರುಗಳು ಜಖಂಗೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.