ಮಂಗಳೂರು: ಸಿಎಸ್‌ಐ ಬಿಷಪ್ ಕಾರ್ಯದರ್ಶಿಗೆ ಲೈಂಗಿಕ ಕಿರುಕುಳ ಆರೋಪ
ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯಲ್ಲಿ ಬಿಷಪ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಸಂಸ್ಥೆಯ ಖಜಾಂಜಿ ಹಾಗೂ ಕಾನೂನು ಸಲಹೆಗಾರ ವಿರುದ್ಧ ಲೈಂಗಿಕ, ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ನಗರದ ಮಹಿಳಾ ಪೋಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.
ಮಂಗಳೂರು ಮಾ.9): ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯಲ್ಲಿ ಬಿಷಪ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಸಂಸ್ಥೆಯ ಖಜಾಂಜಿ ಹಾಗೂ ಕಾನೂನು ಸಲಹೆಗಾರ ವಿರುದ್ಧ ಲೈಂಗಿಕ, ಮಾನಸಿಕ ಕಿರುಕುಳ(Mental harassment)ದ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ನಗರದ ಮಹಿಳಾ ಪೋಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ಸಂಸ್ಥೆಯಲ್ಲಿ ಕಾಯಂ ಉದ್ಯೋಗಿಯಾಗಿದ್ದೇನೆ. ಈ ಹಿಂದಿನ ಬಿಷಪ್ ನಿವೃತ್ತರಾದ ಬಳಿಕ ಸಿಎಸ್‌ಐ(Mangaluru CSI) ಸಭಾಪ್ರಾಂತ್ಯದಲ್ಲಿ ಕೆಲ ಕಾಲ ಬಿಷಪ್ ಇರಲಿಲ್ಲ. ಆಗ ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರರು ವಿವಿಧ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ಎಂದು ಮಹಿಳೆ ಆರೋಪಿಸಿದ್ದಾರೆ.
3 ದಿನಗಳ ಕಾಲ ಅರಣ್ಯದಲ್ಲಿಎಲೆಗಳನ್ನೇ ತಿಂದು ಬದುಕಿದ ಐಸಮ್ಮ!
ಕಳೆದ 9 ತಿಂಗಳುಗಳಿಂದ ವೇತನವನ್ನು ತಡೆ ಹಿಡಿದಿದ್ದಾರೆ. ನಾನು ಕರ್ತವ್ಯ ನಿರ್ವಹಿಸುವ ಕೊಠಡಿಗೆ ಬೀಗ ಹಾಕಿ 6 ತಿಂಗಳುಗಳಿಂದ ಉದ್ಯೋಗದಿಂದ ತೆಗೆಯುವ ಹುನ್ನಾರ ನಡೆಸಿದ್ದಾರೆ. ಅಲ್ಲದೆ, ಅಪಪ್ರಚಾರ ಮಾಡಿ ಚಾರಿತ್ರ್ಯವಧೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಇದುವರೆಗೆ ಸುಮ್ಮನಿದ್ದೆ. ಈಗ ಒಡನಾಡಿ ಸಂಸ್ಥೆಯವರು ಸ್ಥೆ ೖರ್ಯ ತುಂಬಿದ್ದರಿಂದ ಈ ಬಗ್ಗೆ ದೂರು ನೀಡಿರುವುದಾಗಿ ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಸ್ಥೆಯ ಖಜಾಂಚಿ 2017ರ ಅಕ್ಟೋಬರ್‌ನಿಂದಲೂ ಕಿರುಕುಳ ನೀಡಲಾರಂಭಿಸಿದ್ದರು. ಕೆಲವು ಆಪ್ತ ವ್ಯಕ್ತಿಗಳ ಮೂಲಕ ಫೋನು ಮಾಡಿಸಿ ‘ಖಜಾಂಚಿ ಜೊತೆಗೆ ದೈಹಿಕ ಸುಖ ನೀಡಲು ಒಪ್ಪಿದರೆ ಉದ್ಯೋಗದ ಸಲುವಾಗಿ ಸಮಸ್ಯೆ ಇರುವುದಿಲ್ಲ. ಅವನ ಜೊತೆ ಹೊಂದಾಣಿಕೆ ಮಾಡಿಕೊಳ್ಳು’ ಎಂದು ಹೇಳಿಸಿದ್ದರು. ಮಾತ್ರವಲ್ಲದೆ, ಲೈಂಗಿಕ ಕಿರುಕುಳವನ್ನೂ ನೀಡಿದ್ದರು. ಕಾನೂನು ಸಲಹೆಗಾರರು ಕಚೇರಿಯಲ್ಲಿ ನನ್ನ ಕೌಂಟರ್ ಎದುರು ನಿಂತು ಸೆP್ಸ… ವಿಡಿಯೊ ನೋಡುತ್ತಿದ್ದುದಲ್ಲದೆ, ಹಲವಾರು ಬಾರಿ ನನಗೂ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು. ಈ ಬಗ್ಗೆ ಬಿಷಪ್ ಅವರಿಗೂ ದೂರು ನೀಡಿದ್ದೆ. ಅವರು ನನ್ನ ನೆರವಿಗೆ ಬಂದಿಲ್ಲ. ಚೆನ್ನೆ ೖಗೆ ಹೋಗಿ ಮಾಡರೇಟ್ ಕಮಿಟಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳೆ ದೂರಿದರು.
ಮಗುವಿಗೆ ಲೈಂಗಿಕ ಹಲ್ಲೆ: ಆರೋಪಿಗೆ ಮೂರು ವರ್ಷ ಕಠಿಣ ಸಜೆ
ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿಗೆ ಮಂಗಳೂರಿನ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ. ಮರೋಳಿಯ ವಿನೋದ್(Vinod Maroli) (46) ಶಿಕ್ಷೆಗೊಳಗಾದವನು.
2017ರ ಮೇನಲ್ಲಿ ಹೆತ್ತವರು ಕೆಲಸಕ್ಕೆಂದು ಹೋಗುವಾಗ ಅವರ ಮಗುವನ್ನು ನೆರೆಮನೆಯಲ್ಲಿ ಬಿಟ್ಟು ಹೋಗಿದ್ದರು. ಇದೇ ಪರಿಸರದವನಾದ ವಿನೋದ್, ಮಗುವನ್ನು ಆತನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ಹಲ್ಲೆ ನಡೆಸಿದ್ದ. ಮಗು ಬೊಬ್ಬೆ ಹಾಕಿದಾಗ ನೆರೆಮನೆಯವರು ಓಡಿಬಂದಿದ್ದರು. ಆಗ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪ್ರಾಪ್ತರಿಗೆ 'ಬಾ ಬಾ' ಎಂದು ಕರೆಯುವುದು ಲೈಂಗಿಕ ಕಿರುಕುಳ: ನ್ಯಾಯಾಲಯ
ಇನ್‌ಸ್ಪೆಕ್ಟರ್ ರವಿ ನಾಯ್ಕ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್ಸಿ 2 (ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು, ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿದರು. ಪೊಕ್ಸೋ ಕಲಂ 8ರಡಿ 3 ವರ್ಷ ಕಠಿಣ ಸಜೆ ಹಾಗೂ 50,000 ರು. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳ ಕಠಿಣ ಸಜೆ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದಾರೆ.