4 ಜಿಲ್ಲೆಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಕಿಂಗ್ ಪಿನ್‌ ಅರೆಸ್ಟ್, ಬೆಂಜ್ ಕಾರಲ್ಲಿ ಬರ್ತಿದ್ದ

* ನಾಲ್ಕು ಜಿಲ್ಲೆಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಕಿಂಗ್ ಪಿನ್‌ ಅರೆಸ್ಟ್ 
* ಐಜಿಪಿ ಮಟ್ಟದ 10 ಕ್ಕು ಹೆಚ್ಚು ಐಪಿಎಸ್ ಅಧಿಕಾರಿಗಳಿಗೆ ನೇರ ಸಂಪರ್ಕವಿರುವ ಇಮ್ರಾನ್ ಸಿದ್ಧಕಿ
* ಬೆಂಜ್ ಕಾರ್ ನಲ್ಲಿ ಬಂದು‌ ಮರಳು ವ್ಯಾಪರಗಳಿಂದ  ಹಣ ವಸೂಲಿ ಮಾಡುತ್ತಿದ್ದ ಆರೋಪಿ 

Davanagere Police Arrests illegal sand mining Kingpin rbj

ವರದಿ: ವರದರಾಜ್
ದಾವಣಗೆರೆ. (ಮೇ,03 ) : ದಾವಣಗೆರೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಅಕ್ರಮ‌ ಮರಳು ಗಣಿಗಾರಿಕೆಯ ರೂವಾರಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ  ಚಿತ್ರದುರ್ಗ ,ಹಾವೇರಿ ಶಿವಮೊಗ್ಗ  ಜಿಲ್ಲೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡಿ ಕೋಟಿ ಕೋಟಿ ಸಂಪಾದಿಸಿರುವ ಆರೋಪಿ ಅರೆಸ್ಟ್ ಆಗಿರುವುದು ಜನಸಾಮಾನ್ಯರಿಗಲ್ಲ ಪೊಲೀಸರಿಗೆ ಆಶ್ಚರ್ಯವಾಗಿದೆ.‌ಮೈಸೂರು ಮೂಲದ ಇಮ್ರಾನ್ ಸಿದ್ದಕ್ಕಿಯನ್ನು ದಾವಣಗೆರೆ ಡಿಸಿಆರ್ ಬಿ ಪೊಲೀಸ್ ಬಸವರಾಜ್ ನೇತೃತ್ವದ  ತಂಡ ಮೈಸೂರಿನಲ್ಲೇ  ಬಂಧಿಸಿ ಕರೆತಂದಿದೆ.ಆತನ ಬಂಧಿಸಿದ ಸಂದರ್ಭದಲ್ಲಿ ಸಿಕ್ಕ 75 ಲಕ್ಷ ರೂಗಳನ್ನು ದಾವಣಗೆರೆ ಪೊಲೀಸರು ಸೀಜ್ ಮಾಡಿದ್ದಾರೆ.... 

ಈ ಇಮ್ರಾನ್ ಸಿದ್ದಕ್ಕಿ ಯಾರು..?
ಇಮ್ರಾನ್ ಸಿದ್ದಕ್ಕಿ ಸದಾ ಬೆಂಜ್ ಕಾರಲ್ಲಿ ಓಡಾಡುವ, ಐಷಾರಾಮಿ ಜೀವನವನ್ನೇ ಮೆಟ್ಟಿನಿಂತಿರುವ ಹೈ ಪ್ರೊಪೈಲ್ ಹೊಂದಿರುವ ವ್ಯಕ್ತಿ. ವೈಟ್ ಕಾಲರ್ ಕ್ರೈಮ್ ನಲ್ಲಿ ಹೇಳಿ ಮಾಡಿಸಿದ ಬ್ರೋಕರ್. ಮೈಸೂರಿನಲ್ಲಿ ಸಣ್ಣ ಕಲ್ಲು ಕ್ರಷರ್ ನಿಂದ ಆರಂಭವಾದ ಇವನ ಗಣಿಗಾರಿಕೆ ವೃತ್ತಿ  ಅಕ್ರಮ ಮರಳು ಗಣಿಗಾರಿಕೆಯನ್ನೇ ಬಂಡವನ್ನಾಗಿ ಮಾಡಿಕೊಂಡು ಕೋಟಿ  ಕೋಟಿ ರೊಕ್ಕ ಗಳಿಸಿದ ಹೈನಾತಿ ಅಸಾಮಿ.  ಈತನ ವಾಸ ಮೈಸೂರು ಆದ್ರ ಈತನ ಬಿಸಿನೆಸ್ ಎಲ್ಲಾ ತುಂಗಾಭದ್ರಾ ನದಿ ತೀರದಲ್ಲೇ.. ಹಾಗಂತ ಈತ ಯಾವ ಮರಳು ಗಣಿಗಾರಿಕೆ‌ ಲೈಸನ್ಸ್ ಇಲ್ಲ‌.ಆದ್ರೆ ಅಕ್ರಮ‌ ಮರಳು ಗಣಿಗಾರಿಕೆ ಮಾಡುವವರ ಮೇಲೆ‌.. ಅಕ್ರಮ ಮರಳು ಗಣಿಗಾರಿಕೆ ಮಾಡುವುದರಲ್ಲಿ ಈತ ಎಕ್ಸಪರ್ಟ್..ಪೊಲೀಸ್, ಗಣಿಗಾರಿಕೆ ಇಲಾಖೆಗು ಕೇರ್ ಮಾಡದೇ ಅಕ್ರಮ‌‌‌ ಮರಳು ಗಣಿಗಾರಿಕೆ ಮಾಡುವುದರಲ್ಲಿ ಈತ ನಿಷ್ಣಾತ‌.‌ ಪೊಲೀಸರೇ ಹೇಳುವ ಪ್ರಕಾರ ಈತ ಬಲು ಪ್ರಭಾವಿ..

ಚಿಕ್ಕಮಗಳೂರು ಅಬಕಾರಿ ಅಧಿಕಾರಿಗಳ ಅಂಧ ದರ್ಬಾರ್ , ರೈತನ ಮೇಲೆ ಸುಳ್ಳು ಕೇಸ್ ಹಾಕಿದ್ರಾ?

ಅಕ್ರಮ‌‌ ಮರಳು ಗಣಿಗಾರಿಕೆ‌ ರೂವಾರಿ ಇಮ್ರಾನ್ ಸಿದ್ದಕ್ಕಿ‌ ಬಂಧಿಸಿದ್ದು ಯಾಕೆ....??
ದಾವಣಗೆರೆ  ನಗರದ ಮರಳು‌ ವ್ಯಾಪಾರಿ ಮುಬಾರಕ್ ಎಂಬುವನು  ದಾವಣಗೆರೆ‌‌ ನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದಾರೆ‌.ಕಾನೂನು ಬದ್ಧವಾಗಿ ಪರ್ಮಿಟ್ ಪಡೆದ ಮುಬಾರಕ್  ಮರಳು ವ್ಯಾಪಾರ ಮಾಡುತ್ತಿದ್ದ. ಆತನಿಗೆ ಹೆದರಿಸಿದ ಇಮ್ರಾನ್ ಸಿದ್ದಕ್ಕಿ ಆತನ ಸಹಚರರು  ನೀನು ಅಕ್ರಮವಾಗಿ ಮರಳು ದಂಧೆಯನ್ನು ಮಾಡುತ್ತಿದ್ದೀಯಾ ನಮಗೆ  ನೀನು ಪ್ರತಿ ತಿಂಗಳು 4 ಲಕ್ಷ ಹಣವನ್ನು ನೀಡು,  ಇಲ್ಲವಾದಲ್ಲಿ ನೀನು ಮರಳು ದಂಧೆಯನ್ನು ಹೇಗೆ ಮಾಡುತ್ತೀಯಾ ನೋಡೋಣ ಎಂದು  ಬೆದರಿಕೆ ಹಾಕಿ ಹಣ ಮಸೂಲಿ ಮಾಡಿಕೊಂಡಿರುತ್ತಾರೆ. ಒಂದು ಬಾರಿ 2 ಲಕ್ಷ  ಇನ್ನೊಂದು ಎರಡು ಲಕ್ಷ ಹಣವನ್ನು ನನ್ನ ಬಳಿ ಪಡೆದಿದ್ದಾರೆ ಎಂದು ಮುಬಾರಕ್  ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.  ದೂರನ್ನು ಆದರಿಸಿ ಎಸ್ ಪಿ ಸಿಬಿ  ರಿಷ್ಯಂತ್  ಮಾರ್ಗದರ್ಶನದಲ್ಲಿ   ತನಿಖೆ ನಡೆಸಿದ  ದಾವಣಗೆರೆ ಡಿಸಿಆರ್ ಬಿ ಪೊಲೀಸ್ ತಂಡ ಇಮ್ರಾನ್ ಸಿದ್ದಕ್ಕಿಯನ್ನು ಮೈಸೂರಿನಲ್ಲಿ ಬಂಧಿಸಿದೆ.  

ಇಮ್ರಾನ್ ನನ್ನು ಬಂಧಿಸಿದಾಗ ಸಿಕ್ತು ಕಂತೆ ಕಂತೆ ಹಣ
ದಾವಣಗೆರೆ ಪೊಲೀಸರು ಮೈಸೂರಿಗೆ ಹೋಗಿ ವಾರಗಟ್ಟಲೇ ಕಾದು  ಇಮ್ರಾನ್ ಸಿದ್ದಕ್ಕಿಯನ್ನು ಬಂಧಿಸಿದ್ದಾರೆ.  ಡಿಸಿಆರ್ ಬಿ ಪೊಲೀಸ್ ತಂಡಕ್ಕೆ ಮೊದಲಿಗೆ ಇಮ್ರಾನ್ ಮನೆಯಲ್ಲಿ ಸಿಕ್ಕಿದ್ದು  75 ಲಕ್ಷ  ಕಂತೆ ಕಂತೆ ನೋಟು.. ನಂತರ ಎರಡನೇ ಬಾರಿಗೆ ಭೇಟಿ ನೀಡಿ  ಪರಿಶೀಲಿಸಿದಾಗ ಸಿಕ್ಕಿದ್ದು 10 ಲಕ್ಷ ಹಣ. ಒಟ್ಟು 85 ಲಕ್ಷ ಹಣ ಕ್ಯಾಶ್ ಎರಡು ಮೊಬೈಲ್  ಈತನ ಮನೆಯಲ್ಲಿ ಸಿಕ್ಕಿದೆ.  ಇಮ್ರಾನ್ ಜೊತೆ ಚಿತ್ರದುರ್ಗ ಮೂಲದ ಆಶೋಕ್ ಆಲಿಯಾಸ್ ಜಿಮ್ಮಿಯನ್ನು ಬಂಧಿಸಿದ್ದು ಅವನ ಮನೆಯಿಂದ 70 ಸಾವಿರ ಹಣ ಜಪ್ತಿ ಮಾಡಲಾಗಿದೆ.. ಮುಬಾರಕ್  ನೀಡಿದ ದೂರಿನ ಪ್ರಕಾರ ಸದರಿ ಪ್ರಕರಣದಲ್ಲಿ ಐಪಿಸಿ  143/22 ಕಲಂ 420, 384, 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನ ಕೈಗೊಳ್ಳಲಾಗಿದೆ.  ಸಧ್ಯ ಡಿಸಿಆರ್ ಬಿ ಪೊಲೀಸರ ವಶದಲ್ಲಿರುವ ಇಮ್ರಾನ್ ಗೆ ಕೋರ್ಟ್ ಗೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.  

