Asianet Suvarna News Asianet Suvarna News

ಸಿಲಿಂಡರ್ ಶೇಖರಿಸಿದ್ದ ಕೊಠಡಿಯಲ್ಲಿ ಸರಣಿ ಸ್ಪೋಟ; ಸ್ಫೋಟದ ಭೀಕರತೆಗೆ ಬೆಚ್ಚಿಬಿದ್ದ ಜನರು!

ಸಿಲಿಂಡರ್ ಶೇಖರಿಸಿಟ್ಟಿದ್ದ ಸಣ್ಣ ಕೊಠಡಿಗಳಲ್ಲಿ ಏಕಾಏಕಿ ಸ್ಫೋಟಗೊಂಡ ಘಟನೆ ಬೆಂಗಳೂರಿನ ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ನಡೆದಿದ್ದು, ಸ್ಫೋಟದ ತೀವ್ರತೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

Cylinder explosion incident in Bangalore KRpur rav
Author
First Published Apr 2, 2024, 11:28 PM IST

ಕೆಆರ್ ಪುರ (ಏ.2): ಸಿಲಿಂಡರ್ ಶೇಖರಿಸಿಟ್ಟಿದ್ದ ಸಣ್ಣ ಕೊಠಡಿಗಳಲ್ಲಿ ಏಕಾಏಕಿ ಸ್ಫೋಟಗೊಂಡ ಘಟನೆ ಬೆಂಗಳೂರಿನ ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ನಡೆದಿದ್ದು, ಸ್ಫೋಟದ ತೀವ್ರತೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಮುನಿಸ್ವಾಮಪ್ಪ ಎಂಬುವವರಿಗೆ ಸೇರಿದ ಜಾಗದಲ್ಲಿ ಶಿವಣ್ಣ ಎಂಬುವವರು ಆರಂಭಿಸಿದ್ದ ಸಿಲಿಂಡರ್ ಸರ್ವಿಸ್. ಕೊಠಡಿಯಲ್ಲಿ ಹತ್ತಕ್ಕೂ ವಿವಿಧ ಕಂಪನಿಗಳ ಸಿಲಿಂಡರ್ ಶೇಖರಣೆ ಮಾಡಲಾಗಿತ್ತು. ಯಾವುದೇ ಪರವಾನಗಿ ಇಲ್ಲದೆ ವಿವಿಧ ಕಂಪನಿಗಳ ಸಿಲಿಂಡರ್ ಶೇಖರಣೆ ಮಾಡಲಾಗಿತ್ತು. ಆದರೆ ಏಕಾಏಕಿ ಸ್ಫೋಟಗೊಂಡು ಸ್ಫೋಟದ ಭೀಕರತೆ ಆಕಾಶಕ್ಕೆ ಹಾರಿ ಸಿಲಿಂಡರ್‌ಗಳು. ಭಾರೀ ಶಬ್ದಕ್ಕೆ ಅಕ್ಕಪಕ್ಕದ ಜನ ಬೆಚ್ಚಿಬಿದ್ದು ಓಡಿದ್ದಾರೆ. ಈ ಘಟನೆಯಲ್ಲಿ ಓರ್ವನಿಗೆ ಸಣ್ಣಪುಟ್ಟ ಗಾಯವಾಗಿದೆ.

ವಿಜಯಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ನಾಲ್ವರು ಗಂಭೀರ ಗಾಯ!
.
ಅಕ್ರಮವಾಗಿ ಸಿಲಿಂಡರ್ ಗಳ ಶೇಖರಿಸಿದ ಮಾಲೀಕ

ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯದೆ ಸಿಲಿಂಡರ್ ಗಳ ಶೇಖರಣೆ ಮಾಡಿರುವ ಮಾಲೀಕ. ಅಕ್ರಮವಾಗಿ ಸಿಲಿಂಡರ್ ಗಳ ರಿಫೀಲಿಂಗ್ ಮಾಡುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಬುಧವಾರವಷ್ಟೇ ಆರಂಭಿಸಿದ ಸಿಲಿಂಡರ್ ಗೋಡೋನ್. ಹೋಟೆಲ್ ಮಾಡುವ ಉದ್ದೇಶದಿಂದ ಜಾಗ ಪಡೆದು , ಅಕ್ರಮ ಗ್ಯಾಸ್ ರಿಫೀಲಿಂಗ್ ಮಾಡುತ್ತಿದ್ದ ಮಾಲೀಕ. ಆವಲಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ 

Follow Us:
Download App:
  • android
  • ios