Asianet Suvarna News Asianet Suvarna News

Davanagere: ಕಾಲೇಜು ಹುಡ್ಗೀರನ್ನ ಪೀಡಿಸುತ್ತಿದ್ದ ರೋಡ್‌ ರೋಮಿಯೋಗೆ ಚಪ್ಪಲಿ ಏಟು

ದಾವಣಗೆರೆಯಲ್ಲಿ ಕಾಲೇಜು ಹುಡುಗಿಯರಿಗೆ ಕರೆ ಮಾಡಿ ಪೀಡಿಸುತ್ತಿದ್ದ ರೋಡ್‌ ರೋಮಿಯೋಗೆ ಹುಡುಗಿ ಮನೆಯವರು ರಸ್ತೆ ನಡುವೆಯೇ ಚಪ್ಪಲಿ ಏಟು ಕೊಟ್ಟಿದ್ದಾರೆ.

Davanagere young man harassing college girls was slapped with footwear sat
Author
First Published Sep 19, 2023, 1:32 PM IST

ದಾವಣಗೆರೆ (ಸೆ.19): ದಾವಣಗೆರೆಯಲ್ಲಿ ಕಾಲೇಜು ಹುಡುಗಿಯರಿಗೆ ಕರೆ ಮಾಡಿ ಪೀಡಿಸುತ್ತಿದ್ದ ರೋಡ್‌ ರೋಮಿಯೋಗೆ ಹುಡುಗಿ ಮನೆಯವರು ರಸ್ತೆ ನಡುವೆಯೇ ಚಪ್ಪಲಿ ಏಟು ಕೊಟ್ಟಿದ್ದಾರೆ.

ಕಾಲೇಜು ಹುಡುಗಿಯರ ಹಿಂದೆ ರೋಡ್‌ ರೋಮಿಯೋಗಳು ಓಡಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ, ಕಿರುಕುಳ ನೀಡಿದರೆ ಮಾತ್ರ ಒದೆ ತಿನ್ನುವುದು ಕೂಡ ಖಚಿತವೆಂಬುದು ಗೊತ್ತಿರುವ ಮಾಹಿತಿಯೇ ಆಗಿದೆ. ಇಲ್ಲೊಬ್ಬ ರೋಡ್‌ ರೋಮಿಯೋ ಕಾಲೇಜು ಹುಡುಗಿಯರನ್ನು ರೇಗಿಸುವುದರ ಜೊತೆಗೆ, ಅವರ ಮೊಬೈಲ್‌ ನಂಬರ್‌ ಅನ್ನು ಹೇಗೋ ಪಡೆದುಕೊಂಡು ಕರೆ ಮಾಡಿ ಪೀಡಿಸುತ್ತಿದ್ದನು. ಇದರಿಂದ ಬೇಸತ್ತು ಕುಟುಂಬದವರಿಗೆ ತಿಳಿಸಿ ಯುವಕನನ್ನು ಕಾಲೇಜಿನ ಬಳಿ ಕರೆಸಿಕೊಂಡ ಯುವತಿ, ಆತನಿಗೆ ಎಲ್ಲರೆದುರು ಚಪ್ಪಲಿ ಏಟು ಕೊಟ್ಟಿದ್ದಾಳೆ.

ಅಭಿನವ ಹಾಲಶ್ರೀ ಸ್ವಾಮೀಜಿ ರೋಚಕ ಟ್ರಾವೆಲ್‌ ಹಿಸ್ಟರಿ: 4 ಹೊಸ ಮೊಬೈಲ್, 4 ಸಿಮ್‌ ಕಾರ್ಡ್‌, 50 ಲಕ್ಷ ರೂ. ಸಮೇತ ಪರಾರಿ

ಹುಡುಗಿಯರಿಗೆ ಪೋನ್‌ಮಾಡಿ ಕಾಡಿಸುತ್ತಿದ್ದ ರೋಮಿಯೋಗೆ ಸ್ವತಃ ಕಾಲೇಜು ಹುಡುಗಿಯರೇ ಚಪ್ಪಲಿ ಪೂಜೆ ಮಾಡಿದ್ದಾರೆ. ಕಾಲೇಜು ಮುಂಭಾಗದ ನಡು ರಸ್ತೆಯಲ್ಲಿ ಯುವತಿಯರ ಮನೆಯವರಿಂದ ಬಿತ್ತ ಚಪ್ಪಲಿ ಏಟು ಕೊಡಲಾಗಿದೆ. ಈ ಘಟನೆಯು ದಾವಣಗೆರೆಯ ಎವಿಕೆ ಕಾಲೇಜ್ ರಸ್ತೆಯಲ್ಲಿ ನಡೆದಿದೆ. ತ್ಯಾವಣಗಿ ಗ್ರಾಮದ ವಿನಯ್ ಚಪ್ಪಲಿ ಏಟು ತಿಂದ ಯುವಕನಾಗಿದ್ದಾನೆ. ಖಾಸಗಿ ಬಸ್ ಕಂಡಕ್ಟರ್ ಆಗಿದ್ದ ವಿನಯ್, ಮಾಯಕೊಂಡ ಬಳಿಯ ಗ್ರಾಮದ ಯುವತಿಯರಿಬ್ಬರಿಗೆ‌ ಕರೆ ಮಾಡಿ ಅಸಭ್ಯ ವರ್ತನೆ ತೋರಿಸುತ್ತಿದ್ದನು.

ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ

ಕಾಲೇಜಿಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯರುಗೆ ಪದೇ ಪದೇ ಪೋನ್ ಮಾಡಿ ತೊಂದರೆ ಕೊಡುತ್ತಿದ್ದ ವಿನಯ್ ಕಾಟದಿಂದ ಯುವತಿಯರು ಕೂಡ ರೋಸಿ ಹೋಗಿದ್ದರು. ನಂತರ, ಯುವತಿಯರು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉಪಾಯ ಮಾಡಿ ಎವಿಕೆ ಕಾಲೇಜು ರಸ್ತೆಗೆ ಕಿರುಕುಳ ನೀಡುತ್ತಿದ್ದ ವಿನಯ್‌ನನ್ನು ಕರೆಸಿಕೊಂಡಿದ್ದಾರೆ. ನಂತರ, ರೋಡ್‌ ರೋಮಿಯೋನನ್ನು ಹಿಡಿದು ನಡು ರಸ್ತೆಯಲ್ಲಿ ಚಪ್ಪಲಿ ಯಿಂದ‌ ಹಲ್ಲೆ ಮಾಡಲಾಗಿದೆ. ಚಪ್ಪಲಿಯಿಂದ ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾವಣಗೆರೆ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಘಟನೆ ನಡೆದಿದೆ.

Follow Us:
Download App:
  • android
  • ios