ಸದರಿ ಪ್ರಕರಣದಲ್ಲಿ ಶ್ರೀ.ಐ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ, ಶ್ರೀ ವಿಥುನ್ ಐಪಿಎಸ್  (ಪ್ರೊಬೆಷನರಿ), ಶ್ರೀ ಲಿಂಗನಗೌಡ ನೆಗಳೂರು, ಪಿಐ, ದಾವಣಗೆರೆ ಗ್ರಾಮಾಂತರ, ಹಾಗೂ ಡಿಸಿಆರ್‌ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಂ, ಅಂಜಿನಪ್ಪ ಎಎಸ್‌ಐ, ಕೆ.ಸಿ ಮಜೀದ್, ಕೆ.ಆಂಜನೇಯ, ಡಿ.ರಾಘವೇಂದ್ರ ಯು.ಮಾರುತಿ, ಪಿ.ಸುರೇಶ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಗುರುಶಾಂತಯ್ಯ, ಶ್ರೀ ಅರುಣಕುಮಾರ್, ಭಾಗಿಯಾಗಿರುತ್ತಾರೆ. ಇವರ ಕಾರ್ಯವನ್ನು ಶ್ರೀ ಸಿಬಿ ರಿಷ್ಯಂತ್ ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ದಾವಣಗೆರ ಹಾಗೂ ಹೆಚ್ಚುವರಿ ಎಸ್‌ಪಿ ದಾವಣಗೆರೆಯವರು ಶ್ಲಾಘಿಸಿರುತ್ತಾರೆ.

ಇಮ್ರಾನ್ ಸಿದ್ದಕ್ಕಿ ಗೆ ಹೈಪ್ರೋಪೈಲ್ ಆಪೀಸರ್ಸ್ ಡೈರಕ್ಟ್ ಲಿಂಕ್
ಇಮ್ರಾನ್ ಸಿದ್ದಕ್ಕಿ ಸಾದಾಸೀದಾ ಮರಳು ವ್ಯಾಪಾರಿ ಉದ್ಯಮಿ ಅಲ್ಲ. ಈತನ ಕಾಂಟೆಕ್ಟ್  ಏನಿದ್ರು ಹೈಲೆವಲ್. ಕನಿಷ್ಠ 25 ಕ್ಕು ಹೆಚ್ಚು ಐಪಿಎಸ್ ಅಧಿಕಾರಿಗಳ ಪೋನ್ ನಂಬರ್ ಇದ್ದು ಅವರ ಬಳಿ ಡೈರೆಕ್ಟ್ ಕಾಂಟೆಕ್ಟ್ ಇರುವ ವ್ಯಕ್ತಿ. ಒಂದು ಮೂಲದ ಪ್ರಕಾರ ಐಜಿಪಿ ಮಟ್ಟದ ಅಧಿಕಾರಿಗಳಿಗೆ ಇಮ್ರಾನ್ ಲಿಂಕ್ ಇದ್ದು ಅವರ ಕೃಪಾಕಟಾಕ್ಷದಿಂದ ಮರಳು ಅಡ್ಡೆಗಳಲ್ಲಿ ಡೀಲ್ ಮಾಡುತ್ತಿದ್ದ. ಅಕ್ರಮ ಮರಳು ದಂಧೆಯಲ್ಲಿ ಎಕ್ಸಪರ್ಟ್ ಆಗಿರುವ ಇಮ್ರಾನ್ ಮೇಲಾಧಿಕಾರಿಗಳಿಂದ ಕೆಳ ಹಂತದ ಅಧಿಕಾರಿಗಳಿಗೆ ಪೋನ್ ಹೊಡೆಸಿ ರಾತ್ರೋರಾತ್ರಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ.ಇದನ್ನು ಪ್ರಶ್ನಿಸಿದ ಪೊಲೀಸರಿಗೆ ಎತ್ತಂಗಡಿ.. ಇಲ್ಲವೇ ಟ್ರಾನ್ಸಪರ್  ಮಾಡಿಸಿ ತನ್ನ ವಿರುದ್ಧ ಯಾರು ಚಕಾರವೆತ್ತದ ಮಾಡುತ್ತಿದ್ದ. 

