ವರ್ಕೌಟ್ ಮುಗಿಸಿ ಫಿಟ್‌ನೆಸ್ ಸೆಂಟರ್‌ನ ಬಾತ್‌ ರೂಂನಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ಕೋಚ್‌ ಮೊಬೈಲ್‌ನಲ್ಲಿ ಸೆರೆಹಿಡಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎನ್ಆರ್ ಐ ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರು (ನ.9): ವರ್ಕೌಟ್ ಮುಗಿಸಿ ಫಿಟ್‌ನೆಸ್ ಸೆಂಟರ್‌ನ ಬಾತ್‌ ರೂಂನಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ಕೋಚ್‌ ಮೊಬೈಲ್‌ನಲ್ಲಿ ಸೆರೆಹಿಡಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎನ್ಆರ್ ಐ ಲೇಔಟ್‌ನಲ್ಲಿ ನಡೆದಿದೆ.

ಸಿಬಿಚಾನ್ ಕೆ.ಎಸ್ ಬಂಧಿತ ಆರೋಪಿ. ರಾಮಮೂರ್ತಿನಗರಲ್ಲಿರುವ ಕಲ್ಟ್ ಫಿಟ್ ನೆಸ್ ಸೆಂಟರ್‌ನಲ್ಲಿ ಬ್ಯಾಡ್ಮಿಂಟನ್ ಹಾಗೂ ಸ್ವಿಮ್ಮಿಂಗ್ ಕೋಚ್ ಗೆ ಸೇರಿದ್ದ ಸಂತ್ರಸ್ಥೆ. ಕೋಚ್‌ ಪಡೆಯುತ್ತಿದ್ದ ಮಹಿಳೆಗೆ ಸಿಬಿಚಾನ್ ಕೆ.ಎಸ್ ಕೋಚ್ ಆಗಿದ್ದ. ಕಳೆದ ಭಾನುವಾರ ಸ್ವಿಮ್ಮಿಂಗ್ ಮುಗಿಸಿ ಬಾತ್ ರೂಂಗೆ ಸ್ನಾನಕ್ಕೆ ತೆರಳಿದ್ರು. ಈ ವೇಳೆ ಯುವತಿ ಸ್ನಾನ ಮಾಡಬೇಕಾದರೆ ಕಾಮುಕ ಕೋಚ್ ಕಿಟಕಿಯಿಂದ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದ. ಆಕೆ ಹೊರಗೆ ಬಂದಾಗ, ಅಲ್ಲಿ ಯಾರೂ ಇಲ್ಲದೇ ಇರೋದ್ರಿಂದ ಅನುಮಾನಗೊಂಡು ಘಟನೆ ಬಗ್ಗೆ ಜಿಮ್ ಮ್ಯಾನೇಜರ್‌ ದೀಪಕ್‌ಗೆ ದೂರು ನೀಡಿದ್ದಳು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ.

ಬೆಂಗಳೂರು: ವಿಲಾಸಿ ಜೀವನಕ್ಕೆ ಮನೆಗಳವು ಮಾಡುತ್ತಿದ್ದ ಕಳ್ಳ ಜೈಲು ಪಾಲು

ಬಳಿಕ ಯುವತಿ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರು.