ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕರೆತಂದು ಆತನ ಮೇಲೆ ಹಲ್ಲೆ ನಡೆಸುವ ವೇಳೆ, ನಟ ದರ್ಶನ್, ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಮೆಸೇಜ್‌ಗಳನ್ನು ಓದುತ್ತಾ, ಆತನ ಗುಪ್ತಾಂಗಕ್ಕೆ ಒದ್ದರು ಎಂದು  ತನಿಖಾಧಿಕಾರಿಗಳಿಗೆ ತಿಳಿಸಿದ ಆರೋಪಿ ಪವನ್

ಬೆಂಗಳೂರು(ಸೆ.10): ಪವಿತ್ರಾ ಗೌಡ ಅವರ ಸೋಗಿನಲ್ಲಿ ನಾನೇ ರೇಣುಕಾಸ್ವಾಮಿಗೆ ಚಾಟ್ ಮಾಡಿ ಹೆಸರು, ವಿಳಾಸ ತಿಳಿದುಕೊಂಡೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕರೆತಂದು ಆತನ ಮೇಲೆ ಹಲ್ಲೆ ನಡೆಸುವ ವೇಳೆ, ನಟ ದರ್ಶನ್, ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಮೆಸೇಜ್‌ಗಳನ್ನು ಓದುತ್ತಾ, ಆತನ ಗುಪ್ತಾಂಗಕ್ಕೆ ಒದ್ದರು ಎಂದು ಆರೋಪಿ ಪವನ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. 

ಪವನ್ ಸ್ವಇಚ್ಛಾ ಹೇಳಿಕೆ: 

ಪವಿತ್ರಾ ಅಕ್ಕ ಜೂ. 5ರಂದು ಅಳುತ್ತಿರುವಾಗ ಏಕೆ ಅಳುತ್ತಿದ್ದೀರಾ ಎಂದು ಕೇಳಿದೆ. ಆಗ ಅವರ ಐಫೋನ್ ಕೊಟ್ಟು ಇನ್ಸ್‌ಸ್ಟಾಗ್ರಾಮ್ ಮೆಸೇಜ್‌ಗಳನ್ನು ನೋಡು ವಂತೆ ಹೇಳಿದರು. ಗೌತಮ್ ಎಂಬ ಖಾತೆಯಿಂದ ಹೇ ಬ್ಯೂಟಿ, ನಿನ್ನ ರೇಟ್ ಎಷ್ಟು, ನಿನ್ನ ನಂಬರ್ ಹೇಳು ಇತ್ಯಾದಿ ಅಶ್ಲೀಲ ಮೆಸೇಜ್ ಮಾಡಿರುವುದು ಕಂಡು ಬಂದಿತು. ಪವಿತ್ರಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಫೋನ್ ನಂಬರ್ ಕಳುಹಿಸಿದೆ. 

ಖಾಸಗಿ ವಿಡಿಯೋ ಮುಂದಿಟ್ಟು ದರ್ಶನ್‌ಗೆ ಪವಿತ್ರಾ ಬ್ಲಾಕ್‌ಮೇಲ್, ಪತ್ನಿ ವಿಜಯಲಕ್ಷ್ಮಿಯಿಂದ ರಹಸ್ಯ ಬಯಲು!

ತಕ್ಷಣ ಆ ಕಡೆಯಿಂದ ಕರೆ ಬಂದಿತು. ಈ ವೇಳೆ ಲೌಡ್ ಸ್ಪೀಕರ್ ಹಾಕಿ ಪವಿತ್ರಾರಿಂದ ನಾಟಕದ ಪ್ರೀತಿ ಮಾತುಗಳನ್ನಾಡಿಸಿದೆ. ಬಳಿಕ ಆತನನ್ನು ಹುಡುಕಿ ಕರೆತರಲು ದರ್ಶನ್ ಹೇಳಿದರು. ಶೆಡ್‌ನಲ್ಲಿ ನಾನು, ದರ್ಶನ್, ಪವಿತ್ರಾ ಸೇರಿ ಎಲ್ಲರೂ ಹಲ್ಲೆ ಮಾಡಿದೆವು.