ಇಮ್ರಾನ್ ಸಿದ್ದಕ್ಕಿ ಮೇಲೆ ಇವೆ ಹಲವಾರು ಕೇಸ್ ಗಳು
ಇಮ್ರಾನ್ ಸಿದ್ದಕ್ಕಿ ಮೇಲೆ ಈ ಹಿಂದೆ ಅಕ್ರಮ ಮರಳು ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ಗಳಿವೆ. ಈ ಹಿಂದೆ  2019 ರಲ್ಲಿ ರಾಣೇಬೆನ್ನೂರು ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು ಅಲ್ಲಿ  ದಿಳ್ಯಪ್ಪ ತಂದೆ ರಾಮಪ್ಪ ಎಂಬುವರು ಇಮ್ರಾನ್ ಮೇಲೆ ಪ್ರಕರಣ ದಾಖಲಿಸಿದ್ದರು. ಕುದುರಿಹಾಳ್ ಗ್ರಾಮದ ಬಳಿ  ದಿಳ್ಯಪ್ಪ ಸಹಚರರು ಮಜ್ಡಾ ಲಾರಿ ತಡೆದರು ಎಂಬ ಕಾರಣಕ್ಕೆ  ದಿಳ್ಯಪ್ಪ ಸೇರಿದಂತೆ ನಾಲ್ವರಿಗೆ ಇಮ್ರಾನ್ ಕಡೆಯವರು  ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ದಿಳ್ಯಪ್ಪ ಮಾಡಿದ ಕೇಸ್ ಒಂದು ತಿಂಗಳಲ್ಲೇ ಬಿ ರಿಪೋರ್ಟ್ ಆಗಿದೆ. ಅಷ್ಟೇ ಅಲ್ಲದೇ ಹಲವರಿಗೆ ಉದ್ಯೋಗ ಕೊಡಿಸುವ , ಟ್ರಾನ್ಸಪರ್  ಮಾಡಿಸುವ ತಾಕತ್ತು ನನಗಿದೆ ಎಂದು ಜನರಿಗೆ ನಂಬಿಸಿದ್ದ.  

ಇಮ್ರಾನ್ ಸಿದ್ದಕ್ಕಿ ಶಾಸಕನಾಗಬೇಕೆಂಬ ಕನಸು ಕಂಡಿದ್ದ 
ಇಮ್ರಾನ್ ಹಾಸನ ಜಿಲ್ಲೆ ಸಕಲೇಶಪುರದಿಂದ ಯಾವುದಾದ್ರು ಪಕ್ಷದಲ್ಲಿ ಟಿಕೇಟ್ ಗಿಟ್ಟಿಸಿ ಶಾಸಕನಾಗಬೇಕೆಂಬ ತಯಾರಿ ನಡೆಸಿದ್ದ. ಟಿಕೇಟ್ ಗಾಗಿಯೇ ಐದು ಕೋಟಿ ಕೊಡುವುದಕ್ಕೆ ತಯಾರಾಗಿದ್ದ. ಹೈಲೆವಲ್ ಕಾಂಟೆಕ್ಟ್ ನ್ನೇ ಬಂಡವನ್ನಾಳವನ್ನಾಗಿ ಮಾಡಿಕೊಂಡು ರಾಜಕಾರಣಿಯಾಗಬೇಕೆಂಬ ಕನಸು ಕಂಡಿದ್ದ ಇಮ್ರಾನ್ ಗೆ ದಾವಣಗೆರೆ  ಗ್ರಾಮಾಂತರ ಪೊಲೀಸ್ ಠಾಣೆ  ಕೇಸ್  ಬ್ರೇಕ್ ಹಾಕಿದೆ.

Latest Videos
Follow Us:
Download App:
  • android
  • ios