Asianet Suvarna News Asianet Suvarna News

ಸಿಸಿಬಿ ಪೊಲೀಸರೆಂದು ಹೇಳಿಕೊಂಡು ಶೂ ವ್ಯಾಪಾರಿ 10 ಲಕ್ಷ ದರೋಡೆ

ಸಿಸಿಬಿ ಪೊಲೀಸರ ಸೋಗಿನಲ್ಲಿ ನಾಲ್ವರು ದುಷ್ಕರ್ಮಿಗಳು ಶೂ ವ್ಯಾಪಾರಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ .10 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

culprits robbed 10 laksh from shoe dealer at sirsi circle at Banglore akb
Author
First Published Jan 16, 2023, 10:29 AM IST

ಬೆಂಗಳೂರು:  ಸಿಸಿಬಿ ಪೊಲೀಸರ ಸೋಗಿನಲ್ಲಿ ನಾಲ್ವರು ದುಷ್ಕರ್ಮಿಗಳು ಶೂ ವ್ಯಾಪಾರಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ .10 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಕಾಟನ್‌ಪೇಟೆ ಪೊಲೀಸ್‌ ರಸ್ತೆ ನಿವಾಸಿ ಮೂಲರಾಮ್‌(37) ಹಣ ಕಳೆದುಕೊಂಡಿದ್ದಾರೆ. ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿ ಜ.13ರಂದು ರಾತ್ರಿ 7.45ರ ಸಮಾರಿಗೆ ಈ ಘಟನೆ ನಡೆದಿದೆ. ದರೋಡೆಗೆ ಒಳಗಾದ ಮೂಲರಾಮ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಭಾರತ (North India) ಮೂಲದ ಮೂಲರಾಮ್‌ (Mularam) ಹಲವು ವರ್ಷಗಳಿಂದ ನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮನವರ್ತಪೇಟೆಯಲ್ಲಿ 'ಮೆಟ್ರೋ ಶೂ ಏಜೆನ್ಸಿ' ಹೆಸರಿನ ಅಂಗಡಿ ತೆರೆದಿದ್ದಾರೆ. ಮೂಲರಾಮ್‌ ಅವರ ಪಕ್ಕದ ಊರಿನ ರಮೇಶ್‌ (Ramesh) ಎಂಬುವವರು ನಗರದಲ್ಲಿ ಬಟ್ಟೆವ್ಯಾಪಾರ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮೂಲರಾಮ್‌ ಸೇರಿದಂತೆ ಪರಿಚಿತ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಡ್ಡಿಗೆ ಹಣ ನೀಡುತ್ತಾರೆ. ಅವರು ನೀಡಿದ ಹಣವನ್ನು ಮೂಲರಾಮ್‌ ಸಂಗ್ರಹಿಸಿ ವಾಪಾಸ್‌ ನೀಡುತ್ತಿದ್ದರು.

ಬೆಂಗ್ಳೂರಲ್ಲಿ ದರೋಡೆ: 4 ಉಗ್ರರಿಗೆ 7 ವರ್ಷ ಜೈಲು

ಬ್ಲೇಡ್‌ನಿಂದ ಕೈಗಳಿಗೆ ಹಲ್ಲೆ:

ಅದರಂತೆ ರಮೇಶ್‌ ಜ.13ರಂದು ಸಂಜೆ 4.30ಕ್ಕೆ ಮೂಲರಾಮ್‌ಗೆ ಕರೆ ಮಾಡಿ ಕೆಲವು ವ್ಯಾಪಾರಿಗಳಿಂದ ಹಣ ಸಂಗ್ರಹಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ಮೂಲರಾಮ್‌ ಕೆಲ ವ್ಯಾಪಾರಿಗಳಿಂದ ಒಟ್ಟು 10 ಲಕ್ಷ ಸಂಗ್ರಹಿಸಿ ಅದನ್ನು ರಮೇಶ್‌ಗೆ ತಲುಪಿಸಲು ಬ್ಯಾಗ್‌ನಲ್ಲಿ ಹಣ ಇರಿಸಿಕೊಂಡು ಸಂಜೆ 7.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್‌ ಬಳಿ ಹೋಗುತ್ತಿದ್ದರು. ಹಿಂದಿನಿಂದ ಎರಡು ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ದುಷ್ಕರ್ಮಿಗಳು, ನಾವು ಸಿಸಿಬಿ ಪೊಲೀಸರು, ದ್ವಿಚಕ್ರ ವಾಹನ ನಿಲ್ಲಿಸು ಎಂದು ಅಡ್ಡಹಾಕಿದ್ದಾರೆ. ಮೂಲರಾಮ್‌ನಿಂದ ಹಣವಿದ್ದ ಬ್ಯಾಗ್‌ ಕಸಿದುಕೊಂಡಿದ್ದಾರೆ. ಮತ್ತಿಬ್ಬರು ದುಷ್ಕರ್ಮಿಗಳು ಮೂಲರಾಮ್‌ ಕುತ್ತಿಗೆಗೆ ಕೈನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬ್ಲೇಡ್‌ನಿಂದ ಮೂಲರಾಮ್‌ಗೆ ಕೈಗಳನ್ನು ಕೊಯ್ದು ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Follow Us:
Download App:
  • android
  • ios